BWF World Championships: 3ನೇ ಬಾರಿ ಫೈನಲ್​ಗೆ; ದಾಖಲೆಯ ಹೊಸ್ತಿಲಲ್ಲಿ ಪಿ.ವಿ. ಸಿಂಧು

ಪಂದ್ಯ ಶುರುವಾದಾಗಿನಿಂದಲೇ ಮುನ್ನಡೆ ಸಾಧಿಸುತ್ತ ಹೋದ ಸಿಂಧು ಮೊದಲ ವಿರಾಮದ ವೇಳೆ 11-3ರ ಮುನ್ನಡೆಯಲ್ಲಿದ್ದರು. ದ್ವಿತೀಯ ಸುತ್ತಿನಲ್ಲೂ ಇದೇ ಆಟ ಮುಂದುವರೆಸಿದ ಸಿಂಧು ಅಂತಿಮವಾಗಿ ಚೆನ್‌ ಯು ಫೀ ವಿರುದ್ಧ ಗೆದ್ದು ಬೀಗಿದರು.

ಪಿ.ವಿ. ಸಿಂಧು

ಪಿ.ವಿ. ಸಿಂಧು

  • News18
  • Last Updated :
  • Share this:
ಬೆಂಗಳೂರು (ಆ. 25): ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಬಿ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ. ಶನಿವಾರ ನಡೆದ ಸೆಮಿಫೈನಲ್‌ ಕದನದಲ್ಲಿ ಚೀನದ ಚೆನ್‌ ಯು ಫೀ ವಿರುದ್ಧ ಕೇವಲ 40 ನಿಮಿಷಗಳಲ್ಲಿ 21-7, 21-14 ಅಂತರದ ಸುಲಭ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತನ್ನು ಪ್ರವೇಶಿಸಿದ್ದಾರೆ.

ಸಿಂಧು ಫೈನಲ್‌ನಲ್ಲಿ ವಿಜಯ ಸಾಧಿಸಿದರೆ ಈ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ದಾಖಲೆ ಬರೆಯಲಿದ್ದಾರೆ. ಇದು ಸಿಂಧು ಅವರ ಸತತ 3ನೇ ಫೈನಲ್‌ ಆಗಿದ್ದು, ಹಿಂದಿನೆರಡೂ ಕೂಟಗಳಲ್ಲಿ ಪ್ರಶಸ್ತಿ ವಂಚಿತರಾಗಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದರು. ಸದ್ಯ 3ನೇ ಬಾರಿಗೆ ಫೈನಲ್‌ ಪ್ರವೇಶಿಸಿದ ವಿಶ್ವದ ಮೊದಲ ಆಟಗಾರ್ತಿಯೆನ್ನುವ ಹೆಗ್ಗಳಿಕೆಯನ್ನು ಸಿಂಧು ತಮ್ಮದಾಗಿಸಿಕೊಂಡಿದ್ದಾರೆ.

ಚೆನ್‌ ವಿರುದ್ಧ 5-3ರ ಗೆಲುವಿನ ದಾಖಲೆ ಹೊಂದಿನ ಪಿ.ವಿ. ಸಿಂಧು, ಸೆಮಿಫೈನಲ್‌ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದರು. ಇದನ್ನು ಹುಸಿಗೊಳಿಸಿದ ಸಿಂಧು ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದರು.

IND vs WI: ರಹಾನೆ-ಕೊಹ್ಲಿ ಆಸರೆ; ಉತ್ತಮ ಮುನ್ನಡೆಯತ್ತ ಟೀಂ ಇಂಡಿಯಾ

 



ಪಂದ್ಯ ಶುರುವಾದಾಗಿನಿಂದಲೇ ಮುನ್ನಡೆ ಸಾಧಿಸುತ್ತ ಹೋದ ಸಿಂಧು ಮೊದಲ ವಿರಾಮದ ವೇಳೆ 11-3ರ ಮುನ್ನಡೆಯಲ್ಲಿದ್ದರು. ದ್ವಿತೀಯ ಸುತ್ತಿನಲ್ಲೂ ಇದೇ ಆಟ ಮುಂದುವರೆಸಿದ ಸಿಂಧು ಅಂತಿಮವಾಗಿ ಚೆನ್‌ ಯು ಫೀ ವಿರುದ್ಧ ಗೆದ್ದು ಬೀಗಿದರು.

ಇನ್ನು ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಸಾಯಿ ಪ್ರಣೀತ್‌ ಸೋಲನುಭವಿಸಿದ್ದು ಕೂಟದಿಂದ ನಿರ್ಗಮಿಸಿದ್ದಾರೆ. ಜಪಾನಿನ ಕೆಂಟೊ ಮೊಮೊಟ 21-13, 21-8 ರಿಂದ ಪ್ರಣೀತ್​​ರನ್ನು ಸುಲಭದಲ್ಲಿ ಮಣಿಸಿದರು. ಆದರೂ ಪ್ರಣೀತ್‌ ಕಂಚಿನ ಪದಕ ತಮ್ಮದಾಗಿಸಿದರು.

ಭಾರತದ ದಂತಕತೆ ಪ್ರಕಾಶ್​ಪಡುಕೋಣೆ ಅವರು 1983ರ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ​ ಎನಿಸಿದ್ದರು. ಸದ್ಯ 26 ವರ್ಷಗಳ ನಂತರ ಭಾರತಕ್ಕೆ ಒಲಿದ ಮೊದಲ ಪದಕ ಇದಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ
First published: