ಕಾಂಗರೂಗಳ ನಾಡಲ್ಲಿ ಕಾಡ್ಗಿಚ್ಚಿನಿಂದ ಅಪಾರ ಹಾನಿ ಸಂಭವಿಸಿದೆ. ಇಲ್ಲಿನ ನಿರಾಶ್ರಿತರಿಗೆ ನೆರವಾಗಲು ಕ್ರಿಕೆಟಿಗರು ಮುಂದಾಗಿದ್ದು, ಬುಷ್‌ಫೈರ್ ಬ್ಯಾಷ್ ಎಂಬ ಟಿ-10 ಕ್ರಿಕೆಟ್ ಮ್ಯಾಚ್ ಆಡುವ ಮೂಲಕ ಸಂತ್ರಸ್ಥರಿಗೆ ನೆರವಿನ ಹಸ್ತ ಚಾಚಿದ್ದಾರೆ.
ಇಂದು ನಡೆದ ಈ ಪಂದ್ಯದಲ್ಲಿ ರಿಕಿ ಪಾಂಟಿಂಗ್ ಇಲೆವೆನ್ ಹಾಗೂ ಆ್ಯಡಂ ಗಿಲ್ಕ್ರಿಸ್ಟ್ ಇಲೆವೆನ್ ತಂಡ ಮುಖಾಮುಖಿ ಆಗಿತ್ತು. ಮೊದಲು ಬ್ಯಾಟ್ ಮಾಡಿದ ಪಾಂಟಿಂಗ್ ತಂಡ 10 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 104 ರನ್ ಚಚ್ಚಿತು. ಬ್ರಿಯಾನ್ ಲಾರ್ ಕೇವಲ 11 ಎಸೆತಗಳಲ್ಲಿ 30 ರನ್ ಬಾರಿಸಿದರೆ, ನಾಯಕ ಪಾಂಟಿಂಗ್ 14 ಎಸೆತಗಳಲ್ಲಿ 26 ರನ್ ಗಳಿಸಿದರು.
Ponting XI defeated Gilchrist XI by 1️⃣ run!
But most importantly, what an entertaining game of cricket that was for a good cause 😍 #BigAppeal pic.twitter.com/wE2ItGpxlP
— ICC (@ICC) February 9, 2020
105 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಗಿಲ್ಕ್ರಿಸ್ಟ್ ತಂಡ 10 ಓವರ್ನಲ್ಲಿ 6 ವಿಕೆಟ್ ಕಳೆದುಕೊಂಡು 103 ಬಾರಿಸಿತು. ಪಾಂಟಿಂಗ್ ತಂಡ 1 ರನ್ಗಳ ರೋಚಕ ಗೆಲುವು ಸಾಧಿಸಿತು. ಗಿಲ್ಕ್ರಿಸ್ಟ್ ತಂಡದ ಪರ ಶೇನ್ ವಾಟ್ಸನ್ ಕೇವಲ 9 ಎಸೆತಗಳಲ್ಲಿ 30 ರನ್ ಚಚ್ಚಿದರೆ, ಆ್ಯಂಡ್ರೊ ಸೈಮಂಡ್ಸ್ 13 ಎಸೆತಗಳಲ್ಲಿ 29 ರನ್ ಸಿಡಿಸಿದರು.
ಈ ನಡುವೆ ಟಾರ್ಗೆಟ್ ಬೆನ್ನಟ್ಟಲು ಬಂದ ಗಿಲ್ಕ್ರಿಸ್ಟ್ ಹಾಗೂ ಶೇನ್ ವಾಟ್ಸನ್ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿದರು. ಕೇವಲ 3 ಓವರ್ನಲ್ಲೇ 49 ರನ್ ಬಾರಿಸಿದರು. ಅದರಲ್ಲು 48 ವರ್ಷ ಪ್ರಾಯದ ಆ್ಯಡಂ ಗಿಲ್ಕ್ರಿಸ್ಟ್ ಅವರು 43 ವರ್ಷದ ಬ್ರೆಟ್ ಲೀ ಅವರ ಮೊದಲ ಎಸೆತದಲ್ಲೇ ಚೆಂಡನ್ನು ಸಿಕ್ಸ್ಗೆ ಅಟ್ಟಿದರು. ಶಾರ್ಟ್ ಬಾಲ್ಗೆ ಡೀಪ್ ಮಿಡ್ ವಿಕೆಟ್ನಲ್ಲಿ ಗಿಲ್ಕ್ರಿಸ್ಟ್ ಅದ್ಭುತವಾಗಿ ಸಿಕ್ಸ್ ಬಾರಿಸಿದ್ದು ಕಂಡು ಒಮ್ಮೆ ಎಲ್ಲರೂ ಶಾಕ್ ಆದರು. ಈ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.
48 year old Gilchrist casually hitting Brett Lee for six. #BushfireCricketBashpic.twitter.com/T4IYNk6M8T
— Trendulkar (@Trendulkar) February 9, 2020
ಇನ್ನು ಈ ಪಂದ್ಯದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಇನ್ನಿಂಗ್ಸ್ ಬ್ರೇಕ್ ವೇಳೆ ಒಂದು ಓವರ್ ಬ್ಯಾಟಿಂಗ್ ಮಾಡಿದ್ದು ವಿಶೇಷವಾಗಿತ್ತು. ಅದರಲ್ಲೂ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ವೇಗಿ ಎಲ್ಸೀ ಪೆರ್ರೆ ಅವರ ಮೊದಲ ಎಸೆತದಲ್ಲೇ ಚೆಂಡನ್ನು ಬೌಂಡರಿಗೆ ಅಟ್ಟಿ ಗಮನ ಸೆಳೆದರು.
Ellyse Perry bowls 🏏 Sachin Tendulkar bats
This is what dreams are made of 🤩pic.twitter.com/WksKd50ks1
— ICC (@ICC) February 9, 2020
What on earth is going on?! 😂 #BigAppeal pic.twitter.com/GoeJKm349O
— cricket.com.au (@cricketcomau) February 9, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ