ಭುಜ ನೋವಿದ್ರೂ 5 ವರ್ಷದ ಬಳಿಕ ಬ್ಯಾಟ್ ಬೀಸಿದ ಸಚಿನ್; ಎದುರಿಸಿದ ಮೊದಲ ಎಸೆತದಲ್ಲೇ…

Sachin Tendulkar: ಸಚಿನ್ ಅವರು ಪಾಂಟಿಂಗ್ ತಂಡಕ್ಕೆ ಕೋಚ್ ಆಗಿ ಕಾರ್ಯನಿರ್ವಹಿಸಿದರು. ಆದರೆ, ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಬೌಲರ್ ಎಲ್ಸೀ ಪೆರ್ರಿ ಅವರು ಟ್ವೀಟ್ ಮೂಲಕ ಸಚಿನ್ ಬಳಿ ವಿಶೇಷ ಕೋರಿಕೆಯೊಂದನ್ನು ಮುಂದಿಟ್ಟಿದ್ದರು.

ಆಸ್ಟ್ರೇಲಿಯಾದಲ್ಲಿ ಉಂಟಾದ ಕಾಳ್ಗಿಚ್ಚಿನಿಂದ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಆಯೋಜಿಸಲಾಗಿದ್ದ ಈ ಪಂದ್ಯದಲ್ಲಿ ಕ್ರಿಕೆಟ್ ದೇವರು ಒಂದು ಓವರ್​ ಬ್ಯಾಟ್ ಬೀಸಿದ್ದರು.

ಆಸ್ಟ್ರೇಲಿಯಾದಲ್ಲಿ ಉಂಟಾದ ಕಾಳ್ಗಿಚ್ಚಿನಿಂದ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಆಯೋಜಿಸಲಾಗಿದ್ದ ಈ ಪಂದ್ಯದಲ್ಲಿ ಕ್ರಿಕೆಟ್ ದೇವರು ಒಂದು ಓವರ್​ ಬ್ಯಾಟ್ ಬೀಸಿದ್ದರು.

  • Share this:
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್​ಗೆ ನಿವೃತ್ತಿ ನೀಡಿ ಸುಮಾರು ಐದು ವರ್ಷಗಳೇ ಕಳೆದಿವೆ. ಮೈದಾನದಲ್ಲಿ ಇವರ ಅದ್ಭುತ ಹೊಡೆತಗಳು, ಚುರುಕಿನ ಫಿಲ್ಡೀಂಗ್ ಅನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇಂದು ಸಚಿನ್ ಅವರು ಬ್ಯಾಟ್ ಹಿಡಿದು ಆಸ್ಟ್ರೇಲಿಯಾದಲ್ಲಿ ಮೈದಾನಕ್ಕಿಳಿದರು.

ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಕಾಡ್ಗಿಚ್ಚಿನಿಂದಾದ ಅಪಾರ ಹಾನಿ ಉಂಟಾಗಿದೆ. ಇಲ್ಲಿನ ಸಂತ್ರಸ್ತರ ನೆರವಿಗೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗರು ಒಂದಾಗಿ ಚಾರಿಟಿ ಪಂದ್ಯವೊಂದರಲ್ಲಿ ಆಡುವ ಮೂಲಕ ಪರಿಹಾರ ನಿಧಿಗೆ ಹಣ ಸಂಗ್ರಹಿಸಲು ಮುಂದಾಗಿದ್ದರು.

Sachin Tendulkar 'Comes Out Of Retirement,' Hits First Ball For A Four - WATCH
ಸಚಿನ್ ತೆಂಡೂಲ್ಕರ್.


India vs New Zealand: ಭಾರತ ಸೋತರೂ ಗೆದ್ದ ಜಡೇಜಾ; ಧೋನಿ-ಕಪಿಲ್ ದೇವ್ ದಾಖಲೆ ಉಡೀಸ್

'ಬುಷ್​ಫೈರ್ ಕ್ರಿಕೆಟ್ ಬ್ಯಾಷ್'ನ ಈ ಚಾರಿಟಿ ಪಂದ್ಯದಲ್ಲಿ ರಿಕಿ ಪಾಂಟಿಂಗ್ XI ಮತ್ತು ಆ್ಯಡಂ ಗಿಲ್​ಕ್ರಿಸ್ಟ್​ XI ಎರಡು ತಂಡವಿದ್ದು, ಸಚಿನ್ ಅವರು ಪಾಂಟಿಂಗ್ ತಂಡಕ್ಕೆ ಕೋಚ್ ಆಗಿ ಕಾರ್ಯನಿರ್ವಹಿಸಿದರು. ಆದರೆ, ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಬೌಲರ್ ಎಲ್ಸೀ ಪೆರ್ರಿ ಅವರು ಟ್ವೀಟ್ ಮೂಲಕ ಸಚಿನ್ ಬಳಿ ವಿಶೇಷ ಕೋರಿಕೆಯೊಂದನ್ನು ಮುಂದಿಟ್ಟಿದ್ದರು.

 "ನೀವು ನಿವೃತ್ತಿಯಿಂದ ಹೊರಬಂದು ಈ ಚಾರಿಟಿ ಪಂದ್ಯದಲ್ಲಿ ನಮಗಾಗಿ ಇನ್ನಿಂಗ್ಸ್​ ಬ್ರೇಕ್ ವೇಳೆ ಒಂದು ಓವರ್ ಬ್ಯಾಟ್ ಬೀಸಬೇಕು. ಇದರಿಂದ ನಮಗೆಲ್ಲ ತುಂಬಾ ಸಂತಸವಾಗಲಿದೆ. ಅಲ್ಲದೆ ದೇಣಿಗೆ ಸಂಗ್ರಹದ ಹಣದಲ್ಲಿ ಏರಿಕೆಯಾಗುತ್ತಿದೆ" ಎಂದು ಸಚಿನ್ ಬಳಿ ಕೇಳಿಕೊಂಡಿದ್ದಾರೆ.

 Under 19 World Cup ಫೈನಲ್​ಗೆ ಕ್ಷಣಗಣನೆ; ಬಾಂಗ್ಲಾ ಹುಲಿಗಳನ್ನು ಸದೆಬಡಿಯಲು ಯಂಗ್ ಇಂಡಿಯಾ ರೆಡಿ!

ಇದಕ್ಕೆ ಮುಲಾಜಿಲ್ಲದೆ ಒಪ್ಪಿರುವ ಕ್ರಿಕೆಟ್ ದೇವರು, "ಉಳ್ಳೆಯ ಉದ್ದೇಶ, ನಾನು ಖಂಡಿತವಾಗಿಯೂ ಬ್ಯಾಟಿಂಗ್ ಮಾಡುತ್ತೇನೆ. ನನಗೆ ಭುಜದ ನೋವಿದೆ. ವೈದ್ಯರು ಕ್ರಿಕೆಟ್ ಆಡ ಬಾರದು ಎಂದಿದ್ದಾರೆ. ಆದರೆ, ನಾನು ಆಟವಾಡಿದರೆ ದೇಣಿಗೆ ಸಂಗ್ರಹದಲ್ಲಿ ಇನ್ನಷ್ಟು ಹಣ ಸೇರಬಹುದು ಎಂಬ ವಿಶ್ವಾಸವಿದೆ" ಟ್ವೀಟ್ ಮೂಲಕ ಎಲ್ಸೀ ಪೆರ್ರಿ ಅವರಿಗೆ ರಿಪ್ಲೇ ಮಾಡಿದ್ದಾರೆ.

ಅದರಂತೆ 'ಬುಷ್​ಫೈರ್ ಕ್ರಿಕೆಟ್ ಬ್ಯಾಷ್' ಕ್ರಿಕೆಟ್ ಪಂದ್ಯ ಇನ್ನಿಂಗ್ಸ್​ ಮಧ್ಯೆ ಬ್ಯಾಟ್ ಹಿಡಿದ ಕಣಕ್ಕಿಳಿದ ಸಚಿನ್ ತೆಂಡೂಲ್ಕರ್ ಎಲ್ಸೀ ಪೆರ್ರಿ ಅವರ ಮೊದಲ ಎಸೆತದಲ್ಲೇ ಚೆಂಡನ್ನು ಬೌಂಡರಿಗೆ ಅಟ್ಟಿದರು.

 

Virat Kohli: ಪಂದ್ಯ ಮುಗಿದ ಬಳಿಕ ಸರಣಿ ಸೋಲಿನ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ವಿರಾಟ್ ಕೊಹ್ಲಿ!

ಈ ಪಂದ್ಯದಲ್ಲಿ ಮೊದಲಯ ಬ್ಯಾಟ್ ಮಾಡಿದ ಪಾಂಟಿಂಗ್ ಟೀಂ 10 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 104 ರನ್ ಬಾರಿಸಿತು. ಬ್ರಿಯಾನ್ ಲಾರ 11 ಎಸೆತಗಳಲ್ಲಿ 30 ರನ್ ಸಿಡಿಸಿದರು. ಟಾರ್ಗೆಟ್ ಬೆನ್ನಟ್ಟಿದ ಗಿಲ್​ಕ್ರಿಸ್ಟ್ ತಂಡ 10 ಓವರ್​ನಲ್ಲಿ 6 ವಿಕೆಟ್ ಕಳೆದುಕೊಂಡು 99 ರನ್​ ಕಲೆಹಾಕಲಷ್ಟೆ ಶಕ್ತವಾಗಿ ಸೋಲೊಪ್ಪಿಗೊಂಡಿತು.

 

First published: