ಕ್ರೀಡೆ

  • associate partner
HOME » NEWS » Sports » CRICKET BURJ KHALIFA LIT UP IN COLOURS OF KOLKATA KNIGHT RIDERS AHEAD OF TEAMS FIRST GAME IN IPL 2020 HG

Viral Video: ಕೆಕೆಆರ್​ ತಂಡಕ್ಕೆ ವಿಶೇಷ ಸ್ವಾಗತ ಕೋರಿದ ದುಬೈ ಬುರ್ಜ್​ ಖಲೀಫಾ!

KKR: ಬುರ್ಜ್ ಖಲೀಫಾ ವಿಶ್ವದ  ಅತಿ ಎತ್ತರದ ಕಟ್ಟಡವಾಗಿದೆ. ಈ ಕಟ್ಟದ ಮೇಲೆ ಕೊಲ್ಕತ್ತಾ ತಂಡ ಆಟಗಾರರ ಭಾವಚಿತ್ರಗಳು ಕಂಗೊಳಿಸಿದೆ. ಅರಬ್​ ರಾಷ್ಟ್ರಕ್ಕೆ ಆಗಮಿಸಿದ್ದ ಕೆಕೆಆರ್​ ತಂಡಕ್ಕೆ ಬುರ್ಜ್ ಖಲೀಫಾ ವಿಶೇಷವಾಗಿ ಸ್ವಾಗತಿಸಲು ತಂಡದ ಆಟಗಾರರ ಭಾವಚಿತ್ರವನ್ನು ಪ್ರಕಟಿಸಿದೆ.

news18-kannada
Updated:September 23, 2020, 8:29 PM IST
Viral Video: ಕೆಕೆಆರ್​ ತಂಡಕ್ಕೆ ವಿಶೇಷ ಸ್ವಾಗತ ಕೋರಿದ ದುಬೈ ಬುರ್ಜ್​ ಖಲೀಫಾ!
ಬುರ್ಜಾ ಖಲೀಫಾ
  • Share this:
2020ನೇ ವರ್ಷದ ಐಪಿಎಲ್​ ಪಂದ್ಯಾಟ ನಡೆಯುತ್ತಿದೆ. ಭಾರತದಲ್ಲಿ ನಡೆಯಬೇಕಾಗಿದ್ದ ಈ ವರ್ಷದ ಐಪಿಎಲ್​  ಪಂದ್ಯ ಕೊರೋನಾದಿಂದಾಗಿ ಅರಬ್​ ರಾಷ್ಟ್ರದಲ್ಲಿ ನಡೆಯುತ್ತಿದೆ. ಈವರೆಗೆ ಮೂರು ಪಂದ್ಯಗಳು ನಡೆದಿದ್ದು, ಇಂದು ಕೊಲ್ಕತ್ತಾ ನೈಟ್​​ ರೈಡರ್ಸ್​ ಮತ್ತು ಮುಂಬೈ ಇಂಡಿಯನ್ಸ್​ ತಂಡಗಳ ನಡುವೆ ಪಂದ್ಯ ನಡೆಯುತ್ತಿದೆ. ರೋಹಿತ್​ ನಾಯಕತ್ವದ ಮುಂಬೈ ತಂಡ ಮತ್ತು ದಿನೇಶ್​ ಕಾರ್ತಿಕ್​ ನಾಯಕತ್ವದ ಕೊಲ್ಕತ್ತಾ ತಂಡ ಮೈದಾನಲ್ಲಿ  ಜಿದ್ದಾ ಜಿದ್ದಿ ನಡೆಸುತ್ತಿದೆ. ಹೀಗಿರುವಾಗ ದುಬೈನ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ಕೊಲ್ಕತ್ತಾ ತಂಡ ಆಟಗಾರರನ್ನ ವಿಭಿನ್ನವಾಗಿ ಸ್ವಾಗತಿಸಿದೆ.

ಬುರ್ಜ್ ಖಲೀಫಾ ವಿಶ್ವದ  ಅತಿ ಎತ್ತರದ ಕಟ್ಟಡವಾಗಿದೆ. ಈ ಕಟ್ಟದ ಮೇಲೆ ಕೊಲ್ಕತ್ತಾ ತಂಡ ಆಟಗಾರರ ಭಾವಚಿತ್ರಗಳು ಕಂಗೊಳಿಸಿದೆ. ಅರಬ್​ ರಾಷ್ಟ್ರಕ್ಕೆ ಆಗಮಿಸಿದ್ದ ಕೆಕೆಆರ್​ ತಂಡಕ್ಕೆ ಬುರ್ಜ್ ಖಲೀಫಾ ವಿಶೇಷವಾಗಿ ಸ್ವಾಗತಿಸಲು ತಂಡದ ಆಟಗಾರರ ಭಾವಚಿತ್ರವನ್ನು ಪ್ರಕಟಿಸಿದೆ.

ಬುರ್ಜ್ ಖಲೀಫಾ ಕಟ್ಟದಲ್ಲಿ ಮೂಡಿ ಬಂದ ಕೆಕೆಆರ್​​ ತಂಡದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕೆಕೆಆರ್ ಕೂಡ ತನ್ನ​ ಟ್ವಿಟ್ಟರ್​ ಖಾತೆಯಲ್ಲಿ  ಈ ದೃಶ್ಯವನ್ನು ಶೇರ್​ ಮಾಡಿಕೊಂಡಿದೆ. ಜೊತೆಗೆ ಧನ್ಯವಾದ ತಿಳಿಸಿದೆ.




ಅಬುಧಾಬಿಯ ಶೇಖ್ ಝಯಾದ್ ಮೈದಾನದಲ್ಲಿ ಐಪಿಎಲ್​ನ 5ನೇ ಪಂದ್ಯ ನಡೆಯುತ್ತಿದೆ. ಟಾಸ್​ ಸೋತಿರುವ ಮುಂಬೈತಂಡ ಬ್ಯಾಟಿಂಗ್ ಮಾಡುತ್ತಿದ್ದರೆ. ಕೆಕೆಆರ್​​ ತಂಡ ಫೀಲ್ಡಿಂಗ್​ ಆಯ್ದುಕೊಂಡಿದೆ.
Published by: Harshith AS
First published: September 23, 2020, 8:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories