'ಇಂಗ್ಲೆಂಡ್​ನಲ್ಲಿ ನಡೆಯಲಿದೆ ಬುಮ್ರಾ ಮ್ಯಾಜಿಕ್'; ಭವಿಷ್ಯ ನುಡಿದ ಕ್ರಿಕೆಟ್ ದೇವರು

ICC Cricket World Cup 2019: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್​ ಭವಿಷ್ಯ ನುಡಿದಿದ್ದು, ಇಂಗ್ಲೆಂಡ್​ ಪಿಚ್​ನಲ್ಲಿ ಟೀಂ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಮಿಂಚಲಿದ್ದಾರೆ ಎಂದು ಭರವಸೆಯ ಮಾತುಗಳನ್ನು ಆಡಿದ್ದಾರೆ.

ಜಸ್​ಪ್ರೀತ್ ಬುಮ್ರಾ

ಜಸ್​ಪ್ರೀತ್ ಬುಮ್ರಾ

  • News18
  • Last Updated :
  • Share this:
ಬೆಂಗಳೂರು (ಮೇ. 14): ಮೇ 30ರಿಂದ ಆರಂಭಗೊಳ್ಳಲಿರುವ ಐಸಿಸಿ ಪುರುಷರ ವಿಶ್ವಕಪ್​​ಗೆ ಇನ್ನೇನು ಕೆಲವು ದಿನಗಳಷ್ಟೇ ಬಾಕಿ ಉಳಿದಿದೆ. ಇಂಗ್ಲೆಂಡ್​ನಲ್ಲಿ ಈ ಕ್ರಿಕೆಟ್​ ಮಹಾಸಮರ ನಡೆಯುತ್ತಿರುವುದರಿಂದ ಅರ್ಹತೆ ಪಡೆದಿರುವ ಎಲ್ಲಾ ತಂಡಗಳ ತಯಾರಿಯೂ ಜೋರಾಗಿದೆ. ಇಂಗ್ಲೆಂಡ್​​ ವಾತಾವರಣಕ್ಕೆ​ ತಕ್ಕಾಗಿ ಬೌಲಿಂಗ್ ಮಾಡಲು ಬೌಲರ್​ಗಳು ಬೆವರು ಸುರಿಸುತ್ತಿದ್ದರೆ, ಸ್ವಿಂಗ್ ಪಿಚ್​​ಗಳಲ್ಲಿ ಬೌಲರ್​​ಗಳನ್ನ ಎದುರಿಸಲು ಬ್ಯಾಟ್ಸ್​​ಮನ್​ಗಳು ಸಜ್ಜುಗೊಳ್ಳುತ್ತಿದ್ದಾರೆ. ಈ ನಡುವೆ ವಿಶ್ವಕಪ್​​ನಲ್ಲಿ ಮಿಂಚುವ ಬೌಲರ್​​​-ಬ್ಯಾಟ್ಸ್​ಮನ್ ಯಾರು ಎಂಬ ಚರ್ಚೆಯು ಶುರುವಾಗಿದೆ.

ಈ ಮಧ್ಯೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್​ ಭವಿಷ್ಯ ನುಡಿದಿದ್ದು, ಇಂಗ್ಲೆಂಡ್​ ಪಿಚ್​ನಲ್ಲಿ ಟೀಂ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಮಿಂಚಲಿದ್ದಾರೆ ಎಂಬ ಭರವಸೆಯ ಮಾತುಗಳನ್ನು ಆಡಿದ್ದಾರೆ.

ಸಚಿನ್​ ಪ್ರಕಾರ ವಿಶ್ವಕಪ್​ನ ಬೆಸ್ಟ್ ಬೌಲರ್​ ಆಗಿ ಬುಮ್ರಾ ಹೊರಹೊಮ್ಮಲಿದ್ದಾರಂತೆ. ಈ ಹಿಂದೆ ಯುವರಾಜ್ ಸಿಂಗ್ ಕೂಡ ಇದೇ ಮಾತುಗಳನ್ನಾಡಿದ್ದರು. ಇದೇ ಮಾತಿಗೆ ಧ್ವನಿಗೂಡಿಸಿರುವ ಮಾಸ್ಟರ್ ಬ್ಲ್ಯಾಸ್ಟರ್ ಬುಮ್ರಾ ದಿ ಬೆಸ್ಟ್​ ಎಂದಿದ್ದಾರೆ.


ಇತ್ತೀಚೆಗಷ್ಟೇ ಮುಕ್ತಾಯ ಕಂಡ ಐಪಿಎಲ್​​ನಲ್ಲಿ ಮುಂಬೈ ಪರ ಪ್ರಮುಖ​ ಹಂತದಲ್ಲಿ ಬೌಲ್​ ಮಾಡಿ ಯಶಸ್ವಿಯಾದ ಬುಮ್ರಾ, ಅದೆಷ್ಟೋ ಪಂದ್ಯಗಳನ್ನ ಮುಂಬೈಗೆ ಗೆಲ್ಲಿಸಿಕೊಟ್ಟಿದ್ದಾರೆ. ಹೀಗಾಗಿ ಈ ಬಾರಿ ವಿಶ್ವಕಪ್​ನಲ್ಲಿ ಬುಮ್ರಾ ಮ್ಯಾಜಿಕ್ ನಡೆಯಲಿದೆ ಎಂದಿದ್ದಾರೆ.

ಸಚಿನ್​ ಪ್ರಕಾರ ಬುಮ್ರಾನೇ ಸದ್ಯದ ವಿಶ್ವದ ಬೆಸ್ಟ್ ಬೌಲರ್​​. ಅದ್ಭುತ ಸ್ಪೀಡ್, ಅತ್ಯುತ್ತಮ ಲೈನ್ ಅಂಡ್ ಲೆಂಥ್ ಹಾಗೂ ಅಷ್ಟೇ ನಿಖರವಾದ ಯಾರ್ಕರ್ ಎಸೆತಗಳಿಂದ ಬುಮ್ರಾ ಎದುರಾಳಿಗೆ ಶಾಕ್ ನೀಡಬಲ್ಲರು. ಹೀಗಾಗಿ ಬುಮ್ರಾ ಇಂಗ್ಲೆಂಡ್​​ನಲ್ಲಿ ನಡೆಯುವ ವಿಶ್ವಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲರು ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಹೀಗಾಗೆ  ಐಪಿಎಲ್​ನಲ್ಲಿ ನೀಡಿದ ಪ್ರದರ್ಶನ ಬುಮ್ರಾ ವಿಶ್ವಕಪ್​​ನಲ್ಲೂ ನೀಡಿದರೆ ಎದುರಾಳಿಗರಿಗೆ ನಡುಕ ಹುಟ್ಟುವುದಂತು ನಿಜ. ಬುಮ್ರಾ ಜೊತೆಗೆ ಟೀಂ ಇಂಡಿಯಾ ಸಂಘಟಿತ ಪ್ರದರ್ಶನ ತೋರಿದರೆ ಮತ್ತೊಮ್ಮೆ ವಿಶ್ವಕಪ್​​​​ ಗೆಲ್ಲುವಿದರಲ್ಲಿ ಯಾವುದೇ ಅನುಮಾನವೇ ಇಲ್ಲ. ​​
First published: