India vs Australia: 4ನೇ ಟೆಸ್ಟ್​ ಪಂದ್ಯದ ಮೇಲೆ ಕೊರೋನಾ ಕಾರ್ಮೋಡ

3ನೇ ಟೆಸ್ಟ್ ಪಂದ್ಯ ನಡೆಯುತ್ತಿರುವ ಸಿಡ್ನಿ ಮೈದಾನದಲ್ಲೇ 4ನೇ ಟೆಸ್ಟ್​ನ್ನು ನಡೆಸುವ ಬಗ್ಗೆ ಚರ್ಚಿಸಲಾಗುತ್ತಿದೆ. ಇದಕ್ಕೆ ಬಿಸಿಸಿಐ ಒಪ್ಪಿಗೆ ಸೂಚಿಸಿದರೆ ಮಾತ್ರ ಅಂತಿಮ ಟೆಸ್ಟ್ ನಡೆಯಲಿದೆ.

India-Australia

India-Australia

 • Share this:
  ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಏಕೆಂದರೆ ಬ್ರಿಸ್ಬೇನ್​ ಕೊರೋನಾ ನಿಯಮದ ಪ್ರಕಾರ 14 ದಿನಗಳು ಕ್ವಾರಂಟೈನ್​ಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಬಿಸ್ಬೇನ್​ನಲ್ಲಿ ಭಾರತದ ಆಟಗಾರರು ಕ್ವಾರಂಟೈನ್​ಗೆ ಒಳಗಾಗಬೇಕಿದೆ. ಆದರೆ ಇದಕ್ಕೆ ಟೀಮ್ ಇಂಡಿಯಾ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದರು.

  ಏಕೆಂದರೆ ಐಪಿಎಲ್ ಮುಗಿಸಿ ಟೀಮ್ ಇಂಡಿಯಾ ಆಟಗಾರರು ನೇರವಾಗಿ ಆಸ್ಟ್ರೇಲಿಯಾ ತೆರಳಿದ್ದರು. ಅಲ್ಲದೆ ಸಿಡ್ನಿಯಲ್ಲಿ 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿದ್ದರು. ಇದೀಗ ಮತ್ತೊಮ್ಮೆ ಎರಡು ವಾರಗಳ ಕಾಲ ಕ್ವಾರಂಟೈನ್​ನಲ್ಲಿರಲು ಭಾರತೀಯ ಆಟಗಾರರು ಬಯಸುತ್ತಿಲ್ಲ. ಆದರೆ ಕ್ವೀನ್​ಲ್ಯಾಂಡ್​ (ಬ್ರಿಸ್ಬೇನ್) ರಾಜ್ಯದ ನಿಯಮದ ಪ್ರಕಾರ ಹೊರಗಿನಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯ.

  ಈ ಬಗ್ಗೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಕ್ವೀನ್ಸ್​ಲ್ಯಾಂಡ್ ಆರೋಗ್ಯ ಸಚಿವೆ ರೋಸ್ ಬೇಟ್ಸ್​, ಭಾರತೀಯರು ಇಲ್ಲಿನ ನಿಯಮಗಳ ಪ್ರಕಾರ ಆಡಲು ಬಯಸದಿದ್ದರೆ, ಬರಲೇಬೇಡಿ" ಎಂದು ಖಡಕ್ ವಾರ್ನಿಂಗ್ ಸಹ ನೀಡಿದ್ದಾರೆ. ಇದಾಗ್ಯೂ ಬಿಸಿಸಿಐ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಕ್ವೀನ್ಸ್​ಲ್ಯಾಂಡ್ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ವರದಿಯಾಗಿತ್ತು.

  ಆದರೀಗ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಕೊರೋನಾ ಕಾರಣದಿಂದ ಕಠಿಣ ಲಾಕ್‌ಡೌನ್ ಘೋಷಿಸಲಾಗಿದೆ. ರಾಜ್ಯದಲ್ಲಿ ಮೂರು ದಿನಗಳ ಕಾಲ ಲಾಕ್​ಡೌನ್ ಘೋಷಿಸಿರುವುದಾಗಿ ಅಲ್ಲಿನ ಸರ್ಕಾರ ತಿಳಿಸಿದೆ. ಇದರೊಂದಿಗೆ ಬ್ರಿಸ್ಬೇನ್​ನಲ್ಲಿ ಇನ್ಮುಂದೆ ಕ್ವಾರಂಟೈನ್ ನಿಮಯ ಕೂಡ ಕಡ್ಡಾಯವಾಗಿ ಜಾರಿಯಲ್ಲಿರಲಿದೆ. ಅತ್ತ 4ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಕ್ವಾರಂಟೈನ್​ನಲ್ಲಿರಲು ಭಾರತೀಯ ಆಟಗಾರರು ಸಹ ಹಿಂದೇಟು ಹಾಕುತ್ತಿದ್ದಾರೆ.

  ಇನ್ನು ಕ್ವೀನ್ಸ್​ಲ್ಯಾಂಡ್​ನಲ್ಲಿ ಲಾಕ್​ಡೌನ್ ಮುಂದುವರೆದರೆ ಗಾಲೆ ಮೈದಾನದಲ್ಲಿ ಅಂತಿಮ ಪಂದ್ಯ ನಡೆಯುವುದು ಅನುಮಾನ. ಹೀಗಾಗಿ ಮೈದಾನದ ಸ್ಥಳಾಂತರದ ಬಗ್ಗೆ ಕೂಡ ಚಿಂತಿಸಲಾಗಿದೆ. ಅದರಂತೆ 3ನೇ ಟೆಸ್ಟ್ ಪಂದ್ಯ ನಡೆಯುತ್ತಿರುವ ಸಿಡ್ನಿ ಮೈದಾನದಲ್ಲೇ 4ನೇ ಟೆಸ್ಟ್​ನ್ನು ನಡೆಸುವ ಬಗ್ಗೆ ಚರ್ಚಿಸಲಾಗುತ್ತಿದೆ. ಇದಕ್ಕೆ ಬಿಸಿಸಿಐ ಒಪ್ಪಿಗೆ ಸೂಚಿಸಿದರೆ ಮಾತ್ರ ಅಂತಿಮ ಟೆಸ್ಟ್ ನಡೆಯಲಿದೆ. ಇಲ್ಲದಿದ್ರೆ 3 ಪಂದ್ಯಗಳೊಂದಿಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಅಂತ್ಯವಾಗಲಿದೆ ಎಂದು ಹೇಳಲಾಗಿದೆ.
  Published by:zahir
  First published: