ಟಿ-20 ವಿಶ್ವಕಪ್ ಗೆಲ್ಲಲು ಇವರಿಬ್ಬರು ಮತ್ತೆ ಟೀಂ ಇಂಡಿಯಾ ಸೇರಬೇಕು; ಕೊಹ್ಲಿಗೆ ಗಂಗೂಲಿ ಕಿವಿಮಾತು!

ಟೀಂ ಇಂಡಿಯಾ ಟಿ-20 ತಂಡದಲ್ಲಿರುವ ಈಗಿನ ಆಟಗಾರರು ಉತ್ತಮವಾಗಿದ್ದಾರೆ. ಇವರ ಜೊತೆ ಮಣಿಕಟ್ಟಿನ ಸ್ಪಿನ್ನರ್​​ಗಳಾದ ಚಹಾಲ್ ಹಾಗೂ ಕುಲ್ದೀಪ್ ಸೇರಿಕೊಂಡರೆ ಮತ್ತಷ್ಟು ಬಲಿಷ್ಠ ಆಗಲಿದೆ- ಗಂಗೂಲಿ

Vinay Bhat | news18-kannada
Updated:September 29, 2019, 10:27 AM IST
ಟಿ-20 ವಿಶ್ವಕಪ್ ಗೆಲ್ಲಲು ಇವರಿಬ್ಬರು ಮತ್ತೆ ಟೀಂ ಇಂಡಿಯಾ ಸೇರಬೇಕು; ಕೊಹ್ಲಿಗೆ ಗಂಗೂಲಿ ಕಿವಿಮಾತು!
ತಂಡ ಯೋ ಯೋ ಟೆಸ್ಟ್ ಅಳವಡಿಸಿಕೊಂಡಿದೆ. ಇದರಲ್ಲಿ ಬಿಸಿಸಿಐ ಯಾವುದೇ ಬದಲಾವಣೆ ತರುವುದಿಲ್ಲ. ಇದು ಟೀಂ ಮ್ಯಾನೇಜ್ಮೆಂಟ್ ನಿರ್ಧಾರ ಎಂಬುವುದು ಗಂಗೂಲಿ ಮಾತಾಗಿತ್ತು.
  • Share this:
ಬೆಂಗಳೂರು (ಸೆ. 29): ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್ ಟಿ-20 ಟೂರ್ನಿಗೆ ಎಲ್ಲ ತಂಡಗಳು ಈಗಿನಿಂದಲೆ ಭರ್ಜರಿ ತಯಾರಿಯಲ್ಲಿ ತೊಡಗಿವೆ. ಟೀಂ ಇಂಡಿಯಾ ಕೂಡ ಇದರಿಂದ ಹೊರತಾಗಿಲ್ಲ. ಯುವ ಆಟಗಾರರನ್ನು ಪ್ರಯೋಗಕ್ಕೆ ಒಳಪಡಿಸಿ ಬಲಿಷ್ಠ ತಂಡವನ್ನು ಕಟ್ಟುವ ಅಂದಾಜಿನಲ್ಲಿದೆ.

ಈ ನಡುವೆ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಟಿ-20 ವಿಶ್ವಕಪ್ ಗೆಲ್ಲಲು ಈ ಇಬ್ಬರು ಆಟಗಾರರನ್ನು ಮತ್ತೆ ತಂಡಕ್ಕೆ ಸೇರಿಸಿ ಎಂದು ಕೊಹ್ಲಿಗೆ ಕಿವಿಮಾತು ಹೇಳಿದ್ದಾರೆ.

ಕಳೆದ ಏಕದಿನ ವಿಶ್ವಕಪ್ ಸೇರಿದಂತೆ ಅನೇಕ ಸರಣಿಗಳಲ್ಲಿ ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್​ಗಳಾಗಿದ್ದ ಯಜುವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್​ರನ್ನು ಸದ್ಯ ಭಾರತ ತಂಡದಿಂದ ಕೈಬಿಡಲಾಗಿದೆ. ವೆಸ್ಟ್​ ಇಂಡೀಸ್ ಹಾಗೂ ದ. ಆಫ್ರಿಕಾ ಸರಣಿಯಿಂದ ಕುಲ್ಚಾ​​ ಜೋಡಿಯನ್ನು ಹೊರಗಿಟ್ಟು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.

Virat Kohli Should Bring Back Kuldeep Yadav, Yuzvendra Chahal In T20s, Says Sourav Ganguly
ಯಜುವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್


ವಿಶ್ವ ದಾಖಲೆ ಬರೆದ ನೇಪಾಳ ತಂಡದ ನಾಯಕ; ಕಿಂಗ್ ಕೊಹ್ಲಿಗೂ ಮಾಡಲಾಗಿಲ್ಲ ಈ ಸಾಧನೆ

ಈ ವಿಚಾರದ ಬಗ್ಗೆ ಗಂಗೂಲಿ ಮಾತನಾಡಿದ್ದು, '2020ರಲ್ಲಿ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಕುಲ್ದೀಪ್ ಹಾಗೂ ಚಹಾಲ್​ರನ್ನು ತಂಡಕ್ಕೆ ಮತ್ತೆ ಕರೆತನ್ನಿ. ಇವರಿಬ್ಬರ ಉಪಸ್ಥಿತಿ ವಿಶ್ವಕಪ್ ಟಿ-20 ಯಲ್ಲಿ ಭಾರತ ಗೆಲ್ಲಲು ಪ್ರಮುಖ ಪಾತ್ರ ವಹಿಸುತ್ತದೆ' ಎಂದಿದ್ದಾರೆ.

'ಟೀಂ ಇಂಡಿಯಾ ಟಿ-20 ತಂಡದಲ್ಲಿರುವ ಈಗಿನ ಆಟಗಾರರು ಉತ್ತಮವಾಗಿದ್ದಾರೆ. ಇವರ ಜೊತೆ ಮಣಿಕಟ್ಟಿನ ಸ್ಪಿನ್ನರ್​​ಗಳಾದ ಚಹಾಲ್ ಹಾಗೂ ಕುಲ್ದೀಪ್ ಸೇರಿಕೊಂಡರೆ ಮತ್ತಷ್ಟು ಬಲಿಷ್ಠ ಆಗಲಿದೆ''ಕಳೆದ ಮೂರು-ನಾಲ್ಕು ಟಿ-20 ಸರಣಿಯಿಂದ ಭಾರತ ತಂಡದಲ್ಲಿ ತುಂಬಾ ಬದಲಾವಣೆ ಆಗುತ್ತಿದೆ. ಯುವ ಆಟಗಾರರನ್ನು ಪ್ರಯೋಗಕ್ಕೆ ಒಳಪಡಿಸುತ್ತಿದೆ. ಇದು ಉತ್ತಮ ನಿರ್ಧಾರ. ಆದರೆ, ಈ ಇಬ್ಬರು ಆಟಗಾರರು ತಂಡದಲ್ಲಿರುವ ಅನಿವಾರ್ಯತೆ ಭಾರತಕ್ಕಿದೆ' ಎಂಬುದು ಗಂಗೂಲಿ ಮಾತು.

ಸದ್ಯಕ್ಕೆ ಸೀಮಿತ ಓವರ್​ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ ಖಾಯಂ ಸದಸ್ಯರಾಗಿರುವ ಚಹಾಲ್-ಕುಲ್ದೀಪ್ ಟಿ-20 ತಂಡದಲ್ಲಿ ಮಾತ್ರ ಕಾಣಿಸುತ್ತಿಲ್ಲ. ಇದಕ್ಕೆ ನಾಯಕ ವಿರಾಟ್ ಕೊಹ್ಲಿ ಈ ಹಿಂದೆ ಸ್ಪಷ್ಟನೆ ನೀಡಿದ್ದಾರೆ.

'2020 ರಲ್ಲಿ ಟಿ-20 ವಿಶ್ವಕಪ್ ಇರುವುದರಿಂದ ತಂಡ ಮತ್ತಷ್ಟು ಬಲಿಷ್ಠವಾಗಬೇಕು. 200ಕ್ಕೂ ಅಧಿಕ ರನ್ ಕಲೆಹಾಕುವ ಯೋಜನೆ ನಮ್ಮದು. ಇದಕ್ಕೆ ಕೆಳ ಕ್ರಮಾಂಕದಲ್ಲು ಬ್ಯಾಟ್ ಬೀಸುವ ಆಟಗಾರರ ಅಗತ್ಯವಿದೆ'

'ನಮಗೆ ಬೌಲಿಂಗ್ ಜೊತೆ ಬ್ಯಾಟಿಂಗ್​ನಲ್ಲೂ ಕಮಾಲ್ ಮಾಡುವ ಆಟಗಾರರು ಬೇಕಿದ್ದಾರೆ. ಇದರಲ್ಲಿ ಏನು ತಪ್ಪಿಲ್ಲ. ನಮ್ಮದು 200ಕ್ಕೂ ಅಧಿಕ ರನ್ ಕಲೆಹಾಕುವುದು ಮಾತ್ರ ಗುರಿ. ಟೀಂ ಇಂಡಿಯಾ ಬ್ಯಾಟಿಂಗ್ ಕಡೆಗೆ ಹೆಚ್ಚಿನ ಗಮನ ನೀಡುತ್ತಿದೆ. ಇದಕ್ಕಾಗಿ ಆಲ್ರೌಂಡರ್​ಗಳಿಗೆ ಹೆಚ್ಚಿನ ಅವಕಾಶ ನಿಡುತ್ತಿದ್ದೇವೆ' ಎಂದು ಕೊಹ್ಲಿ ಹೇಳಿದ್ದರು.

First published:September 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading