ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚ್​ ಆಗಿ ಸ್ಪೋಟಕ ಆಟಗಾರ ಆಯ್ಕೆ..!

Brendon McCullum: ಇನ್ನು 101 ಟೆಸ್ಟ್​ ಪಂದ್ಯಗಳಿಂದ 6,453 ರನ್​ ಕಲೆಹಾಕಿದ್ದಾರೆ. ಇದರಲ್ಲಿ 302 ರನ್​ಗಳ ತ್ರಿಶತಕ ಕೂಡ ಸೇರಿದೆ. 2016 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಮೆಕಲಂ ಸದ್ಯ ಆಯ್ದ ಕ್ರಿಕೆಟ್​ ಲೀಗ್​ನಲ್ಲಿ ತಮ್ಮ ಸ್ಪೋಟಕ ಆಟವನ್ನು ಮುಂದುವರೆಸಿದ್ದಾರೆ.

zahir | news18-kannada
Updated:August 10, 2019, 5:14 PM IST
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚ್​ ಆಗಿ ಸ್ಪೋಟಕ ಆಟಗಾರ ಆಯ್ಕೆ..!
KKR
  • Share this:
ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್​​ ತಂಡದ ಬ್ಯಾಟಿಂಗ್ ಕೋಚ್ ಸ್ಥಾನಕ್ಕೆ ನ್ಯೂಜಿಲೆಂಡ್​ ಮಾಜಿ ಆಟಗಾರ ಬ್ರೆಂಡನ್ ಮೆಕಲಂ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ. ಕಿವೀಸ್ ತಂಡದ ಹೊಡಿಬಡಿ ಆಟಗಾರ ಕೆಕೆಆರ್​ ತಂಡದ ಸಹಾಯಕ ಕೋಚ್ ಹುದ್ದೆಯನ್ನು ಅಲಂಕರಿಸಲಿದ್ದು, ಶೀಘ್ರದಲ್ಲೇ ಫ್ರಾಂಚೈಸಿಯಿಂದ ಅಧಿಕೃತ ಪ್ರಕಟಣೆ ಹೊರ ಬೀಳಲಿದೆ ಎಂದು ತಿಳಿಸಲಾಗಿದೆ.

ಸದ್ಯ ಕೆಕೆಆರ್ ತಂಡದ ಮುಖ್ಯ ಕೋಚ್​ ಆಗಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಕ್ಸ್ ಕಾಲಿಸ್ ಹಾಗೂ ಆಸ್ಟ್ರೇಲಿಯಾದ ಸೈಮನ್ ಕಾಟಿಚ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಕಾಟಿಚ್ ಅವರ ಸ್ಥಾನಕ್ಕೆ ನ್ಯೂಜಿಲೆಂಡ್ ಆಟಗಾರ ಸೇರ್ಪಡೆಯಾಗಲಿದ್ದು, ಈ ಮೂಲಕ ತಂಡದ ಬ್ಯಾಟಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸಲು ನೈಟ್ ರೈಡರ್ಸ್ ತಂಡ ಯೋಜನೆ ರೂಪಿಸಿದೆ.

2008 ರಲ್ಲಿ ನಡೆದ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಬ್ರೆಂಡನ್ ಮೆಕಲಂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಅಬ್ಬರಿಸುವ ಮೂಲಕ 158 ರನ್​ಗಳನ್ನು ಮೆಕಲಂ ಚಚ್ಚಿದ್ದರು. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್​ ಐದು ಸೀಸನ್​ನಲ್ಲಿ ಹಲವು ತಂಡಗಳನ್ನು ಪ್ರತಿನಿಧಿಸಿದ್ದ ಮೆಕ್ ಈ ಹಿಂದೊಮ್ಮೆ ನಿವೃತ್ತಿ ಬಳಿಕ ಕೋಚ್ ಆಗಬೇಕೆಂಬ ಬಯಕೆ ವ್ಯಕ್ತಪಡಿಸಿದ್ದರು. ಇದೀಗ ಅಂತಹದೊಂದು ಸ್ಥಾನವನ್ನು ಐಪಿಎಲ್ ಮೂಲಕ ಈಡೇರಿಸಿಕೊಳ್ಳುವ ಅವಕಾಶ ಮೆಕಲಂಗೆ ಒದಗಿ ಬಂದಿದೆ.

ಬ್ರೆಂಡನ್ ಮೆಕಲಂ


ನ್ಯೂಜಿಲೆಂಡ್ ತಂಡದ ಪರ 260 ಏಕದಿನ ಪಂದ್ಯಗಳನ್ನು ಆಡಿರುವ ಮೆಕಲಂ ತಮ್ಮ ಅಬ್ಬರದ ಬ್ಯಾಟಿಂಗ್​ ಮೂಲಕವೇ ವಿಶ್ವ ಬೌಲರುಗಳಿಗೆ ಸಿಂಹಸ್ವಪ್ನವಾಗಿದ್ದರು. ಕಿವೀಸ್ ಪರವಾಗಿ ಆರಂಭಿಕರಾಗಿ ಕಣಕಿಳಿಯುತ್ತಿದ್ದ ಬಲಗೈ ದಾಂಡಿಗ 96.37 ಸ್ಟ್ರೈಕ್​ರೇಟ್​ನಲ್ಲಿ 6,083 ರನ್​ ಬಾರಿಸಿದ್ದರು. ಇನ್ನು 101 ಟೆಸ್ಟ್​ ಪಂದ್ಯಗಳಿಂದ 6,453 ರನ್​ ಕಲೆಹಾಕಿದ್ದಾರೆ. ಇದರಲ್ಲಿ 302 ರನ್​ಗಳ ತ್ರಿಶತಕ ಕೂಡ ಸೇರಿದೆ. 2016 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಮೆಕಲಂ ಸದ್ಯ ಆಯ್ದ ಕ್ರಿಕೆಟ್​ ಲೀಗ್​ನಲ್ಲಿ ತಮ್ಮ ಸ್ಪೋಟಕ ಆಟವನ್ನು ಮುಂದುವರೆಸಿದ್ದಾರೆ.
First published:August 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...