ಕೊಹ್ಲಿ ಅಲ್ಲ; ಸದ್ಯದಲ್ಲೆ ಟಿ-20 ಯಲ್ಲಿ ದ್ವಿಶತಕ ಸಿಡಿಸಲಿರುವ ಕ್ರಿಕೆಟಿಗ ಭಾರತೀಯನೇ ಎಂದ ಆಸೀಸ್ ಆಟಗಾರ!

ಸದ್ಯ ಇಡೀ ಜಗತ್ತು ಟಿ-20 ಕ್ರಿಕೆಟ್​ನಲ್ಲಿ ಮೊದಲ ದ್ವಿಶತಕ ಸಿಡಿಸುವ ಬ್ಯಾಟ್ಸ್​ಮನ್​ ಯಾರು? ಎಂಬುವುದನ್ನು ಎದುರು ನೋಡುತ್ತಿದೆ. ಇದಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಉತ್ತರ ನೀಡಿದ್ದಾರೆ.

ಟೀಂ ಇಂಡಿಯಾ ಆಟಗಾರರು

ಟೀಂ ಇಂಡಿಯಾ ಆಟಗಾರರು

  • Share this:
ಬೆಂಗಳೂರು (ಮಾ. 17): ಟಿ-20 ಕ್ರಿಕೆಟ್​ ಟೂರ್ನಿಯಲ್ಲಿ ದ್ವಿಶತಕ ಬಾರಿಸುವುದು ಸಾಧ್ಯವಾಗದ ಮಾತು ಎಂದು ಹೇಳಲಾಗಿತ್ತು. ಆದರೆ, ಕ್ರಿಕೆಟ್​ನಲ್ಲಿ ಇತ್ತೀಚೆಗೆ ಆಗುತ್ತಿರುವ ಬೆಳವಣಿಗೆ ಕಂಡರೆ ಸದ್ಯದಲ್ಲೇ ಟಿ-20 ಯಲ್ಲಿ ಬ್ಯಾಟ್ಸ್​ಮನ್​​ 200 ರನ್ ಸಿಡಿಸದರೆ ಅಚ್ಚರಿಯಿಲ್ಲ ಎಂದೇ ಹೇಳಬಹುದು.

ಟಿ-20 ಕ್ರಿಕೆಟ್​ನಲ್ಲಿ 200 ರನ್​ಗಿಂತ ಅಧಿಕ ಟಾರ್ಗೆಟ್ ನೀಡುವುದು ಈಗ ದೊಡ್ಡ ಸಾಧನೆಯೇನಲ್ಲ. ಈ ಟಾರ್ಗೆಟ್ ಅನ್ನು ಬೆನ್ನಟ್ಟಿ ಗೆಲುವು ಸಾಧಿಸುತ್ತಿರುವುದು ಹೊಸ ವಿಚಾರವೇನಲ್ಲ.

 Former Australian cricketer names Indian who can score double hundred in T20Is
ರೋಹಿತ್ ಶರ್ಮಾ, ಟೀಂ ಇಂಡಿಯಾ ಆಟಗಾರ.


ಅಲ್ಲದೆ ಏಕದಿನ ಕ್ರಿಕೆಟ್​ನಲ್ಲಿ ಸಚಿನ್ ತೆಂಡೂಲ್ಕರ್ ದ್ವಿಶತಕ ಬಾರಿಸಿದಾಗಲೇ ತಿಳಿದಿದ್ದು ಬ್ಯಾಟ್ಸ್​ಮನ್​ ಒಬ್ಬ 50 ಓವರ್​ನ ಪಂದ್ಯದಲ್ಲಿ 200 ರನ್ ಗಡಿ ದಾಟ ಬಹುದೆಂದು. ಬಳಿಕ ಇದೇ ಸಾಧನೆಯನ್ನು ವಿರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ಮಾರ್ಟಿನ್ ಗಪ್ಟಿಲ್, ಕ್ರಿಸ್ ಗೇಲ್ ಸೇರಿ ಪ್ರಮುಖರು ಮಾಡಿದ್ದಾರೆ.

IPL vs PSL: ಯಾವುದು ಬೆಸ್ಟ್​ ಲೀಗ್ ಎಂಬ ಪ್ರಶ್ನೆಗೆ ಮಾಜಿ ಆಟಗಾರ ನೀಡಿದ ಉತ್ತರ ಕೇಳಿ ಅಭಿಮಾನಿಗಳು ಶಾಕ್

ಆದರೆ, ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಈವರೆಗೆ ಯಾಬೊಬ್ಬ ಬ್ಯಾಟ್ಸ್​ಮನ್​ ದ್ವಿಶತಕ ಸಿಡಿಸಿದ ಸಾಧನೆ ಮಾಡಿಲ್ಲ. ವೆಸ್ಟ್​ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಐಪಿಎಲ್​ನಲ್ಲಿ ಅಜೇಯ 175 ರನ್ ಚಚ್ಚಿರುವುದು ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಬ್ಯಾಟ್ಸ್​ಮನ್​ ಒಬ್ಬ ಗಳಿಸಿದ ಗರಿಷ್ಠ ಸ್ಕೋರ್. ಅಂತರಾಷ್ಟ್ರೀಯ ಟಿ-20 ಯಲ್ಲಿ ಜಿಂಬಾಬ್ವೆ ವಿರುದ್ಧ ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್ 172 ರನ್ ಗಳಿಸಿದ್ದಾರೆ.

 ಸದ್ಯ ಇಡೀ ಜಗತ್ತು ಟಿ-20 ಕ್ರಿಕೆಟ್​ನಲ್ಲಿ ಮೊದಲ ದ್ವಿಶತಕ ಸಿಡಿಸುವ ಬ್ಯಾಟ್ಸ್​ಮನ್​ ಯಾರು? ಎಂಬುವುದನ್ನು ಎದುರು ನೋಡುತ್ತಿದೆ. ಇದಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಉತ್ತರ ನೀಡಿದ್ದಾರೆ. ಹಾಗ್ ಸೂಚಿಸಿರುವ ಹೆಸರು ಟೀಂ ಇಂಡಿಯಾ ಆಟಗಾರ ಎಂಬುದು ವಿಶೇಷ.

VIDEO: 1 ಎಸೆತದಲ್ಲಿ ಗೆಲ್ಲಲು ಬೇಕು 6 ರನ್: ಬ್ಯಾಟ್ಸ್​ಮನ್​ ಬಾಲ್ ಮುಟ್ಟದೆ ಪಂದ್ಯ ಗೆಲ್ಲಿಸಿಕೊಟ್ಟ; ಹೇಗೆ ಗೊತ್ತಾ?

'ಭಾರತವ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಹಿಟ್​ಮ್ಯಾನ್​ ರೋಹಿತ್ ಶರ್ಮಾ ಸದ್ಯದಲ್ಲೇ ಟಿ-20 ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಲಿದ್ದಾರೆ' ಎಂದು ಹಾಗ್ ಭವಿಷ್ಯ ನುಡಿದಿದ್ದಾರೆ. 'ಉತ್ತಮ ಸ್ಟ್ರೈಕ್‌ರೇಟ್‌, ಒಳ್ಳೆಯ ಟೈಮಿಂಗ್‌, ಕ್ರೀಡಾಂಗಣದ ಎಲ್ಲ ಮೂಲೆಗಳಿಗೂ ಸಿಕ್ಸರ್ ಎತ್ತುವಂತಹ ಶಾಟ್‌ಗಳನ್ನು ಪ್ರಯೋಗಿಸಬಲ್ಲ ಕ್ರಿಕೆಟಿಗ ಎಂದರೆ ಅದು ರೋಹಿತ್ ಶರ್ಮಾ' ಎಂದು ಹೇಳಿದ್ದಾರೆ.

First published: