ದುಡ್ಡಿಗಾಗಿ ಏನು ಬೇಕಾದ್ರೂ ಮಾಡ್ತಾರೆ: ಕೊಹ್ಲಿಯನ್ನು ಕೆದಕಿದ ಆಸೀಸ್ ಕ್ರಿಕೆಟಿಗನ ಬೆವರಿಳಿಸಿದ ವಿರಾಟ್ ಫ್ಯಾನ್ಸ್

ಇದು ಒಬ್ಬ ಆಟಗಾರನ ಸ್ಟಾರ್​ಗಿರಿಯನ್ನು ಕಂಪೆನಿ ಬಳಸಿಕೊಂಡಿರುವುದು ಹೊರತು, ದುಡ್ಡಿಗಾಗಿ ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಯಾವ ಅರ್ಥ ಎಂದು ಹಾಡ್ಜ್​ರನ್ನು ಕೊಹ್ಲಿ ಫ್ಯಾನ್ಸ್​ ಪ್ರಶ್ನಿಸಿದ್ದಾರೆ.

zahir | news18
Updated:May 20, 2019, 8:02 PM IST
ದುಡ್ಡಿಗಾಗಿ ಏನು ಬೇಕಾದ್ರೂ ಮಾಡ್ತಾರೆ: ಕೊಹ್ಲಿಯನ್ನು ಕೆದಕಿದ ಆಸೀಸ್ ಕ್ರಿಕೆಟಿಗನ ಬೆವರಿಳಿಸಿದ ವಿರಾಟ್ ಫ್ಯಾನ್ಸ್
@CricWizz
  • News18
  • Last Updated: May 20, 2019, 8:02 PM IST
  • Share this:
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿನಯಿಸಿದ ಜಾಹೀರಾತು ಕುರಿತು ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರಾಡ್ಜ್ ಹಾಡ್ಜ್ ಮಾಡಿದ ಟ್ವೀಟ್ ಕೊಹ್ಲಿ ಅಭಿಮಾನಿಗಳನ್ನು ಕೆರಳಿಸಿದೆ. ಕೊಹ್ಲಿ ಹಾಗೂ ರಿಷಭ್ ಪಂತ್ ಇತ್ತೀಚೆಗೆ ಖಾಸಗಿ ಕಂಪೆನಿಯೊಂದರ ರಾಯಭಾರಿಗಳಾಗಿ ಕಾಣಿಸಿಕೊಂಡಿದ್ದರು. ಸೌಂದರ್ಯ ವರ್ಧಕಗಳನ್ನು ಮಾರಾಟ ಮಾಡುವ ಈ ಕಂಪೆನಿಯ ಜಾಹೀರಾತಿನಲ್ಲಿ ಈ ಇಬ್ಬರು ಆಟಗಾರರು ಅಭಿನಯಿಸಿದ್ದರು.

ಈ ವಿಡಿಯೋವನ್ನು ರಿಷಭ್ ಪಂತ್ ಹಾಗೂ ವಿರಾಟ್​ ಕೊಹ್ಲಿ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರಿಂದ ವ್ಯಾಪಕವಾಗಿ ವೈರಲ್ ಆಗಿತ್ತು. ಫೇಸ್​ ಕ್ರೀಮ್​ವೊಂದನ್ನು ಪ್ರಚಾರ ಮಾಡುವ ವಿಡಿಯೋದಲ್ಲಿ ಕೊಹ್ಲಿ ಹಾಗೂ ಪಂತ್ ನರ್ತಿಸಿ ವಿಶೇಷವಾಗಿ ಗಮನ ಸೆಳೆದಿದ್ದರು.ಈ ವಿಡಿಯೋಗೆ ಆಸೀಸ್ ಮಾಜಿ ಆಟಗಾರ ಬ್ರಾಡ್​ ಹಾಡ್ಜ್ , ಅದ್ಭುತವಾಗಿದೆ, ಜನರು ದುಡ್ಡಿಗಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ಪ್ರತಿಕ್ರಿಯಿಸಿದ್ದರು. ಈ ಕಮೆಂಟ್​ ಕೊಹ್ಲಿ ಅಭಿಮಾನಿಗಳನ್ನು ಚುಚ್ಚಿದೆ. ತಮ್ಮ ನೆಚ್ಚಿನ ಆಟಗಾರನ ಬಗ್ಗೆ ಮಾಡಿದ ಕಮೆಂಟ್​ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Loading...
ಇದೊಂದು ಹಾಡ್ಜ್ ಅಸೂಯೆಯಿಂದ ಹೇಳುತ್ತಿರುವ ಮಾತು, ಕೊಹ್ಲಿ ಮಾತ್ರವಲ್ಲ ಈ ಹಿಂದೆ ನೀವು ಕೂಡ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದೀರಿ. ಆಸೀಸ್ ಆಟಗಾರರರಿಗೆ ಟೀಂ ಇಂಡಿಯಾ ಆಟಗಾರರ ಬಗ್ಗೆ ಮೈದಾನದ ಹೊರಗೂ ಚಿಂತೆ..ಹೀಗೆ ಹಲವರು ಸಾಕ್ಷ್ಯಗಳೊಂದಿಗೆ ಬ್ರಾಡ್ಜ್ ಹಾಡ್ಜ್ ಮರುತ್ತರ ನೀಡಿ ಬೆವರಿಳಿಸಿದ್ದಾರೆ.ಇದು ಒಬ್ಬ ಆಟಗಾರನ ಸ್ಟಾರ್​ಗಿರಿಯನ್ನು ಕಂಪೆನಿ ಬಳಸಿಕೊಂಡಿರುವುದು ಹೊರತು, ದುಡ್ಡಿಗಾಗಿ ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಯಾವ ಅರ್ಥ ಎಂದು ಹಾಡ್ಜ್​ರನ್ನು ಕೊಹ್ಲಿ ಫ್ಯಾನ್ಸ್​ ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವ್ಯಾಪಕ ಟೀಕೆಗಳು ಬರುತ್ತಿದ್ದಂತೆ ಎಚ್ಚೆತ್ತ ಹಾಡ್ಜ್, ನಾನು ತಮಾಷೆಗಾಗಿ ಈ ರೀತಿಯಾಗಿ ಹೇಳಿದ್ದು, ನಾನು ಕೂಡ ಒಬ್ಬ ಕ್ರಿಕೆಟಿಗ. ಈ ರೀತಿಯ ಕೆಲಸಗಳನ್ನು ಮಾಡುತ್ತೇನೆ ಎಂದೇಳುವ ಮೂಲಕ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು.ಒಟ್ಟಾರೆ ಸುಖಾಸುಮ್ಮನೆ ಕೊಹ್ಲಿಯನ್ನು ಕೆದಕಲು ಹೋದ ಬ್ರಾಡ್ ಹಾಡ್ಜ್​ ರನ್ನು ಪ್ರಶ್ನೆ ಮತ್ತು ಟ್ರೋಲ್​ಗಳ ಮೂಲಕ ವಿರಾಟ್ ಅಭಿಮಾನಿಗಳಿಂದ ಸರಿಯಾಗಿ ತಿವಿದಿದ್ದಾರೆ.
First published:May 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...