ಆರ್​ಆರ್​ ತಂಡ ಸೇರಿಕೊಂಡ ಪಾಕಿಸ್ತಾನದ ಸ್ಟಾರ್ ಆಲ್ರೌಂಡರ್ ಆಟಗಾರ!

20 ವರ್ಷ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆಡಿದ ಅನುಭವ. 37.22 ಅತ್ಯುತ್ತಮ ಸರಾಸರಿಯೊಂದಿಗೆ 9,120 ಟಿ-20 ರನ್. 125 ಸ್ಟ್ರೈಕ್​ರೇಟ್​​, 54 ಅರ್ಧಶತಕ ಹಾಗೂ 142 ಟಿ-20 ವಿಕೆಟ್. ಈತನ ಹೆಸರು ಶೊಯೇಬ್ ಮಲಿಕ್.

ಶೋಯೆಬ್ ಮಲಿಕ್ (ಬ್ಯಾಟ್ಸ್​ಮನ್​)

ಶೋಯೆಬ್ ಮಲಿಕ್ (ಬ್ಯಾಟ್ಸ್​ಮನ್​)

  • Share this:
ಬೆಂಗಳೂರು (ನ. 21): ಕಳೆದ ಏಕದಿನ ವಿಶ್ವಕಪ್ ಮುಗಿದ ಬೆನ್ನಲ್ಲೆ ಅಂತರಾಷ್ಟ್ರೀಯ ಒಡಿಐ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದ ಪಾಕಿಸ್ತಾನ ಹಿರಿಯ ಆಲ್ರೌಂಡರ್ ಶೊಯೇಬ್ ಮಲಿಕ್ ಈಗಲೂ ಟಿ-20 ಕ್ರಿಕೆಟ್​ನಲ್ಲಿ ಅಪಾಯಕಾರಿ ಆಟಗಾರ.

ಈಗಾಗಲೇ ಇವರು ಟಿ-20 ಕ್ರಿಕೆಟ್​ನಲ್ಲಿ ಬರೋಬ್ಬರು 360 ಪಂದ್ಯಗಳನ್ನು ಆಡಿದ್ದಾರೆ. 9 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಕೇವಲ ಬ್ಯಾಟಿಂಗ್​ನಲ್ಲಿ ಮಾತ್ರವಲ್ಲದೆ ಬೌಲಿಂಗ್​ನಲ್ಲೂ ಕಮಾಲ್ ಮಾಡಿರುವ ಮಲಿಕ್ 142 ವಿಕೆಟ್ ಕಬಳಿಸಿದ್ದಾರೆ. 13 ರನ್ ನೀಡಿದ 5 ವಿಕೆಟ್ ಕಿತ್ತಿರುವುದು ಇವರ ಶ್ರೇಷ್ಠ ಸಾಧನೆ.

ಇಂಥಹ ಸ್ಟಾರ್ ಆಟಗಾರನನ್ನು ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಟಿ-20 ಕ್ರಿಕೆಟ್​ನ ರಾಜಶಾಹಿ ರಾಯಲ್ಸ್​​(ಆರ್​ಆರ್​​) ತಂಡ ಖರೀದಿ ಮಾಡಿದೆ. ಅಲ್ಲದೆ ನಾಯಕನ ಪಟ್ಟ ನೀಡಿದೆ. ಡಿ. 11 ರಿಂದ ಬಿಬಿಎಲ್ 7ನೇ ಆವೃತ್ತಿ ಆರಂಭವಾಗಲಿದ್ದು, ಒಟ್ಟು 7 ಫ್ರಾಂಚೈಸಿಗಳು ಟ್ರೋಫಿಗಾಗಿ ಹೋರಾಟ ನಡೆಸಲಿದೆ.

MS Dhoni: ವಿಂಡೀಸ್ ಸರಣಿಯಲ್ಲಿ ಧೋನಿ ಕಣಕ್ಕೆ?; ಕುತೂಹಲ ಮೂಡಿಸಿದೆ ಕಿಂಗ್ ಕೊಹ್ಲಿಯ ಈ ಟ್ವೀಟ್!

 "20 ವರ್ಷ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆಡಿದ ಅನುಭವ. 37.22 ಅತ್ಯುತ್ತಮ ಸರಾಸರಿಯೊಂದಿಗೆ 9,120 ಟಿ-20 ರನ್. 125 ಸ್ಟ್ರೈಕ್​ರೇಟ್​​, 54 ಅರ್ಧಶತಕ ಹಾಗೂ 142 ಟಿ-20 ವಿಕೆಟ್. ಈತನ ಹೆಸರು ಶೊಯೇಬ್ ಮಲಿಕ್. ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿ ನಮ್ಮ ತಂಡದ ನಾಯಕ" ಎಂದು ರಾಜಶಾಹಿ ರಾಯಲ್ಸ್​ ತಂಡ ತನ್ನ ಫೇಸ್​ಬುಕ್​ನಲ್ಲಿ ಬರೆದುಕೊಂಡಿದೆ.

ಕೇವಲ ಮಲಿಕ್ ಮಾತ್ರವಲ್ಲದೆ ಆರ್​ಆರ್​ ತಂಡದಲ್ಲಿ ಸ್ಟಾರ್ ವಿದೇಶಿ ಆಟಗಾರರಿದ್ದಾರೆ. ಇಂಗ್ಲೆಂಡ್‌ನ ರವಿ ಬೊಪಾರ, ಅಫ್ಘಾನಿಸ್ತಾನದ ಹಝ್ರತುಲ್ಲ ಝಝಾಯ್‌ ಮತ್ತು ಪಾಕಿಸ್ತಾನದವರಾದ ಮೊಹಮ್ಮದ್‌ ನವಾಝ್‌ ಮತ್ತು ಮೊಹಮ್ಮದ್‌ ಇರ್ಫಾನ್‌ ಇದ್ದಾರೆ. ಸದ್ಯ ಮಲಿಕ್ ಕೂಡ ರಾಯಲ್ಸ್​ ಸೇರಿಕೊಂಡಿದ್ದು, ತಂಡ ಮತ್ತಷ್ಟು ಬಲಿಷ್ಠವಾಗಿದೆ.

ಪೇಟಾ ವರ್ಷದ ಭಾರತೀಯ ಪ್ರಶಸ್ತಿಗೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಆಯ್ಕೆ

 ರಾಜಶಾಹಿ ರಾಯಲ್ಸ್‌ ತಂಡ: ಲಿಟಾನ್ ದಾಸ್, ಅಫಿಫ್ ಹೊಸೈನ್ ಧ್ರೂಬೋ, ಫರ್ಹಾದ್ ರೀಝಾ, ತೈಜುಲ್ ಇಸ್ಲಾಂ, ಅಲೋಕ್ ಕಪಾಲಿ, ಇರ್ಫಾನ್ ಶುಕ್ಕೂರ್, ಮಿನ್ಹಾಜುಲ್ ಅಬೆದಿನ್ ಅಫ್ರಿದಿ, ಅಬು ಜಯೀದ್ ಚೌಧರಿ ರಾಹಿ, ಕಮ್ರುಲ್ ಇಸ್ಲಾಂ ರಬ್ಬಿ, ನಹೀದುಲ್ ಇಸ್ಲಾಂ, ರವಿ ಬೊಪಾರ, ಮೊಹಮ್ಮದ್ ನವಾಝ್‌, ಮೊಹಮ್ಮದ್‌ ಇರ್ಫಾನ್‌, ಹಝ್ರತುಲ್ಲ ಝಝಾಯ್‌, ಶೊಯೇಬ್‌ ಮಲಿಕ್‌.

First published: