ಆರ್​ಆರ್​ ತಂಡ ಸೇರಿಕೊಂಡ ವೆಸ್ಟ್​ ಇಂಡೀಸ್ ಸ್ಫೋಟಕ ಬ್ಯಾಟ್ಸ್​ಮನ್​ ಆ್ಯಂಡ್ರೊ ರಸೆಲ್

ಕೇವಲ ರಸೆಲ್ ಮಾತ್ರವಲ್ಲದೆ ಆರ್​ಆರ್​ ತಂಡದಲ್ಲಿ ಸ್ಟಾರ್ ವಿದೇಶಿ ಆಟಗಾರರಿದ್ದಾರೆ. ಇಂಗ್ಲೆಂಡ್‌ನ ರವಿ ಬೊಪಾರ, ಅಫ್ಘಾನಿಸ್ತಾನದ ಹಝ್ರತುಲ್ಲ ಝಝಾಯ್‌ ಮತ್ತು ಪಾಕಿಸ್ತಾನದ ಮೊಹಮ್ಮದ್‌ ನವಾಝ್‌, ಮೊಹಮ್ಮದ್‌ ಇರ್ಫಾನ್‌, ಶೋಯೇಬ್ ಮಲಿಕ್ ಇದ್ದಾರೆ.

Vinay Bhat | news18-kannada
Updated:November 30, 2019, 3:13 PM IST
ಆರ್​ಆರ್​ ತಂಡ ಸೇರಿಕೊಂಡ ವೆಸ್ಟ್​ ಇಂಡೀಸ್ ಸ್ಫೋಟಕ ಬ್ಯಾಟ್ಸ್​ಮನ್​ ಆ್ಯಂಡ್ರೊ ರಸೆಲ್
ಆಂಡ್ರೊ ರಸೆಲ್
  • Share this:
ಬೆಂಗಳೂರು (ನ. 30): ವೆಸ್ಟ್​ ಇಂಡೀಸ್ ತಂಡದ ಸ್ಟಾರ್ ಆಲ್ರೌಂಡರ್ ಸ್ಫೋಟಕ ಆಟಗಾರ ಆ್ಯಂಡ್ರೊ ರಸೆಲ್ ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿ ರಾಜಶಾಹಿ ರಾಯಲ್ಸ್​ (ಆರ್​ಆರ್​​) ತಂಡ ಸೇರಿಕೊಂಡಿದ್ದಾರೆ.

ಈಗಾಗಲೇ ಸ್ಟಾರ್ ಆಟಗಾರರಿಂದ ಕೂಡಿರುವ ರಾಯಲ್ಸ್​ ತಂಡಕ್ಕೆ ರಸೆಲ್ ಬಂದಿರುವುದು ಮತ್ತಷ್ಟು ಬಲ ಬಂದಂತಾಗಿದೆ. ಮೊನ್ನೆಯಷ್ಟೆ ಪಾಕಿಸ್ತಾನ ತಂಡದ ಪ್ರಮುಖ ಆಟಗಾರ ಶೊಯೇಬ್ ಮಲಿಕ್ ಅವರನ್ನು ಆರ್​ಆರ್​ ಫ್ರಾಂಚೈಸಿ ಖರೀದಿ ಮಾಡಿ ಸುದ್ದಿಯಾಗಿತ್ತು.

ಸದ್ಯ ಮತ್ತೊಬ್ಬ ಹೊಡಿಬಡಿ ಆಟಗಾರ ರಸೆಲ್​ನನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡು ಮತ್ತಷ್ಟು ಬಲಿಷ್ಠವಾಗಿದೆ. ಟಿ-20 ಟೂರ್ನಿಗೆ ಹೇಳಿಮಾಡಿಸಿದ ಆಟಗಾರನಾಗಿರುವ ರಸೆಲ್, ಕಳೆದ ಬಾರಿಯ ಐಪಿಎಲ್​ನಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದರು.

AUS vs PAK: ವಾರ್ನರ್ ದಾಖಲೆಯ ತ್ರಿಶತಕ; 589 ರನ್​ಗೆ ಡಿಕ್ಲೇರ್ ಘೋಷಿಸಿದ ಆಸ್ಟ್ರೇಲಿಯಾ!

ಹೀಗಾಗಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿ ರಸೆಲ್​ಗೆ ಸಾಕಷ್ಟು ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ರಾಜಶಾಹಿ ರಾಯಲ್ಸ್​ ಫ್ರಾಂಚೈಸಿ ಇವರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕೇವಲ ರಸೆಲ್ ಮಾತ್ರವಲ್ಲದೆ ಆರ್​ಆರ್​ ತಂಡದಲ್ಲಿ ಸ್ಟಾರ್ ವಿದೇಶಿ ಆಟಗಾರರಿದ್ದಾರೆ. ಇಂಗ್ಲೆಂಡ್‌ನ ರವಿ ಬೊಪಾರ, ಅಫ್ಘಾನಿಸ್ತಾನದ ಹಝ್ರತುಲ್ಲ ಝಝಾಯ್‌ ಮತ್ತು ಪಾಕಿಸ್ತಾನದ ಮೊಹಮ್ಮದ್‌ ನವಾಝ್‌, ಮೊಹಮ್ಮದ್‌ ಇರ್ಫಾನ್‌, ಶೋಯೇಬ್ ಮಲಿಕ್ ಇದ್ದಾರೆ.

ಡಿ. 11 ರಿಂದ ಬಿಬಿಎಲ್ 7ನೇ ಆವೃತ್ತಿ ಆರಂಭವಾಗಲಿದ್ದು, ಒಟ್ಟು 7 ಫ್ರಾಂಚೈಸಿಗಳು ಟ್ರೋಫಿಗಾಗಿ ಹೋರಾಟ ನಡೆಸಲಿದೆ.ಈ ಬಾರಿಯ ಐಪಿಎಲ್​ನಲ್ಲಿ ಗೇಲ್ ಶತಕದ ದಾಖಲೆ ಪುಡಿಮಾಡುವವರು ಇವರಲ್ಲಿ ಯಾರು?

ರಾಜಶಾಹಿ ರಾಯಲ್ಸ್‌ ತಂಡ: ಲಿಟಾನ್ ದಾಸ್, ಅಫಿಫ್ ಹೊಸೈನ್ ಧ್ರೂಬೋ, ಅಬು ಜಯೇದ್ ರಹಿ, ಫರ್ಹಾದ್ ರೀಝಾ, ತೈಜುಲ್ ಇಸ್ಲಾಂ, ಅಲೋಕ್ ಕಪಾಲಿ, ಇರ್ಫಾನ್ ಸುಕ್ಕೂರ್, ಕಮ್ರುಲ್ ಇಸ್ಲಾಂ ರಬ್ಬಿ, ನಹೀದುಲ್ ಇಸ್ಲಾಂ, ರವಿ ಬೊಪಾರ, ಮೊಹಮ್ಮದ್ ನವಾಝ್‌, ಮೊಹಮ್ಮದ್‌ ಇರ್ಫಾನ್‌, ಹಝ್ರತುಲ್ಲ ಝಝಾಯ್‌, ಶೊಯೇಬ್‌ ಮಲಿಕ್‌, ಆ್ಯಂಡ್ರೊ ರಸೆಲ್.

First published:November 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ