Sourav Ganguly: ಬಿಸಿಸಿಐನಲ್ಲಿ ದಾದಾಗಿರಿಗೆ ಬ್ರೇಕ್? ಹಲವು ಅನುಮಾನಗಳಿಗೆ ಕಾರಣವಾಯ್ತು ಹೊಸ ಪುಸ್ತಕ
2017 ರಲ್ಲಿ ಬಿಸಿಸಿಐನ ಆಡಳಿತದಲ್ಲಿ ಪಾರದರ್ಶಕತೆ ತರುವ ಸಲುವಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿನೋದ್ ರಾಯ್ ನೇತೃತ್ವದ ಕ್ರಿಕೆಟ್ ಆಡಳಿತಾಧಿಕಾರಿಗಳ ಹೊಸ ಸಮಿತಿಯನ್ನು ರಚನೆ ಮಾಡಲಾಗಿತ್ತು. ಈ ಸಮಿತಿಯಲ್ಲಿ ರಾಮಚಂದ್ರ ಗುಹಾ ಕೂಡ ಸದಸ್ಯರಾಗಿದ್ದರು.
news18-kannada Updated:November 24, 2020, 4:10 PM IST

sourav ganguly
- News18 Kannada
- Last Updated: November 24, 2020, 4:10 PM IST
ಟೀಮ್ ಇಂಡಿಯಾಗೆ ಹೊಸ ರೂಪುರೇಷೆ ಕೊಟ್ಟ ನಾಯಕ. ಭಾರತೀಯ ಕ್ರಿಕೆಟ್ನ್ನು ಉತ್ತುಂಗಕ್ಕೇರಿಸಿದ ಆಟಗಾರ. ತಂಡಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧನಾಗಿದ್ದ ಕಪ್ತಾನ. ತಮ್ಮ ಆಕ್ರಮಣಕಾರಿ ಮನೋಭಾವದಿಂದಲೇ ಎದುರಾಳಿಗಳನ್ನು ನಡುಗಿಸಿದ್ದ ಕ್ಯಾಪ್ಟನ್. ಹೀಗೆ ಹೇಳುತ್ತಾ ಹೋದರೆ ಸೌರವ್ ಗಂಗೂಲಿ ಎಂಬ ಟೀಮ್ ಇಂಡಿಯಾ ಮಾಜಿ ನಾಯಕನ ಮುಖ ಕಣ್ಮುಂದೆ ಬರುತ್ತದೆ. ಏಕೆಂದರೆ ಫಿಕ್ಸಿಂಗ್ ಸುಳಿಗೆ ಸಿಲುಕಿ ನಲುಗಿ ಹೋಗಿದ್ದ ಭಾರತೀಯ ಕ್ರಿಕೆಟ್ ತಂಡವನ್ನು ಮತ್ತೆ ವಿಶ್ವದಲ್ಲೇ ಗುರುತಿಸುವಂತೆ ಮಾಡಿದ್ದು ಇದೇ ದಾದಾ. ಹೀಗಾಗಿ 2019 ರಲ್ಲಿ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಭಾರತೀಯ ಕ್ರಿಕೆಟ್ನಲ್ಲಿ ಹೊಸ ಪರ್ವ ಶುರುವಾಗಲಿದೆ ಎಂದು ಬಣ್ಣಿಸಲಾಗಿತ್ತು. ಆದರೀಗ ಬಿಸಿಸಿಐನಲ್ಲಿ ದಾದಾಗಿರಿ ನಡೆಯುತ್ತಿಲ್ಲ ಎಂಬ ಅನುಮಾನಗಳು ಹುಟ್ಟಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಇತ್ತೀಚೆಗೆ ಬಿಡುಗಡೆಯಾದ ಒಂದು ಪುಸ್ತಕ.
ಖ್ಯಾತ ಇತಿಹಾಸ ತಜ್ಞರ, ಸುಪ್ರೀಂಕೋರ್ಟ್ ನೇಮಿತ ಕ್ರಿಕೆಟ್ ಆಡಳಿತ ಮಂಡಳಿಯ ಸದಸ್ಯರಾಗಿದ್ದ ರಾಮಂಚಂದ್ರ ಗುಹಾ ಅವರು ಇತ್ತೀಚೆಗೆ 'ಕಾಮನ್ವೆಲ್ತ್ ಆಫ್ ಕ್ರಿಕೆಟ್ ಎಂಬ ಪುಸ್ತಕ ಬಿಡುಗಡೆ ಮಾಡಿದ್ದರು. ಈ ಪುಸ್ತಕದಲ್ಲಿ ಹಲವು ಅಚ್ಚರಿಯ ಸಂಗತಿಗಳನ್ನು ಬಹಿರಂಗ ಪಡಿಸಿದ್ದಾರೆ. ಗುಹಾ ಅವರು ತಮ್ಮ ಪುಸ್ತಕದಲ್ಲಿ ಭಾರತೀಯ ಕ್ರಿಕೆಟ್ ಸಂಸ್ಥೆಯ ರಾಜಕೀಯವನ್ನು ಅನಾವರಣಗೊಳಿಸಿದ್ದಾರೆ. 2017 ರಲ್ಲಿ ಬಿಸಿಸಿಐನ ಆಡಳಿತದಲ್ಲಿ ಪಾರದರ್ಶಕತೆ ತರುವ ಸಲುವಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿನೋದ್ ರಾಯ್ ನೇತೃತ್ವದ ಕ್ರಿಕೆಟ್ ಆಡಳಿತಾಧಿಕಾರಿಗಳ ಹೊಸ ಸಮಿತಿಯನ್ನು ರಚನೆ ಮಾಡಲಾಗಿತ್ತು. ಈ ಸಮಿತಿಯಲ್ಲಿ ರಾಮಚಂದ್ರ ಗುಹಾ ಕೂಡ ಸದಸ್ಯರಾಗಿದ್ದರು. ಆದರೆ, ಆ ಬಳಿಕ ಕೆಲ ವೈಯಕ್ತಿಕ ಕಾರಣ ನೀಡಿ ಗುಹಾ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ 2019, ಅಕ್ಟೋಬರ್ 23 ರಂದು ಬಿಸಿಸಿಐನ ನೂತನ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಪಟ್ಟಕ್ಕೇರಿದ್ದರು. ಹೀಗಾಗಿಯೇ ಟೀಮ್ ಇಂಡಿಯಾದಲ್ಲಿ ಹಲವು ಬದಲಾವಣೆ ಆಗಲಿವೆ. ಬಿಸಿಸಿಐನಲ್ಲಿ ಹೊಸ ಶಕೆ ಶುರುವಾಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಆದರೆ ಇದೀಗ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ, ಕೆಲ ಫ್ಯಾಂಟಸಿ ಲೀಗ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರತಿಷ್ಠಿತ ಹುದ್ದೆಯಲ್ಲಿದ್ದರೂ ಗಂಗೂಲಿ ಹಣಗಳಿಸುವ ಸಲುವಾಗಿ ಫ್ಯಾಂಟಸಿ ಕ್ರಿಕೆಟ್ ಲೀಗ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಂಡಳಿಯ ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿಯೇ ಈ ರೀತಿ ವರ್ತಿಸಿದ್ರೆ ಬಿಸಿಸಿಐ ಸಂಸ್ಥೆಯ ನೈತಿಕ ಮಾನದಂಡಗಳು ಕುಸಿಯಲಿದೆ ಎಂದು ರಾಮಚಂದ್ರ ಗುಹಾ ತಿಳಿಸಿದ್ದಾರೆ.
ಗಂಗೂಲಿ ನಡೆಯನ್ನು ಖಂಡಿಸಿರುವ ಗುಹಾ, ಆನ್ಲೈನ್ ಗೇಮ್ವೊಂದನ್ನು ಬಿಸಿಸಿಐ ಅಧ್ಯಕ್ಷರೇ ಪ್ರತಿನಿಧಿಸುತ್ತಿದ್ದಾರೆ. ಭಾರತೀಯ ಕ್ರಿಕೆಟಿಗರಲ್ಲಿ ಹಣಕ್ಕಾಗಿ ಈ ರೀತಿಯ ದುರಾಸೆ ಕಂಡು ಅಚ್ಚರಿಯಾಗಿದೆ ಎಂದಿದ್ದಾರೆ. ಟೀಮ್ ಇಂಡಿಯಾ ಮಾಜಿ ಆಟಗಾರ ಬಿಶನ್ ಸಿಂಗ್ ಬೇಡಿ ಅಫ್ಘಾನ್ ಆಟಗಾರರಿಗೆ ತರಬೇತಿ ನೀಡಲು ಕಾಬೂಲ್ ಹೋಗುವುದಾಗಿ ತಿಳಿಸಿದ್ದರು. ಇದು ನನಗೆ ಸಂತೋಷವನ್ನುಂಟು ಮಾಡಿತ್ತು. ಅವರು ಕ್ರಿಕೆಟ್ಗಾಗಿ ಎಲ್ಲಿ ಬೇಕಾದರೂ ಹೋಗಬಹುದು. ಆದರೆ ಅದು ಹಣಕ್ಕಾಗಿ ಅಲ್ಲ. ಸ್ವಲ್ಪ ಹಣಕ್ಕಾಗಿ ಗಂಗೂಲಿ ತತ್ವ ಆದರ್ಶಗಳೊಂದಿಗೆ ಏಕೆ ರಾಜಿ ಮಾಡಿಕೊಳ್ಳುತ್ತಿದ್ದಾನೆ ಎಂದು ಗುಹಾ ಪ್ರಶ್ನಿಸಿದ್ದಾರೆ.
ಇನ್ನು ಬಿಸಿಸಿಐ ಆಡಳಿತ ಮಂಡಳಿಯಲ್ಲಿರುವ ರಾಜಕೀಯವನ್ನು ಉಲ್ಲೇಖಿಸಿರುವ ಗುಹಾ, ಭಾರತೀಯ ಕ್ರಿಕೆಟ್ ಸಂಸ್ಥೆಯನ್ನು ಕೇಂದ್ರ ಸಚಿವ ಅಮಿತ್ ಶಾ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಮುನ್ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗೆಯೇ ರಾಜ್ಯ ಕ್ರಿಕೆಟ್ ಸಂಸ್ಥೆಗಳನ್ನ ಅವರ ಕುಟುಂಬಸ್ಥರು ನಡೆಸುತ್ತಿದ್ದಾರೆ. ಆ ಮೂಲಕ ಬಿಸಿಸಿಐನಲ್ಲಿ ಸೌರವ್ ಗಂಗೂಲಿ ಅವರ ದಾದಾಗಿರಿಗಿಂತ ಹೊರಗಿನ ನಾಯಕರ ಆಟ ನಡೆಯುತ್ತಿದೆ ಎಂದು ಗುಹಾ ತಿಳಿಸಿದ್ದಾರೆ.
ಪ್ರಸ್ತುತ ಭಾರತೀಯ ಕ್ರಿಕೆಟ್ ಸಂಸ್ಥೆ ಒಳಸಂಚು ಮತ್ತು ಸ್ವಜನಪಕ್ಷಪಾತ ಕಡೆಗೆ ಜಾರಿದೆ. ಇದರಿಂದ ರಣಜಿ ಆಟಗಾರರಿಗೆ ಗೌರವ ಧನ ನೀಡಲು ಸಾಕಷ್ಟು ತಡ ಮಾಡಲಾಗುತ್ತಿದೆ. ಸೌರವ್ ಗಂಗೂಲಿ ಅಧ್ಯಕ್ಷರಾದ ಬಳಿಕ ಮಂಡಳಿಯಿಂದ ಉತ್ತಮ ಆಡಳಿತ ನಿರೀಕ್ಷಿಸಲಾಗಿತ್ತು. ಆದರೆ ಅಂತಹದ್ದು ಏನೂ ಸಂಭವಿಸಿಲ್ಲ ಎಂದು ಗುಹಾ ಹೇಳಿದರು.
ಇದನ್ನೂ ಓದಿ: IPL 2021: RCB ಖರೀದಿಸಲು ಕಣ್ಣಿಟ್ಟಿರುವ ಐವರು ಆಟಗಾರರು ಇವರೇ..!
ಖ್ಯಾತ ಇತಿಹಾಸ ತಜ್ಞರ, ಸುಪ್ರೀಂಕೋರ್ಟ್ ನೇಮಿತ ಕ್ರಿಕೆಟ್ ಆಡಳಿತ ಮಂಡಳಿಯ ಸದಸ್ಯರಾಗಿದ್ದ ರಾಮಂಚಂದ್ರ ಗುಹಾ ಅವರು ಇತ್ತೀಚೆಗೆ 'ಕಾಮನ್ವೆಲ್ತ್ ಆಫ್ ಕ್ರಿಕೆಟ್ ಎಂಬ ಪುಸ್ತಕ ಬಿಡುಗಡೆ ಮಾಡಿದ್ದರು. ಈ ಪುಸ್ತಕದಲ್ಲಿ ಹಲವು ಅಚ್ಚರಿಯ ಸಂಗತಿಗಳನ್ನು ಬಹಿರಂಗ ಪಡಿಸಿದ್ದಾರೆ. ಗುಹಾ ಅವರು ತಮ್ಮ ಪುಸ್ತಕದಲ್ಲಿ ಭಾರತೀಯ ಕ್ರಿಕೆಟ್ ಸಂಸ್ಥೆಯ ರಾಜಕೀಯವನ್ನು ಅನಾವರಣಗೊಳಿಸಿದ್ದಾರೆ.