Yuvraj Singh Biopic: ಯುವರಾಜ್ ಸಿಂಗ್ ಸಿನಿಮಾ ಕೈಬಿಟ್ಟ ಕರಣ್ ಜೋಹರ್! ‘ಸಿಕ್ಸರ್ ಕಿಂಗ್‘ ಮಾಡಿದ ಆ ಒಂದು ಡಿಮ್ಯಾಂಡ್ ಯಾವುದು?

ತಮ್ಮ ಜೀವನ ಆಧರಿಸಿದ ಸಿನಿಮಾದಲ್ಲಿ ಬಾಲಿವುಡ್ ನ ಸ್ಟಾರ್ ನಟರ ನಟಿಸಬೇಕೆಂದು ಯುವರಾಜ್ ಸಿಂಗ್ ಡಿಮ್ಯಾಂಡ್ ಮಾಡಿದ್ದಾರಂತೆ. ಇದು ಕರಣ್ ಜೋಹರ್ ಗೆ ಸ್ವಲ್ಪವೂ ಇಷ್ಟವಾಗಲಿಲ್ಲ ಹೀಗಾಗಿ ಸಿನಿಮಾದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಕರಣ್ ಜೋಹರ್-ಯುವರಾಜ್ ಸಿಂಗ್

ಕರಣ್ ಜೋಹರ್-ಯುವರಾಜ್ ಸಿಂಗ್

  • Share this:
    ಯುವರಾಜ್ ಸಿಂಗ್(Yuvraj Singh ), ಭಾರತ ಕಂಡ ಅತ್ಯುತ್ತಮ ಕ್ರಿಕೆಟಿಗ(Cricketer). 2012ರ ವಿಶ್ವಕಪ್(World cup) ಪಂದ್ಯದ ಹೀರೋ. ಕ್ಯಾನ್ಸರ್(Cancer) ವಿರುದ್ಧ ಹೋರಾಡಿ ಜಯಶಾಲಿಯಾದ ಮೃತ್ಯುಂಜಯ ಯುವರಾಜ್ ಸಿಂಗ್. "ಸಿಕ್ಸರ್ ಕಿಂಗ್(Sixer King)" ಎಂದು ಬಿರುದು ಪಡೆದುಕೊಂಡ ಕ್ರಿಕೆಟಿಗ ಯುವರಾಜ್ ಸಿಂಗ್. ಇವರ ಜೀವನಾಧಾರಿತ ಸಿನಿಮಾ ಮಾಡಲು ಬಾಲಿವುಡ್ ನಿರ್ದೇಶಕ-ನಿರ್ಮಾಪಕ ಕರಣ್ ಜೋಹರ್(Bollywood Director-Producer Karan Johar) ನಿರ್ಧರಿಸಿದ್ದರು. ಈ ಬಗ್ಗೆ ಒಂದು ಸುತ್ತಿನ ಮಾತುಕತೆಯನ್ನ ಯುವರಾಜ್ ಸಿಂಗ್ ಜೊತೆ ನಡೆಸಿದ್ದರು. ತಮ್ಮ ಜೀವನಾಧಾರಿತ ಕಥೆಯನ್ನು ಸಿನಿಮಾ ಮಾಡಲು ಯುವರಾಜ್ ಸಿಂಗ್ ಒಪ್ಪಿಗೆ ಸಹ ಸೂಚಿಸಿದ್ದರು. ಎಲ್ಲವೂ ಇನ್ನೇನು ಆರಂಭವಾಗಬೇಕು ಎನ್ನುವಾಗಲೇ, ಬಾಲಿವುಡ್ ನಲ್ಲಿ ಮತ್ತೊಂದು ರೂಮರ್ ಹರಿದಾಡುತ್ತಿದೆ. ಯುವರಾಜ್ ಸಿಂಗ್ ಸಿನಿಮಾವನ್ನು ಕರಣ್ ಜೋಹರ್ ನಿರ್ಮಿಸಲಿದ್ದಾರೆ ಅನ್ನುವಾಗಲೇ, ಈ ಸಿನಿಮಾದಿಂದ ಕರಣ್ ಜೋಹರ್ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ. ಯುವರಾಜ್ ಸಿಂಗ್ ಮಾಡಿದ ಆ ಒಂದು ಡಿಮ್ಯಾಂಡ್ ನಿಂದ ಕರಣ್ ಜೋಹರ್ ನಿರ್ಮಿಸಲಿರುವ ಸಿನಿಮಾವನ್ನು ಕೈಬಿಟ್ಟಿದ್ದಾರೆ.

    ತಮ್ಮ ಜೀವನ ಆಧರಿಸಿದ ಸಿನಿಮಾದಲ್ಲಿ ಬಾಲಿವುಡ್ ನ ಸ್ಟಾರ್ ನಟರ ನಟಿಸಬೇಕೆಂದು ಯುವರಾಜ್ ಸಿಂಗ್ ಡಿಮ್ಯಾಂಡ್ ಮಾಡಿದ್ದಾರಂತೆ. ಇದು ಕರಣ್ ಜೋಹರ್ ಗೆ ಸ್ವಲ್ಪವೂ ಇಷ್ಟವಾಗಲಿಲ್ಲ ಹೀಗಾಗಿ ಸಿನಿಮಾದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ. ಯುವರಾಜ್ ಸಿಂಗ್ ತಮ್ಮ ಪಾತ್ರವನ್ನು ರಣವೀರ್ ಸಿಂಗ್ ಅಥವಾ ರಣಬೀರ್ ಕಪೂರ್ ಮಾಡಬೇಕೆಂದು ಪಟ್ಟು ಹಿಡಿದಿದ್ದರಂತೆ. ಆದರೆ ಕರಣ್ ಜೋಹರ್ ಸಿನಿಮಾದ ಬಂಡವಾಳದ ಸಮಸ್ಯೆಗಳನ್ನು ಮುಂದಿಟ್ಟು ಇಬ್ಬರು ನಟರು ಬೇಡ ಎಂದು ಹೇಳಿದ್ದರಂತೆ. ಅಷ್ಟೇ ಅಲ್ಲದೆ ಯುವ ನಟನೊಬ್ಬನ ಹೆಸರನ್ನು ಮುಂದಿಟ್ಟಿದ್ದರಂತೆ. ಆದರೆ ಯುವರಾಜ್ ಸಿಂಗ್ ಗೆ ಇದು ಇಷ್ಟವಾಗಲಿಲ್ಲ. ಹೀಗಾಗಿ ಇಬ್ಬರ ನಡುವೆ ಕಿರಿಕ್ ಆಗಿದ್ದು, ಯುವರಾಜ್ ಸಿಂಗ್ ಸಿನಿಮಾವನ್ನ ಕರಣ್ ಜೋಹರ್ ಕೈಬಿಟ್ಟಿದ್ದಾರೆ ಅಂತ ಹೇಳಲಾಗುತ್ತಿದೆ.

    ಇದನ್ನೂ ಓದಿ:Siddharth: ಚೀಟರ್ಸ್ ಟ್ವೀಟ್ ಬಗ್ಗೆ ನಟ ಸಿದ್ಧಾರ್ಥ್ ಸ್ಪಷ್ಟನೆ: ನಾನು ಜವಾಬ್ದಾರನಲ್ಲ ಅಂದಿದ್ದು ಯಾರಿಗೆ?

    ಈಗಾಗಲೆ ನಾಲ್ಕು ಕ್ರಿಕೆಟ್ ದಿಗ್ಗಜರ ಜೀವನಾಧಾರಿತ ಸಿನಿಮಾ ಆಗಿವೆ. ಸಚಿನ್ ತೆಂಡೂಲ್ಕರ್ ಲೈಫ್ ಹಿಸ್ಟರಿ ಕುರಿತು "ಮಿಲಿಯನ್ ಡಾಲರ್ ಡ್ರೀಮ್ " ಹೆಸರಿನ ಡಾಕ್ಯುಮೆಂಟರಿ ಬಿಡುಗಡೆಯಾಗಿತ್ತು. ಮೊಹಮ್ಮದ್ ಅಜರುದ್ದಿನ್ ಕುರಿತು "ಅಜರ್" ಸಿನಿಮಾ ತೆರೆಕಂಡಿದೆ. ಇನ್ನೂ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಅವರ ಜೀವನಾಧಾರಿತ ಸಿನಿಮಾ ಅದೇ ಹೆಸರಿನಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಇನ್ನು ಕಪಿಲ್ ದೇವ್ ಜೀವನಾಧಾರಿತ ಸಿನಿಮಾ "83" ತೆರೆಗೆ ಬರಲು ಸಜ್ಜಾಗಿದೆ. ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

    ಯುವರಾಜ್ ಸಿಂಗ್ ಜೀವನ ಕೂಡ ಹಲವು ಏರಿಳಿತಗಳಿಂದ ಕೂಡಿದೆ. ಅಪ್ಪನ ಶಿಸ್ತಿನ ಪ್ರಕಾರ ಯುವರಾಜ್ ಸಿಂಗ್ ತಮ್ಮ ಬಾಲ್ಯವನ್ನು ಕಳೆದರು. ರಣಜಿ ಕ್ರಿಕೆಟ್ ಆಡುವಾಗಲೇ ಯುವಿ ಸ್ಟಾರ್ ಆಗಿದ್ದರು. ಭಾರತದ ತಂಡ ಸೇರಿದ ಮೇಲೆ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ನಲ್ಲಿಅದ್ಭುತ ಪ್ರದರ್ಶನ ನೀಡಿ ಮಿಂಚಿದರು. 2012ರ ವಿಶ್ವಕಪ್ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಟೂರ್ನಿ ನಡೆಯುವಾಗಲೇ ಕ್ಯಾನ್ಸರ್ ಗೆ ತುತ್ತಾಗಿದ್ದರು. ಕ್ಯಾನ್ಸರ್ ಜೊತೆಗೆ ಹೋರಾಟ ನಡೆಸಿ ಬಂದು ಮತ್ತೆ ಟೀಮ್ ಇಂಡಿಯಾಗ ಪಡೆ ಸೇರಿದ್ದರು. ಹೀಗಾಗಿ ಹಲವರು ಯುವರಾಜ್ ಸಿಂಗ್ ಜೀವನ ಆಧರಿಸಿ ಸಿನಿಮಾ ಬರಬೇಕೆಂದು ಒತ್ತಾಯ ಮಾಡುತ್ತಿದ್ದರು. ಹೀಗಾಗಿ ಕರಣ್ ಜೋಹರ್ ಈ ಸಿನಿಮಾ ನಿರ್ಮಿಸಲು ಮುಂದಾಗಿದ್ದರು, ಆದರೆ ಇಬ್ಬರ ನಡುವಿನ ಕಿರಿಕ್ ನಿಂದ ಸಿನಿಮಾ ನಿಂತಿದೆ. ಮತ್ತೆ ಯಾವ ನಿರ್ಮಾಪಕ ಈ ಸಿನಿಮಾ ಮಾಡಲು ಮುಂದಾಗುತ್ತಾನೆ ಅಂತ ಕಾದು ನೋಡಬೇಕಿದೆ.

    ವರದಿ - ವಾಸುದೇವ್. ಎಂ
    Published by:Latha CG
    First published: