• Home
  • »
  • News
  • »
  • sports
  • »
  • BBCCI: ಸಮಾನ ವೇತನ ಘೋಷಣೆ: ಬಿಸಿಸಿಐ ನಿರ್ಧಾರಕ್ಕೆ ಬಾಲಿವುಡ್‌ ಮಂದಿಯ ಬಹುಪರಾಕ್

BBCCI: ಸಮಾನ ವೇತನ ಘೋಷಣೆ: ಬಿಸಿಸಿಐ ನಿರ್ಧಾರಕ್ಕೆ ಬಾಲಿವುಡ್‌ ಮಂದಿಯ ಬಹುಪರಾಕ್

ಸಮಾನ ವೇತನ ಘೋಷಣೆ

ಸಮಾನ ವೇತನ ಘೋಷಣೆ

ಬಿಸಿಸಿಐ ಕಾರ್ಯದರ್ಶಿ ಟ್ವೀಟ್‌ ಮಾಡಿದ ಬೆನ್ನಲ್ಲೇ ಐತಿಹಾಸಿಕ ನಿರ್ಧಾರಕ್ಕೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗಿದೆ. ಕ್ರಿಕೆಟ್‌ ಲೋಕದ ದಿಗ್ಗಜರು, ಜನಸಾಮಾನ್ಯರಿಂದ ಹಿಡಿದು ಬಾಲಿವುಡ್ ಸೆಲೆಬ್ರಿಟಿಗಳೆಲ್ಲಾ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ ನೀಡುವ ಬಿಸಿಸಿಐ ನಿರ್ಧಾರವನ್ನು ಶ್ಲಾಘಿಸಿದ್ದಾರೆ.

ಮುಂದೆ ಓದಿ ...
  • Trending Desk
  • Last Updated :
  • New Delhi, India
  • Share this:

    ಭಾರತ ಪುರುಷರ ಕ್ರಿಕೆಟ್ ತಂಡ ಪಡೆಯುವ ಸಂಭಾವನೆಯಷ್ಟೇ ಇನ್ನು ಮುಂದೆ ಮಹಿಳಾ ಆಟಗಾರ್ತಿಯರಿಗೂ  ವೇತನ ನೀಡಬೇಕೆಂಬ ಸಮಾನ ವೇತನ ಐತಿಹಾಸಿಕ ನಿರ್ಧಾರವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಹೊರಡಿಸಿದೆ. ಗುರುವಾರ ಬಿಸಿಸಿಐ ಕಾರ್ಯದರ್ಶಿ ಜಯ ಶಾ (Jay Shah) ಅವರು ಈ ಬಗ್ಗೆ ಟ್ವಿಟರ್‌ ಸೇರಿದಂತೆ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ (Social Media) ಖಾತೆಗಳಲ್ಲಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ.


    ಐತಿಹಾಸಿಕ ನಿರ್ಧಾರಕ್ಕೆ ಪ್ರಶಂಸೆಯ ಸುರಿಮಳೆ
    ಬಿಸಿಸಿಐ ಕಾರ್ಯದರ್ಶಿ ಟ್ವೀಟ್‌ ಮಾಡಿದ ಬೆನ್ನಲ್ಲೇ ಐತಿಹಾಸಿಕ ನಿರ್ಧಾರಕ್ಕೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗಿದೆ. ಕ್ರಿಕೆಟ್‌ ಲೋಕದ ದಿಗ್ಗಜರು, ಜನಸಾಮಾನ್ಯರಿಂದ ಹಿಡಿದು ಬಾಲಿವುಡ್ ಸೆಲೆಬ್ರಿಟಿಗಳೆಲ್ಲಾ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ ನೀಡುವ ಬಿಸಿಸಿಐ ನಿರ್ಧಾರವನ್ನು ಶ್ಲಾಘಿಸಿದ್ದಾರೆ.


    ಬಾಲಿವುಡ್‌ ನಟ, ನಟಿಯರಿಂದ ಮೆಚ್ಚುಗೆಯ ಪೋಸ್ಟ್‌
    ನಟ ಶಾರುಖ್ ಖಾನ್, ನಟಿ ಪ್ರಿಯಾಂಕಾ ಚೋಪ್ರಾ ಸೇರಿ ಹಲವು ಬಾಲಿವುಡ್‌ ದಿಗ್ಗಜರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಬಿಸಿಸಿಐ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್‌ ಮಾಡಿದ್ದಾರೆ.


    ಇತರರು ಅನುಸರಿಸಲು ದಾರಿ ಮಾಡಿಕೊಡುತ್ತದೆ - ಶಾರುಖ್ ಖಾನ್
    ಟ್ವಿಟ್ಟರ್‌ನಲ್ಲಿ ನಟ ಶಾರುಖ್ ಖಾನ್ "ಎಂತಹ ಉತ್ತಮ ನಿರ್ಧಾರ. ಕ್ರೀಡೆಯು ಅಂತಹ ಸಮೀಕರಣ ಆಗಿರುವುದರಿಂದ ಅದು ಇತರರು ಅನುಸರಿಸಲು ದಾರಿ ಮಾಡಿಕೊಡುತ್ತದೆ" ಎಂದು ಜಯ ಶಾ ಅವರ ಟ್ವೀಟ್‌ ಅನ್ನು ಮರುಟ್ವೀಟ್‌ ಮಾಡುವ ಮೂಲಕ ಈ ರೀತಿಯಾಗಿ ಬರೆದುಕೊಂಡಿದ್ದಾರೆ. ಬಾಲಿವುಡ್‌ನ ಕಿಂಗ್‌ ಖಾನ್‌ ಕೂಡ ಕ್ರಿಕೆಟ್‌ ಪ್ರೇಮಿಯಾಗಿದ್ದು, ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಹೊಂದಿದ್ದಾರೆ.


    ಇದನ್ನೂ ಓದಿ: ಕಿಂಗ್ ಕೊಹ್ಲಿ ಕಂಡು ಆಸ್ಟ್ರೇಲಿಯಾದ ಮಾಜಿ ಆಟಗಾರ ಮಾಡಿದ್ದೇನು? ವಿಡಿಯೋ ಸಿಕ್ಕಾಪಟ್ಟೆ ವೈರಲ್!


    ಇದು ಹಲವುಗಳಲ್ಲಿ ಮೊದಲನೆಯದು ಎಂದ ಪ್ರಿಯಾಂಕಾ ಚೋಪ್ರಾ
    ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, "ಸಮಾನತೆ ಮತ್ತು ವೇತನ ಸಮಾನತೆಯನ್ನು ಖಾತ್ರಿಪಡಿಸುವಲ್ಲಿ ಬಿಸಿಸಿಐ ವತಿಯಿಂದ ಇದು ಒಂದು ಉತ್ತಮ ನಿರ್ಧಾರ. ಇದು ನಮಗೆ ಹಲವುಗಳಲ್ಲಿ ಮೊದಲನೆಯದು ಎಂದು ನಾನು ಭಾವಿಸುತ್ತೇನೆ" ಎಂದು ಬಿಸಿಸಿಐ ನಿರ್ಧಾರವನ್ನು ಹಾಡಿ ಹೊಗಳಿದ್ದಾರೆ.


    ವಿರಾಟ್‌ ಕೊಹ್ಲಿಯ ಪತ್ನಿ ಅನುಷ್ಕಾ ಶರ್ಮಾ ಮೆಚ್ಚುಗೆ
    ನಟಿ ಮತ್ತು ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿಯ ಪತ್ನಿ ಅನುಷ್ಕಾ ಶರ್ಮಾ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬಿಸಿಸಿಐ ಪ್ರಕಟಣೆಯನ್ನು ಹಂಚಿಕೊಂಡಿದ್ದು, ಚಪ್ಪಾಳೆ ಹೊಡೆಯುವ ಎಮೋಜಿಗಳನ್ನು ಪೋಸ್ಟ್‌ ಮಾಡಿ ಖುಷಿ ವ್ಯಕ್ತಪಡಿಸಿದ್ದಾರೆ.


    ಅಭಿನಂದನೆ ತಿಳಿಸಿದ ಸುನೀಲ್ ಶೆಟ್ಟಿ ಮತ್ತು ತಾಪ್ಸಿ ಪನ್ನು
    ಇನ್‌ಸ್ಟಾಗ್ರಾಮ್‌ನಲ್ಲಿ ನಟ ಸುನೀಲ್ ಶೆಟ್ಟಿ ಅವರು ಪೋಸ್ಟ್ ಅನ್ನು ಹಂಚಿಕೊಂಡಿದ್ದು, "ಬಿಸಿಸಿಐ ಮತ್ತು ಈ ಸಬಲೀಕರಣ ಮತ್ತು ಐತಿಹಾಸಿಕ ನಿರ್ಧಾರದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಇದು ನವ ಭಾರತದ ಮೈಲಿಗಲ್ಲಾಗಿದೆ ಮತ್ತು ಆಗಿರಬೇಕು" ಎಂದು ಬರೆದುಕೊಂಡಿದ್ದಾರೆ.


    ಇದನ್ನೂ ಓದಿ: ಬಿಸಿಸಿಐ ಐತಿಹಾಸಿಕ ನಿರ್ಧಾರ, ಮಹಿಳಾ ಕ್ರಿಕೆಟಿಗರಿಗೂ ಪುರುಷರಷ್ಟೇ ಸಮಾನ ವೇತನ


    ಇನ್ನೂ ತಾಪ್ಸಿ ಪನ್ನು ಕೂಡ ಟ್ವೀಟ್ ಮಾಡಿದ್ದು, "ಸಮಾನ ಕೆಲಸಕ್ಕೆ ಸಮಾನ ವೇತನದತ್ತ ಒಂದು ದೊಡ್ಡ ಹೆಜ್ಜೆ. ಉದಾಹರಣೆಯೊಂದಿಗೆ ಮುನ್ನಡೆಸಿದ್ದಕ್ಕಾಗಿ ಬಿಸಿಸಿಐಗೆ ಧನ್ಯವಾದಗಳು." ಎಂದಿದ್ದಾರೆ.


    ಬಿಸಿಸಿಐ ನಿರ್ಧಾರವನ್ನು ಶ್ಲಾಘಿಸಿದ ಅಕ್ಷಯ್ ಕುಮಾರ್
    ನಟ ಅಕ್ಷಯ್ ಕುಮಾರ್ ಕೂಡ " ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಿರ್ಧಾರವನ್ನು ಶ್ಲಾಘಿಸಿ ಪೋಸ್ಟ್‌ ಮಾಡಿದ್ದಾರೆ. "ಇದು ಅದ್ಭುತ ನಿರ್ಧಾರ, ನಮ್ಮ ಮಹಿಳಾ ಆಟಗಾರರು ವೃತ್ತಿಪರ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವಂತೆ ಮಾಡುವಲ್ಲಿ ಬಹಳ ದೂರ ಸಾಗುತ್ತದೆ." ಎಂದು ಹೇಳಿದ್ದಾರೆ.


    ಗುರುವಾರ ಮಹತ್ವದ ಪ್ರಕಟಣೆ ಹೊರಡಿಸಿದ್ದ ಬಿಸಿಸಿಐ


    ಗುರುವಾರ ಬಿಸಿಸಿಐ ಕಾರ್ಯದರ್ಶಿ ಜಯ ಶಾ ಅವರು ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. "ತಾರತಮ್ಯವನ್ನು ಹೊಗಲಾಡಿಸಲು ಬಿಸಿಸಿಐ ಮುಂದಾಗಿದೆ ಎಂದು ಪ್ರಕಟಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಬಿಸಿಸಿಐ ಮಹಿಳಾ ಆಟಗಾರ್ತಿಯರಿಗೆ ಸಮಾನ ವೇತನ ನೀತಿಯನ್ನು ನಾವು ಜಾರಿಗೆ ತಂದಿದ್ದೇವೆ. ಲಿಂಗಾಧಾರಿತ ವೇತನ ಅಸಮಾನತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಪುರುಷರಿಗೆ ನೀಡುವಷ್ಟೇ ಪಂದ್ಯದ ಸಂಭಾವನೆಯನ್ನು ಮಹಿಳಾ ಆಟಗಾರ್ತಿಯರಿಗೆ ನೀಡುತ್ತೇವೆ," ಎಂದು ಬಿಸಿಸಿಐ ಕಾರ್ಯದರ್ಶಿ ಟ್ವೀಟ್‌ ಮಾಡಿದ್ದಾರೆ.


    "ಭಾರತ ತಂಡದ ಪುರುಷ ಆಟಗಾರರು ಪಡೆಯುವ ಪಂದ್ಯದ ಸಂಭಾವನೆಯಷ್ಟೇ ಇನ್ನು ಮುಂದೆ ಮಹಿಳಾ ಆಟಗಾರ್ತಿಯರು ಪಡೆದುಕೊಳ್ಳಲಿದ್ದಾರೆ. ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ. ಏಕದಿನ ಪಂದ್ಯಕ್ಕೆ 6 ಲಕ್ಷ ರೂ ಹಾಗೂ ಟಿ20ಐ ಪಂದ್ಯಕ್ಕೆ 3 ಲಕ್ಷ ರೂ. ಸಮಾನ ವೇತನವನ್ನು ಭಾರತ ಮಹಿಳಾ ತಂಡದ ಆಟಗಾರ್ತಿಯರು ಪಡೆದುಕೊಳ್ಳಲಿದ್ದಾರೆ. ಮಹಿಳಾ ತಂಡಕ್ಕೆ ಸಮಾನ ವೇತನ ನೀಡಲು ನಾವು ಬದ್ದರಾಗಿದ್ದೇವೆ ಹಾಗೂ ಇದಕ್ಕೆ ಬೆಂಬಲ ನೀಡಿದ ಅಪೆಕ್ಸ್‌ ಕೌನ್ಸಿಲ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಜೈ ಹಿಂದ್‌," ಎಂದು ಜಯ ಶಾ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

    Published by:Precilla Olivia Dias
    First published: