T20 World Cup- ರವಿಶಾಸ್ತ್ರಿ 24 ಗಂಟೆ ನಶೆಯಲ್ಲೇ ಇರ್ತಾರೆ: ನಟ ಕೆಆರ್​ಕೆ ಗಂಭೀರ ಆರೋಪ

Kamaal R Khan: ರವಿಶಾಸ್ತ್ರಿ ದಿನದ 24 ಗಂಟೆಯೂ ನಶೆಯಲ್ಲಿದ್ದಂತಿರುತ್ತಾರೆ. ಯಾವ ಮಗುವಾದರೂ ಇವರ ಮುಖ ನೋಡಿದರೆ ನಾಲ್ಕು ದಿನ ಅಳು ನಿಲ್ಲಿಸುವುದೇ ಇಲ್ಲ ಎಂದು ಬಾಲಿವುಡ್ ನಟ ಕಮಾಲ್ ಆರ್ ಖಾನ್ ತಮ್ಮ ವಿಶ್ಲೇಷಣಾತ್ಮಕ ವಿಡಿಯೋವೊಂದರಲ್ಲಿ ಟೀಕಿಸಿದ್ದಾರೆ.

ರವಿಶಾಸ್ತ್ರಿ

ರವಿಶಾಸ್ತ್ರಿ

 • Share this:
  ಬೆಂಗಳೂರು: ಟಿ20 ವಿಶ್ವಕಪ್​ನಲ್ಲಿ (T20 World Cup 2021) ಅಭ್ಯಾಸ ಪಂದ್ಯಗಳನ್ನ ಹೊರತುಪಡಿಸಿ ಉಳಿದಂತೆ ಭಾರತದ ಕ್ರಿಕೆಟ್ ಪ್ರೇಮಿಗಳಿಗೆ (Indian Cricket Fans) ಖುಷಿ ಕೊಡುವ ದಿನ ಇನ್ನೂ ಬಂದಿಲ್ಲ. ಸತತ ಎರಡು ಪಂದ್ಯ ಸೋತಿರುವ ಭಾರತ ಈಗ ನಿರ್ಗಮನದ ಹಾದಿಯಲ್ಲಿದೆ. ಭಾರತ ಸೆಮಿಫೈನಲ್ ತಲುಪಬೇಕಾದರೆ ಪವಾಡವೇ (Miracle should happen if India to qualify for Semifinals) ಆಗಬೇಕಾದೀತು. ವಿರಾಟ್ ಕೊಹ್ಲಿ ನಾಯಕ, ಎಂಎಸ್ ಧೋನಿ ಮೆಂಟರ್ (MS Dhoni as Mentor) ಮತ್ತು ರವಿಶಾಸ್ತ್ರಿ ಕೋಚ್ (India cricket team coach Ravi Shashtri) ಆಗಿರುವ ಟೀಮ್ ಇಂಡಿಯಾದ ಈ ದುಃಸ್ಥಿತಿಗೆ ಏನು ಕಾರಣ? ಈ ಬಗ್ಗೆ ಮಾತನಾಡಿರುವ ಬಾಲಿವುಡ್ ನಟ ಕಮಾಲ್ ಆರ್ ಖಾನ್ (Bollywood actor Kamaal R Khan on Indian Cricket Team) ಭಾರತದ ಕಳಪೆ ಪ್ರದರ್ಶನಕ್ಕೆ ನಾನಾ ಕಾರಣಗಳನ್ನ ಕೊಟ್ಟಿದ್ದಾರೆ. ಕೆಆರ್​ಕೆ ತಮ್ಮ ಯ್ಯೂಟ್ಯೂಬ್ ಚಾನಲ್​ನಲ್ಲಿ (KRK’s Youtube Channel) ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯೋತ್ತರ ವಿಶ್ಲೇಷಣೆ ನಡೆಸುತ್ತಾ ಹಲವು ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

  ಈ ವೇಳೆ ಅವರು ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಬಗ್ಗೆ ಗಂಭೀರವೆನಿಸುವ ಪ್ರತಿಕ್ರಿಯೆ ಕೊಟ್ಟಿದ್ಧಾರೆ. ರವಿಶಾಸ್ತ್ರಿ 24 ಗಂಟೆಯೂ ನಶೆಯಲ್ಲಿರುತ್ತಾರೆ (Ravi Shastri intoxicated all the time) ಎಂದು ಮಾರ್ಮಿಕವಾಗಿ ಹೇಳಿದ್ಧಾರೆ ಕೆಆರ್​ಕೆ. “ಭಾರತ ಬೌಲಿಂಗ್ ಮಾಡುವ ಸಮಯ ಬಂದಾಗ ಮೊದಲ ಓವರ್ ಯಾರಿಗೆ ಕೊಡಬೇಕೆಂದು ಕೊಹ್ಲಿಗೆ ಗೊಂದಲ ಆಗುತ್ತದೆ. ಆಗ ರವಿಶಾಸ್ತ್ರಿಯವರನ್ನ ಕೇಳುತ್ತಾರೆ. ಮೊದಲ ಓವರ್ ಸ್ಪಿನ್ನರ್ ವರುಣ್​ಗೆ ಕೊಡು ಎಂದು ರವಿಶಾಸ್ತ್ರಿ ಹೇಳ್ತಾರೆ. ಇವರು 24 ಗಂಟೆಯೂ ನಶೆಯಲ್ಲಿ ಇರುತ್ತಾರೆ. ಯಾವ ಮಗುವಾದರೂ ಇವರ ಮೊಗ ಕಂಡರೆ ನಾಲ್ಕು ದಿನ ಅಳುತ್ತದೆ” ಎಂದು ನಶೆಯ ಹಾವಭಾವದಲ್ಲಿ ಸಂದರ್ಭವನ್ನ ಕಲ್ಪಿಸಿಕೊಂಡು ಕೆಆರ್​ಕೆ ಅವರು ರವಿಶಾಸ್ತ್ರಿಯನ್ನ ಲೇವಡಿ ಮಾಡಿದ್ದಾರೆ.

  ಟಾಸ್ ಸೋತಾಗಲೇ ಪಂದ್ಯ ಸೋತ ಕೊಹ್ಲಿ:

  ಪಾಕಿಸ್ತಾನ್ ವಿರುದ್ಧದ ಸೋಲಿನಿಂದ ಭಾರತದ ಆಟಗಾರರು ಹೊರಬಂದಿರಲಿಲ್ಲ. ನ್ಯೂಜಿಲೆಂಡ್ ವಿರುದ್ಧ ಟಾಸ್ ಸೋತಾಗ ಕೊಹ್ಲಿ ಓಹ್ ಇವತ್ತಿನ ಪಂದ್ಯವೂ ಹೋಯಿತು ಎಂದು ಆಗಲೇ ನಿರ್ಧಾರ ಮಾಡಿಬಿಟ್ಟಿದ್ದರು ಎಂದು ಕಮಲ್ ರಷೀದ್ ಖಾನ್ ತಮ್ಮ ವಿಡಿಯೋದಲ್ಲಿ ಹೇಳಿದ್ಧಾರೆ.

  ಇಶಾನ್ ಕಿಶನ್ ಯಾವ ಇಂಟರ್​ನ್ಯಾಷನಲ್ ಪ್ಲೇಯರ್?

  ಭಾರತ ತಂಡ ಅಗ್ರಕ್ರಮಾಂಕದಲ್ಲಿ ಬದಲಾವಣೆ ಮಾಡಿದ್ದನ್ನ ಕಮಲ್ ಖಾನ್ ತರಾಟೆಗೆ ತೆಗೆದುಕೊಂಡಿದ್ಧಾರೆ. ಭಾರತದ ಬೆಸ್ಟ್ ಬ್ಯಾಟ್ಸ್​ಮನ್ ರೋಹಿತ್ ಶರ್ಮಾ. ಅವರ ಬದಲು ಇಶಾನ್ ಕಿಶನ್ ಅವರನ್ನ ಓಪನಿಂಗ್ ಕಳುಹಿಸಿದ್ದು ಮೂರ್ಖತನ ಎಂಬುದು ಕಮಾಲ್ ಆರ್ ಖಾನ್ ಅನಿಸಿಕೆ. ಇಶಾನ್ ಕಿಶನ್ ಐಪಿಎಲ್​ನಲ್ಲಿ ಆಡಿದ್ದಾನೆ. ಇದು ಇಂಟರ್​ನ್ಯಾಷನಲ್ ಮ್ಯಾಚ್. ಐಪಿಎಲ್​ನಲ್ಲಿ ಆಡುವುದು ಬೇರೆ ಇಂಟರ್​ನ್ಯಾಷನಲ್ ಬೌಲರ್​ಗಳನ್ನ ಎದುರಿಸುವುದು ಬೇರೆ. ಆತನನ್ನ ಕೊಹ್ಲಿ ಇಂಟರ್​ನ್ಯಾಷನಲ್ ಪ್ಲೇಯರ್ ಮಾಡಿದ್ದಾರೆ. ಅಷ್ಟೇ ಅಲ್ಲ ಓಪನಿಂಗ್​ಗೂ ಕಳುಹಿಸಿದ್ದಾರೆ ಎಂದು ಕೆಆರ್​ಕೆ ಲೇವಡಿ ಮಾಡಿದ್ದಾರೆ. ಇಶಾನ್ ಕಿಶನ್ ಅವರನ್ನ ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ಧೇ ದೊಡ್ಡು ತಪ್ಪು ಎಂದು ಅವರು ಬಣ್ಣಿಸಿದ್ಧಾರೆ.

  ಇದನ್ನೂ ಓದಿ: PAK vs NAM- ಪಾಕಿಸ್ತಾನಕ್ಕೆ ಸತತ 4ನೇ ಗೆಲುವು; ಸೌತ್ ಆಫ್ರಿಕಾ ಸೆಮಿಸ್ ಆಸೆ ಜೀವಂತ

  ಇನ್ನು, ವರುಣ್ ಚಕ್ರವರ್ತಿ ಮತ್ತು ಶಾರ್ದೂಲ್ ಠಾಕೂರ್ ಅವರ ಪ್ರದರ್ಶನವನ್ನೂ ಕಮಾಲ್ ಆರ್ ಖಾನ್ ಟೀಕಿಸಿದ್ಧಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯವಿಡೀ ಭಾರತ ತಂಡದ ಆಟಗಾರರು ಮಾನಸಿಕವಾಗಿ ಸೋಲೊಪ್ಪಿಕೊಂಡಿದ್ದಂತಿತ್ತು. ಯಾವ ಹೋರಾಟವನ್ನೂ ತೋರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಒಂದು ಪಂದ್ಯದಲ್ಲಿ ಸೋಲು ಮತ್ತು ಗೆಲುವು ಇದ್ದದ್ದೇ. ಆದರೆ ಸೋಲುವ ರೀತಿಯಲ್ಲಿ ವ್ಯತ್ಯಾಸ ಇರುತ್ತದೆ. ಪಾಕಿಸ್ತಾನ್ ವಿರುದ್ಧ ಅಫ್ಘಾನಿಸ್ತಾನ್ ಸೋತರೂ ಸುಲಭವಾಗಿ ಬಿಟ್ಟುಕೊಡಲಿಲ್ಲ. 16ನೇ ಓವರ್​ವರೆಗೂ ಯಾವ ತಂಡ ಗೆಲ್ಲುತ್ತದೆ ಎಂದು ಹೇಳಲು ಸಾಧ್ಯವಿರಲಿಲ್ಲ. ಅಷ್ಟು ಹೋರಾಟ ತೋರಿತ್ತು ಅಫ್ಘಾನಿಸ್ತಾನ್ ಎಂದು ಬಾಲಿವುಡ್ ನಟ ತಮ್ಮ ವಿಡಿಯೋದಲ್ಲಿ ಹೇಳಿದ್ಧಾರೆ.
  Published by:Vijayasarthy SN
  First published: