Board Presidents XI vs South Africa: ಡ್ರಾನಲ್ಲಿ ಅಂತ್ಯಕಂಡ ಅಭ್ಯಾಸ ಪಂದ್ಯ; ರೋಹಿತ್ ಶೂನ್ಯವೇ ಹೈಲೈಟ್!

ಸುಮಾರು 9 ತಿಂಗಳ ಬಳಿಕ ಟೆಸ್ಟ್​ಗೆ ಕಾಲಿಟ್ಟ ರೋಹಿತ್ ತಾನು ಎದುರಿಸಿದ 2ನೇ ಎಸೆತದಲ್ಲೇ ನಿರ್ಗಮಿಸಿದರು. ಫಿಲಿಂಡರ್ ಬೌಲಿಂಗ್​ನಲ್ಲಿ ಕೀಪರ್ ಕ್ಲಾಸೆನ್​ಗೆ ಕ್ಯಾಚ್ ನೀಡಿ ರೋಹಿತ್ ಶೂನ್ಯಕ್ಕೆ ಔಟ್ ಆದರು.

Vinay Bhat | news18-kannada
Updated:September 29, 2019, 8:02 AM IST
Board Presidents XI vs South Africa: ಡ್ರಾನಲ್ಲಿ ಅಂತ್ಯಕಂಡ ಅಭ್ಯಾಸ ಪಂದ್ಯ; ರೋಹಿತ್ ಶೂನ್ಯವೇ ಹೈಲೈಟ್!
ರೋಹಿತ್ ಶರ್ಮಾ
  • Share this:
ಬೆಂಗಳೂರು (ಸೆ. 29): ವಿಜಯನಗರಂನ ಡಾ. ಪಿವಿಜಿ ರಾಜು ಕ್ರೀಡಾಂಗಣದಲ್ಲಿ ನಡೆದ ಭಾರತ ಮಂಡಳಿ ಅಧ್ಯಕ್ಷರ ಇಲೆವೆನ್ ಹಾಗೂ ದ. ಆಫ್ರಿಕಾ ನಡುವಣ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ.

ಮೂರು ದಿನಗಳ ಅಭ್ಯಾಸ ಪಂದ್ಯದ ಪೈಕಿ ಮೊದಲ ದಿನ ಮಳೆಗೆ ಆಹುತಿಯಾಗಿತ್ತು. ಎರಡನೇ ದಿನ ಆಫ್ರಿಕಾ ನಾಯಕ ಆ್ಯಡನ್ ಮರ್ಕ್ರಮ್ ಅವರ ಅಮೋಘ ಶತಕ ಹಾಗೂ ತೆಂಬಾ ಬವುಮಾ ಅರ್ಧಶತಕದ ನೆರವಿನಿಂದ ಆಫ್ರಿಕಾ ತಂಡದ 279 ರನ್​ಗೆ ಡಿಕ್ಲೇರ್ ಮಾಡಿಕೊಂಡಿತು. ಆರಂಭದಲ್ಲಿ ಉಮೇಶ್ ಯಾದವ್ ಬೌಲಿಂಗ್​ನಲ್ಲಿ ಡೇನ್ ಎಲ್ಗರ್(6) ಔಟ್ ಆದರೆ, ಥೆನಿಸ್ ಡಿ ಬ್ರೂನ್(6) ಇಶಾನ್ ಮೋರಲ್​ಗೆ ವಿಕೆಟ್ ಒಪ್ಪಿಸಿದರು.

ಈ ಸಂದರ್ಭ ಮರ್ಕ್ರಮ್ ಹಾಗೂ ಜುಬೈರ್ ಹಂಜಾ ಇನ್ನಿಂಗ್ಸ್​ ಕಟ್ಟುವ ಜವಾಬ್ದಾರಿ ಹೊತ್ತರು. ಆದರೆ, ಹಂಜಾ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 22 ರನ್​ಗೆ ನಿರ್ಗಮಿಸಿದರು. ಬಳಿಕ ತೆಂಬಾ ಬವುಮಾ ಜೊತೆಯಾದ ಮರ್ಕ್ರಮ್ ತಂಡಕ್ಕೆ ಆಸರೆಯಾದರು.

ವಿರಾಟ್ ಕೊಹ್ಲಿ ಸೈಲೆಂಟ್ ಕಿಲ್ಲರ್ ಎಂದ ಚಹಾಲ್; ಹಾಗಿದ್ರೆ ಧೋನಿ..?

ಮರ್ಕ್ರಮ್ ಶತಕ ಸಿಡಿಸುತ್ತಿದ್ದಂತೆ ಪಂದ್ಯದಿಂದ ನಿವೃತ್ತಿ ಪಡೆದರು. 118 ಎಸೆತಗಳಲ್ಲಿ 18 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 100 ರನ್​​ ಗಳಿಸಿದರು. ಫಾಫ್ ಡುಪ್ಲೆಸಿಸ್ ಆಟ 9 ರನ್​ಗೆ ಅಂತ್ಯವಾಯಿತು. ಅಂತಿಮವಾಗಿ 279 ರನ್​ಗೆ ಡಿಕ್ಲೇರ್ ಮಾಡಿಕೊಂಡಿತು.

ತೆಂಬಾ 127 ಎಸೆತಗಳಲ್ಲಿ ಅಜೇಯ 87 ರನ್ ಬಾರಿಸಿದರೆ, ಫಿಲಿಂಡರ್ 49 ಎಸೆತಗಳಲ್ಲಿ 48 ರನ್ ಗಳಿಸಿದರು. ಮಂಡಳಿ ಅಧ್ಯಕ್ಷರ ಇಲೆವೆನ್ ತಂಡದ ಪರ ಧರ್ಮೇಂದ್ರಸಿಂಹ ಜಡೇಜಾ 3 ವಿಕೆಟ್ ಕಿತ್ತರೆ, ಉಮೇರ್ಶ ಯಾದವ್ ಹಾಗೂ ಇಶಾನ್ ಪೋರೆಲ್ ತಲಾ 1 ವಿಕೆಟ್ ಪಡೆದಿದ್ದಾರೆ.

ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಅಧ್ಯಕ್ಷರ ಇಲೆವೆನ್ ತಂಡ ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಸುಮಾರು 9 ತಿಂಗಳ ಬಳಿಕ ಟೆಸ್ಟ್​ಗೆ ಕಾಲಿಟ್ಟ ರೋಹಿತ್ ತಾನು ಎದುರಿಸಿದ 2ನೇ ಎಸೆತದಲ್ಲೇ ನಿರ್ಗಮಿಸಿದರು. ಫಿಲಿಂಡರ್ ಬೌಲಿಂಗ್​ನಲ್ಲಿ ಕೀಪರ್ ಕ್ಲಾಸೆನ್​ಗೆ ಕ್ಯಾಚ್ ನೀಡಿ ರೋಹಿತ್ ಶೂನ್ಯಕ್ಕೆ ಔಟ್ ಆದರು. ರೋಹಿತ್ ಬೆನ್ನಲ್ಲೆ ಅಭಿಮನ್ಯು ಈಶ್ವರನ್(13) ಕೂಡ ರಬಾಡಗೆ ವಿಕೆಟ್ ಒಪ್ಪಿಸಿದರು.ಮಯಾಂಕ್ ಅಗರ್ವಾಲ್ ಆಟ 39 ರನ್​ಗೆ ಅಂತ್ಯವಾದರೆ, ಕರುಣ್ ನಾಯರ್ 19 ರನ್​ಗೆ ಸುಸ್ತಾದರು. ಈ ಸಂದರ್ಭ ಪ್ರಿಯಾಂಕ್ ಪಂಚಲ್ ಅತ್ಯುತ್ತಮ ಆಟ ಪ್ರದರ್ಶಿಸಿದರು. 77 ಎಸೆತಗಳಲ್ಲಿ 60 ರನ್​ಗಳ ಕಾಣಿಕೆ ನೀಡಿದರು. ಆ ಬಳಿಕ ಸಿದ್ಧಾರ್ಥ್​ ಲಾಡ್ ಹಾಗೂ ಶ್ರೀಕರ್ ಭರತ್​ರಿಂದ ಅಮೋಘ ಇನ್ನಿಂಗ್ಸ್​ ಮೂಡಿಬಂತು.

ಅದರಲ್ಲಿ ಶ್ರೀಕರ್ 57 ಎಸೆತಗಳಲ್ಲಿ 7 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿ 71 ರನ್ ಚಚ್ಚಿದರು. ಸಿದ್ದೇಶ್ ಅಜೇಯ 52 ರನ್ ಬಾರಿಸಿದರು. ಅಂತಿಮವಾಗಿ ಅಧ್ಯಕ್ಷರ ಇಲೆವೆನ್ ತಂಡ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 265 ರನ್ ಕಲೆಹಾಕಿತು. ಪಂದ್ಯ ಡ್ರಾನಲ್ಲಿ ಅಂತ್ಯಕಂಡಿತು. ಆಫ್ರಿಕಾ ಪರ ಕೇಶ್ವ್ ಮಹರಾಜ್ 3, ಫಿಲಿಂಡನ್ 2, ರಬಾಡ, ಡೇನ್ ಹಾಗೂ ಮುಥುಸ್ವಾಮಿ ತಲಾ 1 ವಿಕೆಟ್ ಪಡೆದರು.

ಅಕ್ಟೋಬರ್ 2 ರಿಂದ ಭಾರತ-ಆಫ್ರಿಕಾ ನಡುವೆ ಮೊದಲ ಟೆಸ್ಟ್​ ಪಂದ್ಯ ಆರಂಭವಾಗಲಿದೆ.
First published:September 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ