Board Presidents XI vs South Africa: ಮೊದಲ ದಿನದ ಅಭ್ಯಾಸ ಪಂದ್ಯ ಮಳೆಗೆ ಆಹುತಿ

ಸುಮಾರು 9 ತಿಂಗಳ ಬಳಿಕ ರೋಹಿತ್ ಟೆಸ್ಟ್​ ಕ್ರಿಕೆಟ್​ಗೆ ಮರಳಿದ್ದು ಸಾಕಷ್ಟು ನಿರೀಕ್ಷೆ ಇಡಲಾಗಿದೆ. ಅಭ್ಯಾಸ ಪಂದ್ಯಕ್ಕೆ ದ. ಆಫ್ರಿಕಾ ಕೂಡ ಸಜ್ಜಾಗಿದ್ದು ಕಗಿಸೊ ರಬಾಡ, ವೆರ್ನಾಲ್ ಫಿಲ್ಯಾಂಡರ್ ಮತ್ತು ಲುಂಗಿ ಎನ್​ಗಿಡಿ ಯಂತಹ ಅಪಾಯಕಾರಿ ಬೌಲರ್​ಗಳೆ ದಂಡೇ ಇದೆ.

Vinay Bhat | news18-kannada
Updated:September 26, 2019, 3:47 PM IST
Board Presidents XI vs South Africa: ಮೊದಲ ದಿನದ ಅಭ್ಯಾಸ ಪಂದ್ಯ ಮಳೆಗೆ ಆಹುತಿ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಸೆ. 26): ವಿಜಯನಗರಂನ ಡಾ. ಪಿವಿಜಿ ರಾಜು ಕ್ರೀಡಾಂಗಣದಲ್ಲಿ ಪಂದ್ಯ ನಡೆಯಬೇಕಿದ್ದ ಭಾರತ ಮಂಡಳಿ ಅಧ್ಯಕ್ಷರ ಇಲೆವೆನ್ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಅಭ್ಯಾಸ ಪಂದ್ಯದ ಮೊದಲ ದಿನ ಮಳೆಗೆ ಆಹುತಿಯಾಗಿದೆ.

ಟಾಸ್ ಪ್ರಕ್ರಿಯೆಯೂ ನಡೆಯದೆ ಮೊದಲ ದಿನದಾಟವನ್ನು ಮುಟುಕುಗೊಳಿಸಲಾಯಿತು. ಮೂರು ದಿನಗಳ ಅಭ್ಯಾಸ ಪಂದ್ಯದ ಪೈಕಿ ಈಗಾಗಲೇ ಮೊದಲ ದಿನ ಕಳೆದುಹೋಗಿದ್ದು ಇನ್ನೆರಡು ದಿನವಷ್ಟೆ ಬಾಕಿ ಇದೆ. ಹೀಗಾಗಿ ನಾಳೆಯಾದರು ಪಂದ್ಯ ಆರಂಭವಾಗುತ್ತಾ ನೋಡಬೇಕಿದೆ.

ಮಂಡಳಿ ಅಧ್ಯಕ್ಷರ ಇಲೆವೆನ್ ತಂಡವನ್ನು ರೋಹಿತ್ ಶರ್ಮಾ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಜೊತೆಗೆ ಮಯಾಂಕ್ ಅಗರ್ವಾಲ್ ಜೊತೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.

 


ಸುಮಾರು 9 ತಿಂಗಳ ಬಳಿಕ ರೋಹಿತ್ ಟೆಸ್ಟ್​ ಕ್ರಿಕೆಟ್​ಗೆ ಮರಳಿದ್ದು ಸಾಕಷ್ಟು ನಿರೀಕ್ಷೆ ಇಡಲಾಗಿದೆ. 2018ರ ಡಿಸೆಂಬರ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಹಿತ್​​ ಕೊನೆಯದಾಗಿ ಟೆಸ್ಟ್​ ಪಂದ್ಯವನ್ನು ಆಡಿದ್ದರು. ಈವರೆಗೆ ಒಟ್ಟು 27 ಟೆಸ್ಟ್​ ಪಂದ್ಯಗಳನ್ನು ಆಡಿರುವ ರೋಹಿತ್ 1585 ರನ್ ಕಲೆಹಾಕಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ 10 ಅರ್ಧಶತಕ ಸೇರಿವೆ. ಗರಿಷ್ಠ ಸ್ಕೋರ್ 177 ರನ್ ಆಗಿದೆ.

ಕೊಹ್ಲಿ ಅಲ್ಲ; ನರೇಂದ್ರ ಮೋದಿ ಬಳಿಕ ದೇಶದಲ್ಲಿ ಜನಮೆಚ್ಚಿದ ವ್ಯಕ್ತಿ ಈ ಕ್ರಿಕೆಟಿಗ!

ಇತ್ತ ಅಭ್ಯಾಸ ಪಂದ್ಯಕ್ಕೆ ದ. ಆಫ್ರಿಕಾ ತಂಡದಲ್ಲಿ ಕಗಿಸೊ ರಬಾಡ, ವೆರ್ನಾಲ್ ಫಿಲ್ಯಾಂಡರ್ ಮತ್ತು ಲುಂಗಿ ಎನ್​ಗಿಡಿ ಯಂತಹ ಅಪಾಯಕಾರಿ ಬೌಲರ್​ಗಳೆ ದಂಡೇ ಇದೆ. ಫಾಫ್ ಡುಪ್ಲೆಸಿಸ್ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇವರ ಜೊತೆಗೆ ಕ್ವಿಂಟನ್ ಡಿಕಾಕ್, ಉಪ ನಾಯಕ ತುಂಬಾ ಬವುಮಾ ಸೇರಿ ಪ್ರಮುಖ ಬ್ಯಾಟ್ಸ್​ಮನ್​ಗಳಿದ್ದಾರೆ. ಅಧ್ಯಕ್ಷರ ಇಲೆವೆನ್ ತಂಡದಲ್ಲಿ ಶುಭ್ಮನ್ ಗಿಲ್, ಅಭಿಮನ್ಯು ಈಶ್ವರನ್, ಪ್ರಿಯಾಂಕ್ ಪಾಂಚಾಲ್ ಸೇರಿ ಪ್ರಮುಖ ಆಟಗಾರರಿದ್ದಾರೆ.

ಇನ್ನು ಟೀಂ ಇಂಡಿಯಾ ಸ್ಟಾರ್ ಬೌಲರ್ ಜಸ್​ಪ್ರೀತ್ ಬುಮ್ರಾ ಇಂಜುರಿಯಿಂದಾಗಿ ಟೆಸ್ಟ್​ ಸರಣಿಯಿಂದ ಹೊರಗುಳಿದಿದ್ದಾರೆ. ಇವರ ಬದಲು ಉಮೇಶ್ ಯಾದವ್ ತಂಡ ಸೇರಿಕೊಂಡಿದ್ದಾರೆ.

ಮಂಡಳಿ ಅಧ್ಯಕ್ಷರ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಮಾಯಾಂಕ್ ಅಗರ್ವಾಲ್, ಪ್ರಿಯಾಂಕ್ ಪಾಂಚಾಲ್, ಎ. ಆರ್. ಈಶ್ವರನ್, ಕರುಣ್ ನಾಯರ್, ಸಿದ್ಧೇಶ್ ಲಾಡ್, ಕೆ.ಎಸ್.ಭರತ್ (ವಿಕೆಟ್ ಕೀಪರ್), ಜಲಜ್ ಸಕ್ಸೇನಾ, ಧರ್ಮೇಂದ್ರಸಿಂಹ ಜಡೇಜಾ, ಅವೇಶ್ ಖಾನ್, ಇಶಾನ್ ಪೊರೆಲ್, ಶಾರ್ದೂಲ್ ಠಾಕೂರ್.

ದಕ್ಷಿಣ ಆಫ್ರಿಕಾ: ಫಾಪ್ ಡುಪ್ಲೆಸಿಸ್ (ನಾಯಕ ), ಟೆಂಬಾ ಬವುಮಾ (ಉಪನಾಯಕ), ಥ್ಯೂನಿಸ್ ಡಿ ಬ್ರೂಯಿನ್, ಕ್ವಿಂಟನ್ ಡಿ ಕಾಕ್, ಡೀನ್ ಎಲ್ಗರ್, ಜುಬೇರ್ ಹಂಝಾ, ಕೇಶವ ಮಹಾರಾಜ್, ಐಡೆನ್ ಮಾರ್ಕ್ರಮ್, ಸೆನುರಾನ್ ಮುತ್ತುಸಾಮಿ, ಲುಂಗಿ ಗಿಡಿ, ಅನ್ರಿಕ್ ನಾರ್ಟ್ಜೆ, ವೆರ್ನಾನ್ ಫಿಲ್ಯಾಂಡರ್, ಡೇನ್ ಪೀಡ್ , ಕಾಗಿಸೊ ರಬಾಡ, ರೂಡಿ ಸೆಕೆಂಡ್.
First published:September 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ