Board Presidents XI vs South Africa: ಅಭ್ಯಾಸ ಪಂದ್ಯದಲ್ಲೇ ರೋಹಿತ್ ಫೇಲ್; ಶೂನ್ಯಕ್ಕೆ ಔಟ್ ಆದ ಹಿಟ್​ಮ್ಯಾನ್​​

ಮೂರು ದಿನಗಳ ಅಭ್ಯಾಸ ಪಂದ್ಯದ ಪೈಕಿ ಮೊದಲ ದಿನ ಮಳೆಗೆ ಆಹುತಿಯಾಗಿತ್ತು. ನಿನ್ನೆ ಎರಡನೇ ದಿನ ಆಫ್ರಿಕಾ ಬ್ಯಾಟಿಂಗ್ ಆರಂಭಿಸಿ ಇಂದುಕೂಡ ಮುಂದುವರೆಸುತ್ತಿದೆ. ಪಂದ್ಯ ಡ್ರಾದತ್ತ ಸಾಗುತ್ತಿದೆ. ಆದರೆ, ಭಾರತಕ್ಕೆ ಇನ್ನೂ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ.

Vinay Bhat | news18-kannada
Updated:September 28, 2019, 12:04 PM IST
Board Presidents XI vs South Africa: ಅಭ್ಯಾಸ ಪಂದ್ಯದಲ್ಲೇ ರೋಹಿತ್ ಫೇಲ್; ಶೂನ್ಯಕ್ಕೆ ಔಟ್ ಆದ ಹಿಟ್​ಮ್ಯಾನ್​​
ರೋಹಿತ್ ಶರ್ಮಾ
  • Share this:
ಬೆಂಗಳೂರು (ಸೆ. 28): ವಿಜಯನಗರಂನ ಡಾ. ಪಿವಿಜಿ ರಾಜು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 279 ರನ್​ಗೆ ಡಿಕ್ಲೇರ್ ಮಾಡಿಕೊಂಡಿದೆ.

ಸದ್ಯ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿರುವ ಭಾರತ ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿದೆ. ಸುಮಾರು 9 ತಿಂಗಳ ಬಳಿಕ ಟೆಸ್ಟ್​ಗೆ ಕಾಲಿಟ್ಟ ರೋಹಿತ್ ತಾನು ಎದುರಿಸಿದ 2ನೇ ಎಸೆತದಲ್ಲೇ ನಿರ್ಗಮಿಸಿದರು.

ಫಿಲಿಂಡರ್ ಬೌಲಿಂಗ್​ನಲ್ಲಿ ಕೀಪರ್ ಕ್ಲಾಸೆನ್​ಗೆ ಕ್ಯಾಚ್ ನೀಡಿ ರೋಹಿತ್ ಶೂನ್ಯಕ್ಕೆ ಔಟ್ ಆಗಿದ್ದಾರೆ. ರೋಹಿತ್ ಬೆನ್ನಲ್ಲೆ ಅಭಿಮನ್ಯು ಈಶ್ವರನ್(13) ಕೂಡ ರಬಾಡಗೆ ವಿಕೆಟ್ ಒಪ್ಪಿಸಿದ್ದಾರೆ.

 ಹೊಸ ಉಡುಗೆಯಲ್ಲಿ ವಿರುಷ್ಕಾ ಜೋಡಿ ಫುಲ್ ಮಿಂಚಿಂಗ್; ಸಖತ್ ಆಗಿದೆ ಈ ಲುಕ್

ಇದಕ್ಕೂ ಮೊದಲು ಆಫ್ರಿಕ ನಾಯಕ ಆ್ಯಡನ್ ಮರ್ಕ್ರಮ್ ಅವರ ಅಮೋಘ ಶತಕ ಹಾಗೂ ತೆಂಬಾ ಬವುಮಾ ಅರ್ಧಶತಕದ ನೆರವಿನಿಂದ ಆಫ್ರಿಕಾ ತಂಡದ 279 ರನ್​ಗೆ ಡಿಕ್ಲೇರ್ ಮಾಡಿಕೊಂಡಿತು. ಆರಂಭದಲ್ಲಿ ಉಮೇಶ್ ಯಾದವ್ ಬೌಲಿಂಗ್​ನಲ್ಲಿ ಡೇನ್ ಎಲ್ಗರ್(6) ಔಟ್ ಆದರೆ, ಥೆನಿಸ್ ಡಿ ಬ್ರೂನ್(6) ಇಶಾನ್ ಮೋರಲ್​ಗೆ ವಿಕೆಟ್ ಒಪ್ಪಿಸಿದರು.

ಈ ಸಂದರ್ಭ ಮರ್ಕ್ರಮ್ ಹಾಗೂ ಜುಬೈರ್ ಹಂಜಾ ಇನ್ನಿಂಗ್ಸ್​ ಕಟ್ಟುವ ಜವಾಬ್ದಾರಿ ಹೊತ್ತರು. ಆದರೆ, ಹಂಜಾ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 22 ರನ್​ಗೆ ನಿರ್ಗಮಿಸಿದರು. ಬಳಿಕ ತೆಂಬಾ ಬವುಮಾ ಜೊತೆಯಾದ ಮರ್ಕ್ರಮ್ ತಂಡಕ್ಕೆ ಆಸರೆಯಾದರು.

 

ಮರ್ಕ್ರಮ್ ಶತಕ ಸಿಡಿಸುತ್ತಿದ್ದಂತೆ ಪಂದ್ಯದಿಂದ ನಿವೃತ್ತಿ ಪಡೆದರು. 118 ಎಸೆತಗಳಲ್ಲಿ 18 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 100 ರನ್​​ ಗಳಿಸಿದರು. ಫಾಫ್ ಡುಪ್ಲೆಸಿಸ್ ಆಟ 9 ರನ್​ಗೆ ಅಂತ್ಯವಾಯಿತು. ಅಂತಿಮವಾಗಿ 279 ರನ್​ಗೆ ಡಿಕ್ಲೇರ್ ಮಾಡಿಕೊಂಡಿತು.

ತೆಂಬಾ 127 ಎಸೆತಗಳಲ್ಲಿ ಅಜೇಯ 87 ರನ್ ಬಾರಿಸಿದರೆ, ಫಿಲಿಂಡರ್ 49 ಎಸೆತಗಳಲ್ಲಿ 48 ರನ್ ಗಳಿಸಿದರು. ಮಂಡಳಿ ಅಧ್ಯಕ್ಷರ ಇಲೆವೆನ್ ತಂಡದ ಪರ ಧರ್ಮೇಂದ್ರಸಿಂಹ ಜಡೇಜಾ 3 ವಿಕೆಟ್ ಕಿತ್ತರೆ, ಉಮೇರ್ಶ ಯಾದವ್ ಹಾಗೂ ಇಶಾನ್ ಪೋರೆಲ್ ತಲಾ 1 ವಿಕೆಟ್ ಪಡೆದಿದ್ದಾರೆ.

ಮೂರು ದಿನಗಳ ಅಭ್ಯಾಸ ಪಂದ್ಯದ ಪೈಕಿ ಮೊದಲ ದಿನ ಮಳೆಗೆ ಆಹುತಿಯಾಗಿತ್ತು.

First published:September 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ