Gautam Gambhir: ಬಿಜೆಪಿ ಸಂಸದ ಗೌತಮ್ ಗಂಭೀರ್ ತಂದೆಯ ದುಬಾರಿ ಕಾರು ಕಳ್ಳತನ

ಗಂಭೀರ್ ತಂದೆ ರಾಜೇಂದ್ರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ತಕ್ಷಣ ಕೇಂದ್ರ ಜಿಲ್ಲೆಯ ವಿಶೇಷ ಸಿಬ್ಬಂದಿ ಹಾಗೂ ಕ್ರೈಮ್ ಬ್ರಾಂಚ್ ಹಲವು ತಂಡಗಳಿಗೆ ಆರೋಪಿಯನ್ನು ಸೆರೆ ಹಿಡಿಯುವಂತೆ ಸೂಚಿಸಲಾಗಿತ್ತು.

ಗೌತಮ್ ಗಂಭೀರ್.

ಗೌತಮ್ ಗಂಭೀರ್.

  • Share this:
    ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ದೆಹಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ ತಂದೆಗೆ ಸೇರಿದ್ದ ದುಬಾರಿ ಎಸ್ ಯುವಿ ಕಾರು ಕಳ್ಳತನವಾಗಿದೆ. ಗಂಭೀರ್ ಮನೆಯ ಹೊರಗೆ ಕಾರು ನಿಂತಿದ್ದ ವೇಳೆ ದುಷ್ಕರ್ಮಿಗಳು ಕಳ್ಳತನವೆಸಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದ್ದು ದೀಪಕ್ ಗಂಭೀರ್ ಒಡೆತನದ ಬಿಳಿ ಬಣ್ಣದ ಟೊಯೋಟಾ ಫಾರ್ಚೂನ್ ಕಾರನ್ನು ಕಳ್ಳರು ಕಳವು ಮಾಡಿದ್ದಾರೆ ಎಂದು ದೆಹಲಿ ಸೆಂಟ್ರಲ್ ಡಿಸಿಪಿ ತಿಳಿಸಿದ್ದಾರೆ. ಗೌತಮ್ ಗಂಭೀರ್ ಅವರು ತಮ್ಮ ತಂದೆಯೊಂದಿಗೆ ರಾಜೇಂದ್ರ ನಗರದ ತಮ್ಮ ನಿವಾಸದಲ್ಲಿ ವಾಸಿಸುತ್ತಿದ್ದಾರೆ.

    Karnataka Politics - ಸಿಎಂ ಯಡಿಯೂರಪ್ಪ ಮೇಲೆ ಮುರುಗೇಶ್ ನಿರಾಣಿ ಮುನಿಸು?

    ಈ ಕುರಿತು ಮಾತನಾಡಿರುವ ದೆಹಲಿ ಸೆಂಟ್ರಲ್ ಡಿಸಿಪಿ ಸಂಜಯ್ ಭಾಟಿಯಾ, 'ಗೌತಮ್ ಗಂಭೀರ್ ಮನೆಯಿಂದ ಫೋರ್ಚುನರ್ ಕಾರು ಕಳವಾಗಿರುವ ಮಾಹಿತಿ ನಮಗೆ ಲಭಿಸಿದೆ. ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ನಾವೂ ಸಹ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ಕೈಗೊಂಡಿದ್ದೇವೆ' ಎಂದು ಹೇಳಿದ್ದಾರೆ.

    ದೀಪಕ್ ಗಂಭೀರ್ ಅವರ ಟೊಯೊಟಾ ಫೋರ್ಚುನರ್ ಕಾರನ್ನು ಬುಧವಾರ ಮಧ್ಯಾಹ್ನ 3:30ರ ಸುಮಾರಿಗೆ ತನ್ನ ಮನೆಯ ಎದುರು ಪಾರ್ಕ್ ಮಾಡಿದ್ದರು. ಆದರೆ, ಗುರುವಾರ ಬೆಳಗ್ಗೆ ಕಾರು ನಾಪತ್ತೆಯಾಗಿರುವುದು ಗೊತ್ತಾಗಿದೆ.

    ಸೌದಿಯಲ್ಲಿ ಸಿಲುಕಿ ತವರಿಗೆ ಮರಳಲು ಕನ್ನಡಿಗರ ಪರದಾಟ; ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯ

    ಪೊಲೀಸರು ಸಿಸಿಟಿವಿ ಫುಟೇಜ್‌ನ್ನು ಪರಿಶೀಲಿಸುತ್ತಿದ್ದು, ಆರೋಪಿಯನ್ನು ಇನ್ನಷ್ಟೇ ಗುರುತಿಸಬೇಕಾಗಿದೆ. ಗಂಭೀರ್ ತಂದೆ ರಾಜೇಂದ್ರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ತಕ್ಷಣ ಕೇಂದ್ರ ಜಿಲ್ಲೆಯ ವಿಶೇಷ ಸಿಬ್ಬಂದಿ ಹಾಗೂ ಕ್ರೈಮ್ ಬ್ರಾಂಚ್ ಹಲವು ತಂಡಗಳಿಗೆ ಆರೋಪಿಯನ್ನು ಸೆರೆ ಹಿಡಿಯುವಂತೆ ಸೂಚಿಸಲಾಗಿತ್ತು.
    First published: