(Video): 2025ರಲ್ಲಿ ಪಾಕಿಸ್ತಾನ ಪರ ವಿರಾಟ್ ಕೊಹ್ಲಿ ಕಣಕ್ಕೆ; ನಾಚಿಕೆಗೇಡಿನ ವಿಡಿಯೋ ಮಾಡಿದ ಪಾಕ್​

ಈ ವಿಡಿಯೋ ಪ್ರಕಾರ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ನಡೆಯುತ್ತದೆ. ಇದರಲ್ಲಿ ಪಾಕಿಸ್ತಾನ ಜಯ ಸಾಧಿಸಿ ಭಾರತವನ್ನು ವಶ ಪಡಿಸಿಕೊಳ್ಳುತ್ತದೆ. ಹೀಗಾಗಿ ವಿರಾಟ್ ಕೊಹ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರನಾಗಿ ಬಿಡುತ್ತಾರೆ.

ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ವಿರಾಟ್ ಕೊಹ್ಲಿ

ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ವಿರಾಟ್ ಕೊಹ್ಲಿ

  • Share this:
ನೆರೆಯ ಪಾಕಿಸ್ತಾನದವರು ಭಾರತವನ್ನು ಸದಾ ಕೆಣಕುವ ಕೆಲಸದಲ್ಲಿ ನಿರತರಾಗಿರುತ್ತಾರೆ. ಪುಲ್ವಾಮಾ ದಾಳಿ ನಂತರದಲ್ಲಿ ಉಭಯ ದೇಶಗಳ ಸಂಬಂಧ ಹದಗೆಟ್ಟಿದೆ. ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಭಾರತದ ವಿರುದ್ಧ ಒಂದೊಂದೇ ಹೇಳಿಕೆ ನೀಡುತ್ತಿದ್ದರೆ, ಅತ್ತ ಅವರ ದೇಶದ ನಾಗರಿಕರು ನಾಚಿಕೆಗೇಡಿನ ವಿಡಿಯೋ ಮಾಡುವ ಮೂಲಕ ಭಾರತದವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಗಡಿಯಲ್ಲಿ ಮೃತಪಟ್ಟ ಯೋಧರ ನೆನಪಿಗಾಗಿ ಪಾಕಿಸ್ತಾನದಲ್ಲಿ ಇಂದು (ಸೆ. 06) ರಕ್ಷಣಾ ದಿನವನ್ನು ಆಚರಿಸಲಾಗುತ್ತಿದೆ. ಈ ದಿನಕ್ಕಾಗಿ ಪಾಕಿಸ್ತಾನದಿಂದ ವಿಡಿಯೋವೊಂದು ಬಿಡುಗಡೆಯಾಗಿದ್ದು, ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಇಡೀ ಭಾರತ ಪಾಕಿಸ್ತಾನದ ಒಂದು ಭಾಗ ಎಂದು ಬಣ್ಣಿಸಲಾಗಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಕ್​ ತಂಡದ ಆಟಗಾರು ಎಂದು ಚಿತ್ರಿಸಲಾಗಿದೆ.

ಈ ವಿಡಿಯೋ ಪ್ರಕಾರ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ನಡೆಯುತ್ತದೆ. ಇದರಲ್ಲಿ ಪಾಕಿಸ್ತಾನ ಜಯ ಸಾಧಿಸಿ ಭಾರತವನ್ನು ವಶ ಪಡಿಸಿಕೊಳ್ಳುತ್ತದೆ. ಹೀಗಾಗಿ ವಿರಾಟ್ ಕೊಹ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರನಾಗಿ ಬಿಡುತ್ತಾರೆ.

ಎದುರಾಳಿಗಿಂತ 51 ರನ್ ಅಧಿಕ ಬಾರಿಸಿದರೂ ಸೋತ ಭಾರತ ಎ; ಹರಿಣಗಳಿಗೆ 4 ರನ್​ಗಳ ರೋಚಕ ಜಯ!

ಪಾಕಿಸ್ತಾನ ಪತ್ರಕರ್ತೆ ನೈಲಾ ಇನಾಯತ್ ಈ ವಿಡಿಯೋವನ್ನು ಹಂಚಿಕೊಂಡಿದ್ದು, ‘ಶ್ರೀನಗರದಲ್ಲಿ ಪಾಕಿಸ್ತಾನ ತಂಡ ಕ್ರಿಕೆಟ್ ಆಡುತ್ತಿದೆ. ವಿರಾಟ್ ಕೊಹ್ಲಿ ಪಾಕ್ ಪರ ಕಣಕ್ಕಿಳಿಯುತ್ತಿದ್ದಾರೆ. ಇದೊಂದು ಸಾಮಾನ್ಯ ನಿರ್ಧಾರ ಅಷ್ಟೆ’ ಎಂದು ಬರೆದುಕೊಂಡಿದ್ದಾರೆ.

 ಇದು 2025 ರಲ್ಲಿ ಶ್ರೀನಗರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಣ ಟಿ-20 ವಿಶ್ವಕಪ್ ಫೈನಲ್​ ಪಂದ್ಯವಾಗಿದೆ. ಈ ವಿಡಿಯೋದಲ್ಲಿ ಕಮೆಂಟೇಟರ್ ಕೂಡ ಮಾತನಾಡಿದ್ದು, 'ಪಾಕಿಸ್ತಾನ ತಂಡದ ಇಬ್ಬರು ದಿಗ್ಗಜರಾದ ಬಾಬರ್ ಅಜಾಮ್ ಮತ್ತು ವಿರಾಟ್ ಕೊಹ್ಲಿ ಓಪನರ್ ಆಗಿ ಕಣಕ್ಕಿಳಿಯುತ್ತಿದ್ದಾರೆ' ಎಂದು ಮಾತನಾಡುತ್ತಾರೆ.

ನಂತರ ಈ ವಿಡಿಯೋದಲ್ಲಿ ಒಬ್ಬಳು ‘ವಿರಾಟ್ ಕೊಹ್ಲಿ ಈ ಪಂದ್ಯವನ್ನು ನಮಗೋಸ್ಕರ ಗೆಲ್ಲಿಸಿ ಕೊಡುತ್ತಾರೆ, ನೋಡಿ’ ಎಂದು ಹೇಳುತ್ತಾಳೆ. ಇದಕ್ಕೆ ಆಕೆಯ ತಂದೆ ‘ವಿರಾಟ್ ಕೊಹ್ಲಿ ಈ ಹಿಂದೆ ಭಾರತ ಕ್ರಿಕೆಟ್ ತಂಡದಲ್ಲಿ ಆಡಿದ್ದರು’ ಎನ್ನುತ್ತಾರೆ. ಇದಕ್ಕೆ ಆಕೆ ‘ಯಾರು ಈ ಭಾರತ’ ಎಂದು ಪ್ರಶ್ನಿಸುತ್ತಾಳೆ. ಆಗ ತಂದೆ ಅಹಂಕಾರದ ನಗೆ ಬೀರುತ್ತಾರೆ.

ಬೆಂಗಳೂರಿನಲ್ಲೂ ನಡೆಯಲಿದೆ ಭಾರತ-ಆಫ್ರಿಕಾ ಟಿ-20 ಹೈವೋಲ್ಟೇಜ್ ಪಂದ್ಯ; ಟಿಕೆಟ್ ಬೇಕಾದರೆ ಹೀಗೆ ಮಾಡಿ

ಕಳೆದ 11 ವರ್ಷಗಳಲ್ಲಿ ಕೊಹ್ಲಿ ಪಾಕಿಸ್ತಾನ ವಿರುದ್ಧ ಒಂದೇ ಒಂದು ಟೆಸ್ಟ್​ ಪಂದ್ಯಗಳನ್ನು ಆಡಿಲ್ಲ. ಈವರೆಗೆ ಪಾಕಿಸ್ತಾನ ಮಣ್ಣಿನಲ್ಲಿ ಒಂದೂ ಪಂದ್ಯವನ್ನಾಡಿಲ್ಲ. ಸದ್ಯ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರೀ ಹರಿದಾಡುತ್ತಿದ್ದು, ಭಾರತೀಯ ಕೆಂಗಣ್ಣಿಗೆ ಗುರಿಯಾಗಿದೆ.

  First published: