India vs Australia: ಫೈನಲ್ ಟೆಸ್ಟ್​: ಟೀಮ್ ಇಂಡಿಯಾ ಗೆದ್ದರೆ ಹೊಸ ಇತಿಹಾಸ ನಿರ್ಮಾಣ..!

ಜಸ್​ಪ್ರೀತ್ ಬುಮ್ರಾ ಹಾಗೂ ಹನುಮ ವಿಹಾರಿ ಸಹ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಕೊನೆಯ ಟೆಸ್ಟ್​​ನಲ್ಲಿ ಆಡುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಅತ್ತ ಬ್ರಿಸ್ಬೇನ್​ನ ಗಬ್ಬಾ ಮೈದಾನದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಆಸ್ಟ್ರೇಲಿಯಾ ಬಳಗ ಆತ್ಮ ವಿಶ್ವಾಸದಿಂದ ಪುಟಿಯುತ್ತಿದೆ.

India vs Australia

India vs Australia

 • Share this:
  ಆಸ್ಟ್ರೇಲಿಯಾ ಹಾಗೂ ಭಾರತ ನಡುವೆ ಅಂತಿಮ ಟೆಸ್ಟ್​ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಈಗಾಗಲೇ ಒಂದು ಡ್ರಾದೊಂದಿಗೆ ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದು, ಹೀಗಾಗಿ ಬ್ರಿಸ್ಬೇನ್​ನಲ್ಲಿ ನಡೆಯಲಿರುವ ಟೆಸ್ಟ್ ಫೈನಲ್ ಕದನವಾಗಿ ಮಾರ್ಪಟ್ಟಿದೆ. ಅಷ್ಟೇ ಅಲ್ಲದೆ ಈ ಫೈನಲ್ ಟೆಸ್ಟ್ ಪಂದ್ಯವು ಗಬ್ಬಾ ಮೈದಾನದಲ್ಲಿ ನಡೆಯುತ್ತಿರುವುದು ವಿಶೇಷ.

  ಒಂದೆಡೆ ಅನುಭವಿ ಆಟಗಾರರ ಅನುಪಸ್ಥಿತಿ, ಕೆಲ ಆಟಗಾರರ ಗಾಯದ ಸಮಸ್ಯೆಯಿಂದ ಟೀಮ್ ಇಂಡಿಯಾ ಚಿಂತೆಗೀಡಾಗಿದೆ. ಇದಾಗ್ಯೂ 3ನೇ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸುವಲ್ಲಿ ಭಾರತ ತಂಡ ಯಶಸ್ವಿಯಾಗಿತ್ತು. ಆದರೆ 3ನೇ ಪಂದ್ಯದಲ್ಲಿ ಕಣಕ್ಕಿಳಿದ ರವೀಂದ್ರ ಜಡೇಜಾ ಗಾಯಗೊಂಡು ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.

  ಇನ್ನು ಜಸ್​ಪ್ರೀತ್ ಬುಮ್ರಾ ಹಾಗೂ ಹನುಮ ವಿಹಾರಿ ಸಹ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಕೊನೆಯ ಟೆಸ್ಟ್​​ನಲ್ಲಿ ಆಡುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಅತ್ತ ಬ್ರಿಸ್ಬೇನ್​ನ ಗಬ್ಬಾ ಮೈದಾನದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಆಸ್ಟ್ರೇಲಿಯಾ ಬಳಗ ಆತ್ಮ ವಿಶ್ವಾಸದಿಂದ ಪುಟಿಯುತ್ತಿದೆ. ಏಕೆಂದರೆ ಈ ಗ್ರೌಂಡ್ ಆಸೀಸ್​ ಪಾಲಿಗೆ ಅದೃಷ್ಟದ ಅಂಗಳ.

  ಹೌದು, ಆಸ್ಟ್ರೇಲಿಯಾ ತಂಡವು ಬ್ರಿಸ್ಬೇನ್ ಗಬ್ಬಾ ಮೈದಾನದಲ್ಲಿ ಸೋಲಿನ ರುಚಿ ನೋಡಿ 32 ವರ್ಷಗಳು ಕಳೆದಿವೆ. ಅಂದರೆ 1988ರಿಂದ ಈ ಪಿಚ್ ನಲ್ಲಿ ಕಾಂಗರೂ ಪಡೆ ಸೋತೇ ಇಲ್ಲ. 1988 ರಲ್ಲಿ ಪ್ರಬಲ ವೆಸ್ಟ್ ಇಂಡೀಸ್ ವಿರುದ್ಧದ ಸೋತ ಬಳಿಕ ಆಸ್ಟ್ರೇಲಿಯಾ ಈ ಮೈದಾನದಲ್ಲಿ 31 ಟೆಸ್ಟ್ ಪಂದ್ಯಗಳನ್ನು ಆಡಿದೆ. ಅದರಲ್ಲಿ 24 ಪಂದ್ಯಗಳಲ್ಲಿ ಗೆಲುವನ್ನು ದಾಖಲಿಸಿದೆ. ಅಷ್ಟೇ ಅಲ್ಲದೆ ಗೆಲ್ಲಲು ಅಸಾಧ್ಯವಾಗಿದ್ದ 7 ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೇ ಆತ್ಮ ವಿಶ್ವಾಸದಲ್ಲಿ ಆಸ್ಟ್ರೇಲಿಯಾ ತಂಡ ಶುಕ್ರವಾರ ಕಣಕ್ಕಿಳಿಯಲಿದೆ.

  ಇತ್ತ ಗಾಯಾಳು ಸಮಸ್ಯೆಯಿಂದ ಬಳಲುತ್ತಿರುವ ಟೀಮ್ ಇಂಡಿಯಾ ಅನಾನುಭವಿ ಆಟಗಾರರೊಂದಿಗೆ ಗಬ್ಬಾ ಮೈದಾನದಲ್ಲಿ ಆಸ್ಟ್ರೇಲಿಯಾಗೆ ಸೋಲುಣಿಸಿ ಇತಿಹಾಸ ನಿರ್ಮಿಸಲಿದೆಯಾ? ಕಾದು ನೋಡಬೇಕಿದೆ.
  Published by:zahir
  First published: