ವೇಗಿ ಶ್ರೀಶಾಂತ್​ಗೆ ಬಿಗ್​ ರಿಲೀಫ್​; ಜೀವಾವಧಿ ನಿಷೇಧದಿಂದ ಮುಕ್ತಿ

ಈ ಮೂಲಕ ಶ್ರೀಶಾಂತ್​ ವೃತ್ತಿಜೀವನದ ಕಪ್ಪು ಚುಕ್ಕೆಯಿಂದ ಮುಕ್ತಿ ಪಡೆದಂತಾಗಿದೆ. ಆದರೆ ಶ್ರೀಶಾಂತ್​ ಹಲವು ವರ್ಷಗಳಿಂದ ಕ್ರಿಕೆಟ್​ ಮೈದಾನದಿಂದ ದೂರ ಉಳಿದಿದ್ದು, ಮತ್ತೆ ಕ್ರಿಕೆಟ್​ ಮರಳುವ ಸಾಧ್ಯತೆ ಕಡಿಮೆ

news18
Updated:March 15, 2019, 11:47 AM IST
ವೇಗಿ ಶ್ರೀಶಾಂತ್​ಗೆ ಬಿಗ್​ ರಿಲೀಫ್​; ಜೀವಾವಧಿ ನಿಷೇಧದಿಂದ ಮುಕ್ತಿ
ಶ್ರೀಶಾಂತ್​ ಸಾಂದರ್ಭಿಕ ಚಿತ್ರ
news18
Updated: March 15, 2019, 11:47 AM IST
ನವದೆಹಲಿ: ಐಪಿಎಲ್​ ಕ್ರಿಕೆಟ್​ ಮ್ಯಾಚ್​ ಫಿಕ್ಸಿಂಗ್​ ಪ್ರಕರಣದಲ್ಲಿ ಆರೋಪಿಯಾಗಿದ್ದ ಕೇರಳ ಮೂಲದ ವೇಗಿ ಶ್ರೀಶಾಂತ್​ರನ್ನು ಬಿಸಿಸಿಐ ಜೀವಾವಧಿ ನಿಷೇಧದ ಶಿಕ್ಷೆ ನೀಡಿತ್ತು. ಶ್ರೀಶಾಂತ್​ ಜೀವನ ಪರ್ಯಂತ ಕ್ರಿಕಟ್​ ಆಡುವಂತಿಲ್ಲ ಎಂದು ಆದೇಶಿಸಿತ್ತು. ಈ ಸಂಬಂಧ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್​ ಇಂದು ಮಹತ್ವದ ತೀರ್ಪು ನೀಡಿದೆ. ಶುಕ್ರವಾರ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್​, ಶ್ರೀಶಾಂತ್​ ಮೇಲೆ ಹೇರಿದ್ದ ನಿಷೇದವನ್ನು ರದ್ದುಗೊಳಿಸಿದೆ. ಈ ಮೂಲಕ ಶ್ರೀಶಾಂತ್​ ವೃತ್ತಿಜೀವನದ ಕಪ್ಪು ಚುಕ್ಕೆಯಿಂದ ಮುಕ್ತಿ ಪಡೆದಂತಾಗಿದೆ. ಆದರೆ ಶ್ರೀಶಾಂತ್​ ಹಲವು ವರ್ಷಗಳಿಂದ ಕ್ರಿಕೆಟ್​ ಮೈದಾನದಿಂದ ದೂರ ಉಳಿದಿದ್ದು, ಮತ್ತೆ ಕ್ರಿಕೆಟ್​ ಮರಳುವ ಸಾಧ್ಯತೆ ಕಡಿಮೆ.

ಶುಕ್ರವಾರ ಬೆಳಗ್ಗೆ ಪ್ರಕರಣ ಸಂಬಂಧ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್​, ಬಿಸಿಸಿಐ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ತಿಳಿಸಿದೆ. ಈ ಹಿಂದೆ ಐಪಿಎಲ್​ನಲ್ಲಿ ಮ್ಯಾಚ್​ ಫಿಕ್ಸಿಂಗ್​ ಆರೋಪದ ಸುಳಿಯಲ್ಲಿ ಶ್ರೀಶಾಂತ್​ ಸಿಕ್ಕಿಬಿದ್ದಿದ್ದರು. ಸಿಬಿಐ ತನಿಖೆಯಲ್ಲಿ ಶ್ರೀಶಾಂತ್​ ಹೆಸರು ಆಚೆ ಬಂದಿತ್ತು. ಆದರೆ ಶ್ರೀಶಾಂತ್​ ತಾವು ನಿರ್ದೋಷಿ ಎಂದು ಸಮರ್ಥಿಸಿಕೊಂಡಿದ್ದರು.

ಇನ್ನಷ್ಟು ಮಾಹಿತಿಗಾಗಿ ನಿರೀಕ್ಷಿಸಿ...

 

First published:March 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...