ಬೆಂಗಳೂರು (ಡಿ. 13): ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯನ್ನು ಭರ್ಜರಿ ಆಗಿ ಆರಂಭಿಸಿರುವ ಭಾರತ ಟಿ-20 ಸರಣಿ 2-1 ಅಂತರದಿಂದ ವಶಪಡಿಸಿಕೊಂಡಿದೆ. ಇನ್ನೇನಿದ್ದರು ಏಕದಿನ ಸರಣಿ ಮೇಲೆ ಕಣ್ಣಿಟ್ಟಿರುವ ಕೊಹ್ಲಿ ಪಡೆ ಈಗಾಗಲೇ ಮೊದಲ ಪಂದ್ಯಕ್ಕಾಗಿ ಚೆನ್ನೈಗೆ ಬಂದಿಳಿದಿದೆ.
ಸ್ಯಾಂಡಲ್ವುಡ್ ನಟಿಯೊಂದಿಗೆ ಡೇಟಿಂಗ್ನಲ್ಲಿದ್ದಾರೆ ರಿಷಭ್ ಪಂತ್?
ಹೀಗಿರುವಾಗ ಟೀಂ ಇಂಡಿಯಾದಲ್ಲಿ ಒಂದು ಸ್ಥಾನಕ್ಕಾಗಿ ಇಬ್ಬರು ಕನ್ನಡಿಗರ ನಡುವೆ ಫೈಟ್ ಶುರುವಾಗಿದೆ. ಅವರೇ ಮಯಾಂಕ್ ಅಗರ್ವಾಲ್ ಹಾಗೂ ಕೆ ಎಲ್ ರಾಹುಲ್.
ಶಿಖರ್ ಧವನ್ ಇಂಜುರಿಯಿಂದ ಗುಣಮುಖರಾಗದ ಕಾರಣ ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ಮಯಾಂಕ್ರನ್ನು ಬದಲಿ ಆಟಗಾರನಾಗಿ ಬಿಸಿಸಿಐ ಆಯ್ಕೆ ಮಾಡಿದೆ. ಈ ಮೂಲಕ ಭಾರತ ಪರ ಟೆಸ್ಟ್ನಲ್ಲಿ ಅಬ್ಬರಿಸುತ್ತಿರುವ ಮಯಾಂಕ್ಗೆ ಸದ್ಯ ಏಕದಿನದಲ್ಲೂ ಅವಕಾಶ ಸಿಕ್ಕಿದೆ.
![Big fight has been started for Cricket team India in between 2 Kannadiga players of Karnataka]()
ಮಯಾಂಕ್ ಅಗರ್ವಾಲ್ ಹಾಗೂ ಕೆ ಎಲ್ ರಾಹುಲ್. (ಫೋಟೋ: ಕೆ ಎಲ್ ರಾಹುಲ್ ಫೇಸ್ಬುಕ್ ಖಾತೆ)
ನಿವೃತ್ತಿ ಬಳಿಕವೂ ಯುವಿ ಹವಾ; ಕೊಹ್ಲಿ, ಧೋನಿ ಹಿಂದಕ್ಕಿ ದಾಖಲೆ ಬರೆದ ಸಿಕ್ಸರ್ ಕಿಂಗ್
ಆದರೆ, ಮಯಾಂಕ್ ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಬೇಕಾದರೆ ತನ್ನ ಪ್ರೀತಿಯ ಸ್ನೇಹಿತ ರಾಹುಲ್ ಜಾಗವನ್ನು ಆಕ್ರಮಿಸಬೇಕಾಗಿ ಬಂದಿದೆ. ಕರ್ನಾಟಕ ತಂಡದಲ್ಲಿ ಒಟ್ಟಿಗೆ ಇನ್ನಿಂಗ್ಸ್ ಆರಂಭಿಸುತ್ತಿದ್ದ ಇವರಿಬ್ಬರು, ಐಪಿಎಲ್ನಲ್ಲೂ ಪಂಜಾಬ್ ತಂಡದ ಪರ ಜೊತೆಯಾಗಿಯೆ ಆಡುತ್ತಿದ್ದಾರೆ. ಈ ಮಧ್ಯೆ ರೋಹಿತ್ ಶರ್ಮಾ ಜೊತೆ ಆರಂಭಿಕನಾಗಿ ಕಣಕ್ಕಿಳಿಯಲು ಈ ಇಬ್ಬರು ಕನ್ನಡಿಗರ ನಡುವೆ ಪೈಪೋಟಿ ಏರ್ಪಟ್ಟಿದೆ.
ರಾಹುಲ್ ಕಳೆದ ಟಿ-20 ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದರು. ಇತ್ತ ಮಯಾಂಕ್ ಕೂಡ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಇವರಿಬ್ಬರ ಪೈಕಿ ಯಾರಿಗೆ ಸ್ಥಾನ ಸಿಗಲಿದೆ ಎಂಬುವುದು ಕುತೂಹಲ. ಇನ್ನೊಂದು ಹೆಮ್ಮೆಯ ವಿಚಾರ ಎಂದರೆ ಟೀಂ ಇಂಡಿಯಾದಲ್ಲಿ ಮೂವರು
ಕನ್ನಡಿಗರು ಸ್ಥಾನ ಪಡೆದುಕೊಂಡಿರುವುದು.
ಕೆ ಎಲ್ ರಾಹುಲ್, ಮನೀಶ್ ಪಾಂಡೆ ಹಾಗೂ ಮಯಾಂಕ್ ಅಗರ್ವಾಲ್ ಹೀಗೆ 3 ಕರ್ನಾಟಕದ ಆಟಗಾರರು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
PHOTOS: 2ನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಾನಿಯಾ ತಂಗಿ; ಮಾಜಿ ಕ್ರಿಕೆಟರ್ ಪುತ್ರನನ್ನು ವರಿಸಿದ ಅನಮ್ ಮಿರ್ಜಾ
ಪಾಂಡೆಗೆ ಟಿ-20 ಸರಣಿಯಲ್ಲಿ ಆಡುವ ಅವಕಾಶ ಸಿಗಲಿಲ್ಲ. ಬೆಂಚ್ ಕಾಯಬೇಕಾಗಿ ಬಂತು. ಹೀಗಾಗಿ ಏಕದಿನ ಪಂದ್ಯದಲ್ಲಿ ಪಾಂಡೆ ಕಣಕ್ಕಿಳಿಯುವ ಅಂದಾಜಿದೆ. ಆದರೆ, ಓಪನರ್ ಆಗಿ ರಾಹುಲ್ ಮತ್ತು ಮಯಾಂಕ್ ಪೈಕಿ ಯಾರಿಗೆ ಸ್ಥಾನ ಎಂಬುವುದು ಕಾದುನೋಡಬೇಕಿದೆ.
ಮೊದಲ ಏಕದಿನ ಪಂದ್ಯ ಡಿ. 15 ರಂದು ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದ್ದು,
ಕೊಹ್ಲಿ ಪಡೆ ಈಗಾಗಲೇ ಚೆನ್ನೈಗೆ ಬಂದಿಳಿದಿದೆ. ಎರಡನೇ ಪಂದ್ಯ ಡಿ. 18ಕ್ಕೆ ವಿಶಾಖಪಟ್ಟಣ ಹಾಗೂ ಅಂತಿಮ ಕದನ ಡಿ. 22 ರಂದು ಕತಕ್ನಲ್ಲಿ ಏರ್ಪಡಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ