ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಭರ್ಜರಿಯಾಗಿ ಜರುಗುತ್ತಿದೆ. ವಿಶ್ವದ ಅನೇಕ ಖ್ಯಾತ ಕ್ರಿಕೆಟಿಗರು ಈ ಲೀಗ್ನಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನು ಪ್ರೇಕ್ಷಕರ ಅವಕಾಶ ಇರುವುದರಿಂದ ಆಸ್ಟ್ರೇಲಿಯಾದ ಕ್ರಿಕೆಟ್ ಪ್ರೇಮಿಗಳು ಸಹ ಪಂದ್ಯಗಳನ್ನು ಆನಂದಿಸುತ್ತಾರೆ. ಬಿಬಿಎಲ್ನ ರೋಚಕ ಫೀಲ್ಡಿಂಗ್, ಸ್ಪೋಟಕ ಬ್ಯಾಟಿಂಗ್ಗಳ ವಿಡಿಯೋಗಳು ವೈರಲ್ ಆಗುತ್ತಿವೆ. ಇದರ ನಡುವೆ ಶನಿವಾರ ನಡೆದ ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಸಿಡ್ನಿ ಥಂಡರ್ ಪಂದ್ಯದ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿವೆ.
ಸಿಡ್ನಿ ತಂಡದ ಡೇನಿಯಲ್ ಸ್ಯಾಮ್ ಎಸೆತವನ್ನು ಬಾರಿಸುವಲ್ಲಿ ಮೆಲ್ಬೋರ್ನ್ನ ನಿಕ್ ಲಾರ್ಕಿನ್ ಎಡವಿದ್ದರು. ಆದರೆ ಬೈ ಮೂಲಕ ಒಂದು ರನ್ ಕದಿಯಲು ಮುಂದಾದರು. ಈ ವೇಳೆ ಚೆಂಡು ತೆಗೆದು ರನೌಟ್ ಮಾಡಲು ಮುಂದಾದ ಸ್ಯಾಮ್ಗೆ ಅಚ್ಚರಿ. ಏಕೆಂದರೆ ಬಾಲ್ ಕಾಣಿಸುತ್ತಿರಲಿಲ್ಲ. ಇತ್ತ ನೋಡಿದ್ರೆ ಬ್ಯಾಟ್ ಬೀಸಿದಾಗ ಚೆಂಡು ನಿಕ್ನ ಜರ್ಸಿಯೊಳಗೆ ಪ್ರವೇಶಿಸಿತು. ಅರ್ಧದಷ್ಟು ಪಿಚ್ ದಾಟಿದ ನಂತರ ಚೆಂಡು ಜರ್ಸಿಯಿಂದ ಕೆಳಗೆ ಬಿತ್ತು. ಆಗಲೇ ಮೈದಾನದಲ್ಲಿದ್ದ ಫೀಲ್ಡರ್ಗಳಿಗೆ, ಬ್ಯಾಟ್ಸ್ಮನ್ಗೆ ಹಾಗೂ ಕಾಮೆಂಟೇಟರ್ ಮತ್ತು ಪ್ರೇಕ್ಷಕರಿಗೆ ಚೆಂಡು ಎಲ್ಲೋಗಿದೆ ಎಂಬದು ಗೊತ್ತಾಗಿದ್ದು.
ಈ ಬಗ್ಗೆ ಫೀಲ್ಡಿಂಗ್ ತಂಡ ಅಂಪೈರ್ನಲ್ಲಿ ಮನವಿ ಸಲ್ಲಿಸಿತು. ಐಸಿಸಿ ನಿಯಮಗಳ ಪ್ರಕಾರ ಕೊನೆಗೆ ಅಂಪೈರ್ ಅದನ್ನು ಡೆಡ್ ಬಾಲ್ ಎಂದು ಘೋಷಿಸಿದರು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರಲ್ಲೂ ಬಿಗ್ ಬ್ಯಾಷ್ ಲೀಗ್ನಲ್ಲಿ ಇದೇ ಮೊದಲ ಬಾರಿ ಇಂತಹದೊಂದು ಸ್ವಾರಸ್ಯಕರ ಘಟನೆ ನಡೆದಿದ್ದು, ಹೀಗಾಗಿ ಬಿಬಿಎಲ್ ಪ್ರೇಮಿಗಳು ವಿಡಿಯೋವನ್ನು ಹೆಚ್ಚಾಗಿ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: ICC T20 Rankings: ನೂತನ ಟಿ20 ರ್ಯಾಕಿಂಗ್ ಪ್ರಕಟ: ಟಾಪ್ 10 ಪಟ್ಟಿಯಲ್ಲಿ ಇಬ್ಬರು ಭಾರತೀಯರು ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ