• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ಒಂದೇ ದಿನದಲ್ಲಿ ಎರಡು ಹ್ಯಾಟ್ರಿಕ್; ಬಿಗ್​ಬ್ಯಾಷ್​ನಲ್ಲಿ ಇತಿಹಾಸ ರಚಿಸಿದ ರಶೀದ್- ರೌಫ್!

ಒಂದೇ ದಿನದಲ್ಲಿ ಎರಡು ಹ್ಯಾಟ್ರಿಕ್; ಬಿಗ್​ಬ್ಯಾಷ್​ನಲ್ಲಿ ಇತಿಹಾಸ ರಚಿಸಿದ ರಶೀದ್- ರೌಫ್!

ಹ್ಯಾರಿಸ್ ರೌಫ್ ಹಾಗೂ ರಶೀದ್ ಖಾನ್

ಹ್ಯಾರಿಸ್ ರೌಫ್ ಹಾಗೂ ರಶೀದ್ ಖಾನ್

ಬಿಬಿಎಲ್‌ 2019-20 ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ಟಿ-20 ಲೀಗ್‌ಗೆ ಪದಾರ್ಪಣೆ ಮಾಡಿದ ಪಾಕಿಸ್ತಾನದ ವೇಗಿ ಹ್ಯಾರಿಸ್‌ ರೌಫ್‌, ಆಡಿದ ಮೊದಲ ಮೂರು ಪಂದ್ಯಗಳಲ್ಲೇ 10 ವಿಕೆಟ್‌ ಪಡೆದು ಮಿಂಚಿದ್ದರು.

  • Share this:

    ಕ್ರಿಕೆಟ್ ಕ್ಷೇತ್ರದಲ್ಲಿ ಸದ್ಯ ಐಪಿಎಲ್​​ನಷ್ಟೆ ಫೇಮಸ್ ಆಗುತ್ತಿರುವ ಮತ್ತೊಂದು ಲೀಗ್ ಬಿಗ್​ಬ್ಯಾಷ್ ಟಿ-20 ಟೂರ್ನಿಯಲ್ಲಿ ಒಂದೇ ದಿನ ಎರಡು ಹ್ಯಾಟ್ರಿಕ್ ವಿಕೆಟ್ ಮೂಡಿಬಂದಿದೆ. ಇಬ್ಬರು ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್​ಗಳ ಪೈಕಿ ವಿದೇಶ ಆಟಗಾರರು ಎಂಬವುದು ವಿಶೇಷ. ಈ ಮೂಲಕ ಬಿಗ್​ಬ್ಯಾಶ್​ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

    ಈ ಹಿಂದಿನ 8 ಆವೃತ್ತಿಯ ಬಿಗ್​ಬ್ಯಾಶ್​ ಲೀಗ್​ಗಳಲ್ಲಿ ಓರ್ವ ವಿದೇಶಿ ಬೌಲರ್​ ಹ್ಯಾಟ್ರಿಕ್​ ವಿಕೆಟ್​ ಪಡೆದಿರಲಿಲ್ಲ. ಆದರೆ, ಬುಧವಾರ ನಡೆದ ಎರಡು ಪ್ರತ್ಯೇಕ ಪಂದ್ಯಗಳಲ್ಲಿಅಫ್ಘಾನಿಸ್ತಾನದ ರಶೀದ್​ ಖಾನ್​ ಹಾಗೂ ಪಾಕಿಸ್ತಾನದ ಯುವ ವೇಗಿ ಹ್ಯಾರೀಸ್​ ರೌಫ್​ ಹ್ಯಾಟ್ರಿಕ್​ ಪಡೆದಿದ್ದಾರೆ.

    IPL 2020: ಐಪಿಎಲ್​ನಲ್ಲಿ ಕೆಕೆಆರ್ ತಂಡದ ಪರ ಆಡಬೇಕಿದ್ದ ಬೌಲರ್​​ 3 ತಿಂಗಳು ಬ್ಯಾನ್!

    ರಶೀದ್​ ಎರಡು ಓವರ್​ಗಳಲ್ಲಿ ಹ್ಯಾಟ್ರಿಕ್​ ವಿಕೆಟ್ ಪಡೆದು ಮಿಂಚಿದರೆ, ರೌಫ್​ ಒಂದೇ ಓವರ್​ನಲ್ಲಿ ಮೂರು ವಿಕೆಟ್ ಕಿತ್ತರು. ಸಿಡ್ನಿ ಸಿಕ್ಸರ್ಸ್‌ ವಿರುದ್ಧದ ಪಂದ್ಯದಲ್ಲಿ ಅಡಿಲೇಡ್‌ ಸ್ಟ್ರೈಕರ್ಸ್‌ ತಂಡದ ರಶೀದ್ ಖಾನ್‌ ತಮ್ಮ ಮೂರನೇ ಓವರ್​ನ ಕೊನೆಯ 2 ಎಸೆತಗಳಲ್ಲಿ ಹಾಗೂ ನಾಲ್ಕನೇ ಓವರ್​ನ ಮೊದಲ ಎಸೆತದಲ್ಲಿ ವಿಕೆಟ್​ ಪಡೆಯುವ ಮೂಲಕ ಟಿ-20 ಕ್ರಿಕೆಟ್​ನಲ್ಲಿ ತಮ್ಮ ಮೂರನೇ ಹ್ಯಾಟ್ರಿಕ್​ ಪಡೆದರು.

     



    ಹ್ಯಾರಿಸ್‌ ರೌಫ್‌ ಸಿಡ್ನಿ ಥಂಡರ್ಸ್‌ ವಿರುದ್ಧ ಅಬ್ಬರಿಸಿ ಹ್ಯಾಟ್ರಿಕ್‌ ಸಾಧನೆಯೊಂದಿಗೆ ಮೆಲ್ಬೋರ್ನ್‌ ಸ್ಟಾರ್ಸ್‌ಗೆ ಗೆಲುವು ತಂದುಕೊಟ್ಟರು. ಇನ್ನೇನು ವಿಕೆಟ್‌ ಇಲ್ಲದೆ ರೌಫ್ ಅವರು ಬರಿಗೈಲಿ 4 ಓವರ್‌ಗಳ ಸ್ಪೆಲ್‌ ಮುಗಿಸುವುದಿದ್ದರು.

    ಆದರೆ, ತಮ್ಮ ಕೊನೆಯ ಓವರ್‌ನಲ್ಲಿ ಮೂರು ಪ್ರಮುಖ ವಿಕೆಟ್‌ ಪಡೆಯುವ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡಿದರು. ಈ ಮೂಲಕ 4 ಓವರ್‌ಗಳಲ್ಲಿ 23ಕ್ಕೆ 3 ವಿಕೆಟ್‌ ಪಡೆದು ತಮ್ಮ ಸ್ಪೆಲ್‌ ಮುಗಿಸಿದರು.

    ಹಸಿದ ಮಗುವ ನೋಡಿ ಕರಗಿತು ಕ್ರಿಕೆಟಿಗನ ಮನ: ಮೈದಾನದಲ್ಲೇ ಆಹಾರ ಹಂಚಿಕೊಂಡು ತಿಂದ ಭಾರತದ ಆಟಗಾರ

    ಬಿಬಿಎಲ್‌ 2019-20 ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ಟಿ-20 ಲೀಗ್‌ಗೆ ಪದಾರ್ಪಣೆ ಮಾಡಿದ ಪಾಕಿಸ್ತಾನದ ವೇಗಿ ಹ್ಯಾರಿಸ್‌ ರೌಫ್‌, ಆಡಿದ ಮೊದಲ ಮೂರು ಪಂದ್ಯಗಳಲ್ಲೇ 10 ವಿಕೆಟ್‌ ಪಡೆದು ಮಿಂಚಿದ್ದರು.

     


    ಸಿಡ್ನಿ ಥಂಡರ್ಸ್​ ಹಾಗೂ ಮೆಲ್ಬೋರ್ನ್​​ ಸ್ಟಾರ್ಸ್​ ನಡುವಣ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಡ್ನಿ 20 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 145 ರನ್ ಬಾರಿಸಿತು. ಟಾರ್ಗೆಟ್ ಬೆನ್ನಟ್ಟಿದ ಮೆಲ್ಬೋರ್ನ್​ ಗ್ಲೆನ್ ಮ್ಯಾಕ್ಸ್​ವೆಲ್​ ಅವರ 59 ರನ್​ಗಳ ನೆರವಿನಿಂದ 17.5 ಓವರ್​ನಲ್ಲೆ 4 ವಿಎಕಟ್ ಕಳೆದುಕೊಂಡು 148 ರನ್ ಚಚ್ಚಿ ಗೆಲುವಿನ ನಗೆ ಬೀರಿತು.

    ಇನ್ನು ಸಿಡ್ನಿ ಸಿಕ್ಸರ್ಸ್​​ ಹಾಗೂ ಅಡಿಲೇಡ್ ಸ್ಟ್ರೈಕರ್ಸ್​​ ನಡುವಣ ಪಂದ್ತದಲ್ಲಿ ಸಿಡ್ನಿ ತಂಡ 2 ವಿಕೆಟ್​ಗಳ ರೋಚಕ ಜಯ ಸಾಧಿಸಿತು.

    Published by:Vinay Bhat
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು