ಮುಂಬೈ ಇಂಡಿಯನ್ಸ್​ ಬ್ಯಾಟ್ಸ್​ಮನ್​ನ ಸ್ಫೋಟಕ ಆಟ; 94 ರನ್​ಗಳಲ್ಲಿ 11 ಸಿಕ್ಸರ್; ತೆಗೆದುಕೊಂಡ ಬಾಲ್ ಎಷ್ಟು?

ಮುಂಬೈ ಇಂಡಿಯನ್ಸ್​ ತನ್ನ ಟ್ವಿಟ್ಟರ್ ಖಾತೆಯಲ್ಲಿ ಲಿನ್ ಆಟದ ಬಗ್ಗೆ ಹಂಚಿಕೊಂಡಿದ್ದು, ಇವರ ಸ್ಪೋಟಕ ಆಟವನ್ನು ಮುಂಬೈ ಇಂಡಿಯನ್ಸ್ ಪರ ನೋಡಲು ಕಾಯುತ್ತಿದ್ದೀರಾ? ಎಂದು ಬರೆದುಕೊಂಡಿದೆ.

ಯಾವುದೇ ಕ್ಷಣದಲ್ಲೂ ಬಿರುಸಿನ ಆಟವಾಡುವಲ್ಲಿ ಕ್ರಿಸ್ ಲಿನ್ ನಿಪುಣ. ಹೀಗಾಗಿಯೇ ಆಸ್ಟ್ರೇಲಿಯಾದ ಈ ಆಟಗಾರನನ್ನು ಆರಂಭಿಕನಾಗಿ ಕಣಕ್ಕಿಳಿಸಲಿದ್ದಾರೆ. ಒಂದು ವೇಳೆ ಸೂಪರ್ ಓವರ್ ಸಿಕ್ಕರೂ ಕ್ರಿಸ್ ಲಿನ್/ರೋಹಿತ್ ಓಪನರ್​ಗಳಾಗಿ ಮೈದಾನಕ್ಕಿಳಿಯಲಿದ್ದಾರೆ.

 • Share this:
  ಬೆಂಗಳೂರು (ಡಿ. 22): 12ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಮೂಲಬೆಲೆ 20 ಲಕ್ಷಕ್ಕೆ ಮುಂಬೈ ಇಂಡಿಯನ್ಸ್​ ಪಾಲಾಗಿರುವ ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಕ್ರಿಸ್ ಲಿನ್ ಬಿಗ್​ ಬ್ಯಾಷ್​​ನಲ್ಲಿ ಅಬ್ಬರಿಸುತ್ತಿದ್ದಾರೆ.

  ಕಾಂಗರೂಗಳ ನಾಡಲ್ಲಿ ಸಾಗುತ್ತಿರುವ 2019-20ನೇ ಸಾಲಿನ ಬಿಗ್​ಬ್ಯಾಷ್ ಟಿ-20 ಲೀಗ್​ನಲ್ಲಿ ಲಿನ್ ಬೌಂಡರಿ- ಸಿಕ್ಸರ್​ಗಳ ಮಳೆ ಸುರಿಸುತ್ತಿದ್ದಾರೆ. ಬ್ರಿಸ್ಬೇನ್ ಹೀಟ್ ತಂಡದ ಕ್ಯಾಪ್ಟನ್ ಆಗಿರುವ ಲಿನ್, ಸಿಡ್ನಿ ಸಿಕ್ಸರ್ಸ್​​ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದರು. ಇವರ ಬ್ಯಾಟಿಂಗ್ ವೈಖರಿ ಕಂಡು ಮುಂಬೈ ಇಂಡಿಯನ್ಸ್​ ಫುಲ್ ಖುಷಿಯಾಗಿದೆ.

  India vs West Indies Live: ಪೊಲಾರ್ಡ್​-ಪೂರನ್ ಬೊಂಬಾಟ್ ಆಟ; ಭಾರತಕ್ಕೆ 316 ರನ್​ಗಳ ಟಾರ್ಗೆಟ್

  ಲಿನ್ ಕೇವಲ 35 ಎಸೆತಗಳಲ್ಲಿ ಬರೋಬ್ಬರಿ 11 ಸಿಕ್ಸರ್ ಹಾಗೂ 4 ಬೌಂಡರಿ ಸಿಡಿಸಿ 94 ರನ್ ಚಚ್ಚಿದ್ದಾರೆ. ಆರಂಭಿಕನಾಗಿ ಕಣಕ್ಕಿಳಿದ ಲಿನ್ ಕೇವಲ 9 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಈ ಮೂಲಕ ಐಪಿಎಲ್​ನಲ್ಲೂ ಅಬ್ಬರಿಸುವ ಸೂಚನೆ ನೀಡಿದ್ದಾರೆ.

     ಮುಂಬೈ ಇಂಡಿಯನ್ಸ್​ ತನ್ನ ಟ್ವಿಟ್ಟರ್ ಖಾತೆಯಲ್ಲಿ ಲಿನ್ ಆಟದ ಬಗ್ಗೆ ಹಂಚಿಕೊಂಡಿದ್ದು, ಇವರ ಸ್ಪೋಟಕ ಆಟವನ್ನು ಮುಂಬೈ ಇಂಡಿಯನ್ಸ್ ಪರ ನೋಡಲು ಕಾಯುತ್ತಿದ್ದೀರಾ? ಎಂದು ಬರೆದುಕೊಂಡಿದೆ.

     IPL 2020: ಐಪಿಎಲ್​ ಆರಂಭಕ್ಕೂ ಮುನ್ನವೇ ಕೆಕೆಆರ್ ತಂಡದ ಆಟಗಾರನಿಗೆ ಗೇಟ್​ ಪಾಸ್?

  ಲಿನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಬ್ರಿಸ್ಬೇನ್ ತಂಡ 20 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 209 ರನ್ ಬಾರಿಸಿತು. ಟಾರ್ಗೆಟ್ ಬೆನ್ನಟ್ಟಿದ ಸಿಡ್ನಿ ತಂಡ 20 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಗೊಂಡಿತು. ಬ್ರಿಸ್ಬೇನ್ ತಂಡ 48 ರನ್​ಗಳ ಭರ್ಜರಿ ಜಯ ಸಾಧಿಸಿತು.

  Published by:Vinay Bhat
  First published: