ವರ್ಷದ ಕೊನೆಯಲ್ಲಿ 2019ರ ಅತ್ಯುತ್ತಮ ಕ್ಯಾಚ್; ರೋಚಕ ವಿಡಿಯೋ ಇಲ್ಲಿದೆ ನೋಡಿ

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪರ್ತ್​​ ತಂಡ ನಾಯಕ ಮಿಚೆಲ್ ಮಾರ್ಶ್​ ಅವರ ಅಜೇಯ 56 ಹಾಗೂ ಕ್ಯಾಮ್ರನ್ ಬೆನ್​ಕ್ರಾಫ್ಟ್​ ಅವರ 51 ರನ್​ಗಳ ನೆರವಿನಿಂದ 20 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 196 ರನ್ ಕಲೆಹಾಕಿತು.

news18-kannada
Updated:December 22, 2019, 2:54 PM IST
ವರ್ಷದ ಕೊನೆಯಲ್ಲಿ 2019ರ ಅತ್ಯುತ್ತಮ ಕ್ಯಾಚ್; ರೋಚಕ ವಿಡಿಯೋ ಇಲ್ಲಿದೆ ನೋಡಿ
ಕ್ರಿಸ್ ಜೋರ್ಡನ್ ಹಿಡಿದ ಕ್ಯಾಚ್
  • Share this:
ಆಸ್ಟ್ರೇಲಿಯಾದಲ್ಲಿ ಸಾಗುತ್ತಿರುವ ಬಿಗ್​ಬ್ಯಾಷ್​ ಟಿ-20 ಲೀಗ್​ ದಿನದಿಂದ ದಿನಕ್ಕೆ ಭಾರೀ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೆ ಗ್ಲೆನ್ ಮ್ಯಾಕ್ಸ್​ವೆಲ್​ ಸ್ಫೋಟಕ ಬ್ಯಾಟಿಂಗ್ ನಡೆಸಿ ಭರ್ಜರಿ ಕಮ್​ಬ್ಯಾಕ್ ಮಾಡಿದ್ದರು. ಸದ್ಯ ಇಂಗ್ಲೆಂಡ್​ ತಂಡದ ವೇಗಿ ಕ್ರಿಸ್ ಜೋರ್ಡಬ್ ಹಿಡಿದ ಅದ್ಭುತ ಕ್ಯಾಚ್ ಎಲ್ಲೆಡೆ ವೈರಲ್ ಆಗುತ್ತಿದೆ.

ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆದ ಪರ್ತ್ ಸ್ಕಾರ್ಚರ್ಸ್ ಹಾಗೂ ಮೆಲ್ಬೋರ್ನ್ ರೆನೆಗೇಡ್ಸ್ ನಡುವಿನ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಅದರಲ್ಲಿ ಜೋರ್ಡನ್ ಹಿಡಿದ ಈ ಕ್ಯಾಚ್​ ಬಿಗ್​ ಬ್ಯಾಷ್​ ಲೀಗ್​ನಲ್ಲಿಯೇ ಅತ್ಯದ್ಬುತ ಕ್ಯಾಚ್ ಎಂದು ಹೇಳಲಾಗಿದೆ. ಅಲ್ಲದೆ 2019ರ ಬೆಸ್ಟ್​​ ಕ್ಯಾಚ್ ಎಂದು ಬಣ್ಣಿಸಲಾಗಿದೆ.

India vs West Indies Live: ವೆಸ್ಟ್​ ಇಂಡೀಸ್ ಮೊದಲ ವಿಕೆಟ್ ಪತನ; ಲೆವಿಸ್ ಔಟ್

ಮೆಲ್ಬೋರ್ನ್ ರೆನೆಗೇಡ್ಸ್​​​ ತಂಡದ ಆಟಗಾರ ಡೇನಿಯಲ್ ಕ್ರಿಶ್ಚಿಯನ್ ಅವರು 18ನೇ ಓವರ್​ನ ಅಂತಿಮ ಎಸೆತದಲ್ಲಿ ಚೆಂಡನ್ನು ಸಿಕ್ಸ್​​ಗೆಂದು ಅಟ್ಟಿದರು. ಆದರೆ, ಲಾಂಗ್ ಆನ್​ನಲ್ಲಿ ನಿಂತಿದ್ದ​ ಜೋರ್ಡಾನ್ ಓಡಿ ಬಂದು ಜಿಗಿದು ಚೆಂಡನ್ನು ಹಿಡಿದರು. ತಾನು ಹಿಡಿದ ಕ್ಯಾಚ್ ಕಂಡು ಒಮ್ಮೆ ಜೋರ್ಡನ್ ಕೂಡ ಅಚ್ಚರಿಗೊಂಡರು.

 ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪರ್ತ್​​ ತಂಡ ನಾಯಕ ಮಿಚೆಲ್ ಮಾರ್ಶ್​ ಅವರ ಅಜೇಯ 56 ಹಾಗೂ ಕ್ಯಾಮ್ರನ್ ಬೆನ್​ಕ್ರಾಫ್ಟ್​ ಅವರ 51 ರನ್​ಗಳ ನೆರವಿನಿಂದ 20 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 196 ರನ್ ಕಲೆಹಾಕಿತು.

RCB: ಈ ಬಾರಿಯಾದರೂ ಆರ್​ಸಿಬಿ ಕಪ್ ಗೆಲ್ಲುತ್ತಾ? ಫ್ಯಾನ್ ಪ್ರಶ್ನೆಗೆ ಸ್ಟೈನ್ ಹೇಳಿದ್ದೇನು?

 ಟಾರ್ಗೆಟ್ ಬೆನ್ನಟ್ಟಿದ ಮೆಲ್ಬೋರ್ನ್​ ತಂಡ 20 ಓವರ್​ನಲ್ಲಿ 6 ವಿಕೆಟ್ ಕಳೆದುಕೊಂಡು 185 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲೊಪ್ಪಿಗೊಂಡಿತು. ಬ್ಯೂ ವೆಬ್​ಸ್ಟೆರ್ ಅಜೇಯ 67 ಹಾಗೂ ಶಾನ್ ಮಾರ್ಶ್​​ 55 ರನ್ ಗಳಿಸಿದರು. ಪರ್ತ್ ಸ್ಕಾರ್ಚರ್ಸ್ ತಂಡ 11 ರನ್​ಗಳ ಗೆಲುವು ಸಾಧಿಸಿತು.

 

First published:December 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ