ಕ್ರಿಕೆಟ್ ಕ್ರೀಡೆಯಲ್ಲಿ ಒಂದಲ್ಲ ಒಂದು ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಅದು ಪಂದ್ಯ ಗೆಲ್ಲುವ ಪರಿ ಇರಬಹುದು ಅಥವಾ ಕ್ಯಾಚ್, ಔಟ್ ಆಗಿರಬಹುದು. ಇದೇರೀತಿ ಅಭಿಮಾನಿಗಳನ್ನು ದಂಗಾಗಿಸಿದ ಅಪರೂಪದ ಘಟನೆಯೊಂದು ಆಸ್ಟ್ರೇಲಿಯಾದಲ್ಲಿ ಸಾಗುತ್ತಿರುವ ಬಿಗ್ ಬ್ಯಾಷ್ ಟಿ-20 ಲೀಗ್ನಲ್ಲಿ ನಡೆದಿದೆ. ಒಂದು ಎಸೆತದಲ್ಲಿ ಒಬ್ಬ ಬ್ಯಾಟ್ಸ್ಮನ್ ಎರಡೂ ಕಡೆ ಔಟ್ ಆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಭಾನುವಾರ ಸಿಡ್ನಿ ಥಂಡರ್ ವಿರುದ್ಧದ ಬಿಗ್ ಬ್ಯಾಷ್ ಲೀಗ್ ಪಂದ್ಯದ ವೇಳೆ ಅಡಿಲೇಡ್ ಸ್ಟ್ರೈಕರ್ಸ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಜೇಕ್ ವೆದರ್ಲ್ಯಾಂಡ್ ಅವರು ಪಿಚ್ನ ಎರಡೂ ತುದಿಗಳಲ್ಲಿ ಕ್ರೀಸ್ನ ಎರಡು ಕಡೆ ಔಟಾದ ಕುಖ್ಯಾತಿಗೆ ಪಾತ್ರರಾದರು.
ವಿಮಾನ ದುರಂತ: ಫುಟ್ಬಾಲ್ ಆಟಗಾರರ ದುರಂತ ಸಾವು
10ನೇ ಓವರ್ರಲ್ಲಿ ಈ ಘಟನೆ ನಡಿದಿದೆ. ಕ್ರಿಸ್ ಗ್ರೀನ್ ಬೌಲಿಂಗ್ನಲ್ಲಿ ಅಡಿಲೇಡ್ ತಂಡದ ಪೀಟರ್ ಸಾಲ್ಟ್ ಚೆಂಡನ್ನು ಸ್ಟ್ರೇಟ್ ಡ್ರೈವ್ ಮಾಡಿದರು. ಗ್ರೀನ್ ಆ ಚೆಂಡನ್ನು ತಡೆಯುವ ಪ್ರಯತ್ನ ಮಾಡಿದರು. ಅವರ ಬೆರಳಿಗೆ ಬಿದ್ದ ಚೆಂಡು ನೇರವಾಗಿ ಸ್ಟಂಪ್ಗೆ ಅಪ್ಪಳಿಸಿತು. ಆಷ್ಟರಲ್ಲಿ ವೆದರ್ಲ್ಯಾಂಡ್ ಕ್ರೀಸ್ ಬಿಟ್ಟಿದ್ದರಿಂದ ಗ್ರೀನ್ ರನ್ಔಟ್ಗೆ ಅಪೀಲ್ ಮಾಡಿದರು.
ಮತ್ತೆ ಚೆಂಡು ಸ್ಟಂಪ್ಗೆ ಬಡಿದ ನಂತರ ಪೀಟರ್ ಸಾಲ್ಟ್ ಒಂದು ರನ್ಗಾಗಿ ಕರೆ ಮಾಡಿದರು. ವೆದರ್ಲ್ಯಾಂಡ್ ಮತ್ತೆ ಓಡಿದರು. ಆದರೆ ಫೀಲ್ಡರ್ ಕೀಪರ್ಗೆ ಚೆಂಡನ್ನು ಸರಿಯಾದ ಸಮಯಕ್ಕೆ ನೀಡಿದ್ದರಿಂದ ಅಲ್ಲೂ ಕೂಡ ಕ್ರೀಸ್ ಮುಟ್ಟುವಲ್ಲಿ ಅವರು ವಿಫಲರಾದರು. ಮೂರನೇ ಅಂಪೈರ್ ಟಿವಿ ರೀಪ್ಲೇ ವೀಕ್ಷಿಸಿದಾಗ ವೆದರ್ಲ್ಯಾಂಡ್ ಎರಡೂ ಕಡೆ ರನ್ಔಟ್ ಆಗಿರುವುದು ಸ್ಪಷ್ಟವಾಗಿತ್ತು.
ಆದಾಗ್ಯೂ ಕ್ರಿಕೆಟ್ನಲ್ಲಿ ಒಬ್ಬ ಬ್ಯಾಟ್ಸ್ಮನ್ನನ್ನು ಒಂದು ಎಸೆತದಲ್ಲಿ ಎರಡು ಬಾರಿ ಔಟ್ ಎಂದು ಘೋಷಿಸಲು ಸಾಧ್ಯವಿಲ್ಲ ಆದ್ದರಿಂದ ನಾನ್ ಸ್ಟ್ರೈಕ್ ನಲ್ಲಿದ್ದ ವೀಥರಾಲ್ದ್ ಅವರನ್ನು ಔಟ್ ಎಂದು ಘೋಷಿಸಲಾಯಿತು.
India vs England: ಭಾರತ-ಇಂಗ್ಲೆಂಡ್ ಟಿ-20 ಸರಣಿ ರೋಚಕತೆ ಸೃಷ್ಟಿಸಲು ಬಿಸಿಸಿಐ ಮಾಸ್ಟರ್ ಪ್ಲ್ಯಾನ್
ಈ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ 159 ರನ್ ಗಳಿಸಿದರೆ, ಇದನ್ನು ಹಿಂಬಾಲಿಸಿದ ಸಿಡ್ನಿ ಥಂಡರ್ 153 ರನ್ಗಳನ್ನಷ್ಟೇ ಗಳಿಸಿಲು ಶಕ್ತವಾಗಿ 6 ರನ್ಗಳ ಸೋಲು ಕಂಡಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ