Bharath Army: ಪಂದ್ಯ ಎಲ್ಲೇ ನಡೆದ್ರೂ ಬರುತ್ತೆ ಫ್ಯಾನ್ಸ್​ ಆರ್ಮಿ; ಟೀಂ ಇಂಡಿಯಾದ ಭಾರತ್​ ಆರ್ಮಿ ಬಗ್ಗೆ ನಿಮಗೆಷ್ಟು ಗೊತ್ತು?

ದೂರದ ಇಂಗ್ಲೆಂಡ್​ನಲ್ಲಿ ವಿಶ್ವಕಪ್​ ನಡೆಯುತ್ತಿದ್ದರೂ ಟೀಂ ಇಂಡಿಯಾ ಆಟಗಾರರಿಗೆ ಬೆಂಬಲಿಗರ ಕೊರತೆ ಕಾಡುತ್ತಿಲ್ಲ. ಪ್ರತಿ ಪಂದ್ಯದಲ್ಲೂ ಸ್ಟೇಡಿಯಂಗಳು ತುಂಬಿ ತುಳುಕಾಡುತ್ತವೆ.

Vinay Bhat | news18
Updated:June 27, 2019, 4:10 PM IST
Bharath Army: ಪಂದ್ಯ ಎಲ್ಲೇ ನಡೆದ್ರೂ ಬರುತ್ತೆ ಫ್ಯಾನ್ಸ್​ ಆರ್ಮಿ; ಟೀಂ ಇಂಡಿಯಾದ ಭಾರತ್​ ಆರ್ಮಿ ಬಗ್ಗೆ ನಿಮಗೆಷ್ಟು ಗೊತ್ತು?
ಭಾರತ ತಂಡಕ್ಕೆ ಬೆಂಬಲ ನೀಡುತ್ತಿರುವ ಭಾರತ್ ಆರ್ಮಿ
Vinay Bhat | news18
Updated: June 27, 2019, 4:10 PM IST
ಬೆಂಗಳೂರು (ಜೂ. 27): ಇಂಗ್ಲೆಂಡ್​​ನಲ್ಲಿ ವಿಶ್ವಕಪ್​ನಲ್ಲಿ ಆರಂಭವಾಗಿ ಆಗಲೇ ಅರ್ಧದಷ್ಟು ಪಂದ್ಯಗಳು ಮುಗಿದಿವೆ. ಭಾರತದ ಯಾವುದೇ ಪಂದ್ಯ ನೋಡಿದರೂ ಸ್ಟೇಡಿಯಂನಲ್ಲಿ ಜನ ತುಂಬಿರುತ್ತಾರೆ. ಅದು ಕೂಡ ಒಂದೇ ಕಲರ್​ ಜೆರ್ಸಿ ತೊಟ್ಟು ಟೀಂ ಇಂಡಿಯಾಗೆ ಬೆಂಬಲ ನೀಡುತ್ತಾರೆ. ಇವರ ಹಿಂದೆ ಒಂದು ಶಕ್ತಿ ಇದೆ.

ಭಾರತವಷ್ಟೇ ಅಲ್ಲದೆ ಹೊರದೇಶಗಳಲ್ಲಿ ಪಂದ್ಯ​ ನಡೆದರೂ ಅದಕ್ಕೆ ಅಭಿಮಾನಿಗಳ ಸೈನಿಕ ಪಡೆ ಬೆಂಬಲ ನೀಡುತ್ತಿದೆ. ಇದರ ಹೆಸರೇ 'ಭಾರತ್​ ಆರ್ಮಿ'. ಹೊರದೇಶಗಳಲ್ಲಿ ಮ್ಯಾಚ್ ನಡೆಯುವರಾಗ ಅವರನ್ನೆಲ್ಲಾ ಒಟ್ಟುಗೂಡಿಸುವ ಭಾರತ್​ ಆರ್ಮಿ ಭಾರತ ತಂಡಕ್ಕೆ ಬೆಂಬಲ ಮಾಡುತ್ತಿದೆ. ಅಭಿಮಾನಿಗಳೆಲ್ಲ ಒಂದೇ ಬಣ್ಣದ ಜೆರ್ಸಿ ತೊಡುವಲ್ಲಿ ಪ್ರಮುಖ ಪಾತ್ರ ವಹಿಸುವ ಭಾರತ್​ ಆರ್ಮಿ, ಟೀಂ ಇಂಡಿಯಾದ ಒಂದು ಮನೋಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡುತ್ತಿದೆ.

ಭಾರತ್​ ಆರ್ಮಿ ಯಾವುದೇ ಸಣ್ಣ ಸಂಘಟನೆಯಲ್ಲ. ಟೀಂ ಇಂಡಿಯಾದ ಅಫಿಷಿಯಲ್ ಸಪೋರ್ಟಿಂಗ್ ಟೀಂ. ವಿದೇಶಗಳಲ್ಲಿ ಭಾರತ್​ ಆರ್ಮಿ ಎಂದು ರಿಜಿಸ್ಟರ್​ ಕೂಡ ಮಾಡಿಸಿಕೊಂಡಿವೆ. ಈ ತಂಡದಲ್ಲಿ ಲಕ್ಷಾಂತರ ಅಭಿಮಾನಿಗಳು​ ಸದಸ್ಯರು ಕೂಡ ಆಗಿದ್ದಾರೆ. ಭಾರತ ಪಂದ್ಯ ನಡೆಯುವಾಗ ವಾದ್ಯ ಘೋಷಗಳೊಂದಿಗೆ ಅವರು ಮೈದಾನ ಪ್ರವೇಶಿಸುವುದು ವಿಶೇಷ.

Cricket World Cup 2019, Ind vs WI: ಭಾರತಕ್ಕೆ ಕೊಹ್ಲಿ-ರಾಹುಲ್ ಆಸರೆ

Bharat Army Team India Fans
ಭಾರತ್ ಆರ್ಮಿ


ವಿಶ್ವಕಪ್​ಗೂ ಮುನ್ನ ಭಾರತ್​ ಆರ್ಮಿ ಸಖತ್​ ತಯಾರಿ ಮಾಡಿಕೊಂಡಿತ್ತು. ಫ್ಯಾನ್ಸ್​ ಪಡೆ ಭಾರತ್​ ಆರ್ಮಿ ಬಣ್ಣಬಣ್ಣದ ಜೆರ್ಸಿ ತಯಾರು ಮಾಡಿತ್ತು. ಅಷ್ಟೇ ಅಲ್ಲದೆ, ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲಿ ಎಂದು ಒಂದು ಹಾಡನ್ನೂ ಸಹ ಬಿಡುಗಡೆ ಮಾಡಿತ್ತು.

 
Loading...




ದೂರದ ಇಂಗ್ಲೆಂಡ್​ನಲ್ಲಿ ವಿಶ್ವಕಪ್​ ನಡೆಯುತ್ತಿದ್ದರೂ ಟೀಂ ಇಂಡಿಯಾ ಆಟಗಾರರಿಗೆ ಬೆಂಬಲಿಗರ ಕೊರತೆ ಕಾಡುತ್ತಿಲ್ಲ. ಪ್ರತಿ ಪಂದ್ಯದಲ್ಲೂ ಸ್ಟೇಡಿಯಂಗಳು ತುಂಬಿ ತುಳುಕಾಡುತ್ತವೆ. ಜೂನ್​ 30ಕ್ಕೆ ಆತಿಥೇಯ ಇಂಗ್ಲೆಂಡ್​ ಹಾಗೂ ಭಾರತ ನಡುವೆ ಮ್ಯಾಚ್​ ನಡೆಯುತ್ತಿದ್ದು, ಭಾರತ್​ ಆರ್ಮಿ ಅಭಿಮಾನಿಗಳು​ ಹೆಚ್ಚಿನ ಸಂಖ್ಯೆಯಲ್ಲಿ ಸ್ಟೇಡಿಯಂಗೆ ಬಂದು ಸ್ಥಳೀಯ ಇಂಗ್ಲೆಂಡ್​ ಫ್ಯಾನ್ಸ್​ಗೆ ಶಾಕ್ ಕೊಡಲು ತಯಾರಾಗಿದ್ದಾರೆ.

First published:June 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...