Steve Smith: ಸೂಪರ್ ಮ್ಯಾನ್​ನಂತೆ ಜಿಗಿದ ಸ್ಮಿತ್; ಅದ್ಭುತ ಕ್ಯಾಚ್​ನ ವೈರಲ್​ ವಿಡಿಯೋ ಇಲ್ಲಿದೆ!

ಇಂಗ್ಲೆಂಡ್ ಬ್ಯಾಟ್ಸ್​ಮನ್​​ ಕ್ರಿಸ್ ವೋಕ್ಸ್​ ಬ್ಯಾಟ್​ಗೆ ತಾಗಿದ ಚೆಂಡು ನೇರವಾಗಿ ಎರಡನೇ ಸ್ಲಿಪ್​ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸ್ಮಿತ್ ಹತ್ತಿರ ಬಂತು. ಈ ಸಂದರ್ಭ ಸೂಪರ್ ಮ್ಯಾನ್​ನಂತೆ ಜಿಗಿದ ಸ್ಮಿತ್ ಒಂದೇ ಕೈಯಲ್ಲಿ ಬಾಲ್ ಹಿಡಿದು ಅದ್ಭುತ ಕ್ಯಾಚ್ ಪಡೆದರು.

Vinay Bhat | news18-kannada
Updated:September 16, 2019, 1:30 PM IST
Steve Smith: ಸೂಪರ್ ಮ್ಯಾನ್​ನಂತೆ ಜಿಗಿದ ಸ್ಮಿತ್; ಅದ್ಭುತ ಕ್ಯಾಚ್​ನ ವೈರಲ್​ ವಿಡಿಯೋ ಇಲ್ಲಿದೆ!
ಸ್ಟೀವ್ ಸ್ಮಿತ್ ಹಿಡಿದ ಕ್ಯಾಚ್
  • Share this:
ಬೆಂಗಳೂರು (ಸೆ. 16): 2019ರ ಆ್ಯಶಸ್ ಸರಣಿ ಆಸ್ಟ್ರೇಲಿಯಾ ಆಟಗಾರ ಸ್ಟೀವ್ ಸ್ಮಿತ್ ಬದುಕಿಗೆ ಮತ್ತೆ ಜೀವ ನೀಡಿದೆ. ಬ್ಯಾಟಿಂಗ್- ಫೀಲ್ಡಿಂಗ್​ನಲ್ಲಿ ಮಿಂಚಿದ ಸ್ಮಿತ್ ಆ್ಯಶಸ್ ಟ್ರೋಫಿಯನ್ನು ತಮ್ಮಲ್ಲೆ ಇರಿಸಿಕೊಳ್ಳುವಂತೆ ಮಾಡಿದರು.

ಆ್ಯಶಸ್ ಟೂರ್ನಿಯಿದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಸ್ಮಿತ್ 7 ಇನ್ನಿಂಗ್ಸ್​ನಲ್ಲಿ 774 ರನ್ ಕಲೆಹಾಕಿದರು. ಇದರಲ್ಲಿ ಒಂದು ದ್ವಿಶತಕ, 2 ಶತಕ ಹಾಗೂ 3 ಅರ್ಧಶತಕ ಸೇರಿದ್ದವು. ಆ್ಯಶಸ್ ಟೆಸ್ಟ್​ ಸರಣಿಯ ಇತಿಹಾಸದಲ್ಲೇ ಗರಿಷ್ಠ ರನ್ ಕಲೆಹಾಕಿದವರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದರು. ಜೊತೆಗೆ ದಾಖಲೆ ಮೇಲೆ ದಾಖಲೆ ಬರೆದು ಐಸಿಸಿ ಬ್ಯಾಟ್ಸ್​ಮನ್​ಗಳ ಟೆಸ್ಟ್​ ರ್ಯಾಂಕಿಂಗ್​ನಲ್ಲಿ ವಿರಾಟ್ ಕೊಹ್ಲಿ ಅನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಅಲಂಕರಿಸಿದರು.

ಕೇವಲ ಬ್ಯಾಟಿಂಗ್​ನಲ್ಲಿ ಮಿಂಚಿ ಸ್ಮಿತ್ ತಂಡದಕ್ಕೆ ಆಸರೆಯಾಗಿದ್ದಲ್ಲ. ಫೀಲ್ಡಿಂಗ್​ನಲ್ಲು ಕಮಾಲ್ ಮಾಡಿದ್ದಾರೆ. ಐದನೇ ಟೆಸ್ಟ್​ನ ಮೂರನೇ ದಿನ ಬ್ಯಾಟಿಂಗ್ ಮಾಡುತ್ತಿದ್ದ ಇಂಗ್ಲೆಂಡ್​ಗೆ ಸ್ಮಿತ್ ಶಾಕ್ ನೀಡಿದರು.

[VIDEO] Best catch of Ashes 2019? Steve Smith plucks one-handed stunner to dismiss Chris Woakes
ಸ್ಟೀವ್ ಸ್ಮಿತ್ ಹಿಡಿದ ಅದ್ಭುತ ಕ್ಯಾಚ್
ಕೊಹ್ಲಿ ತಿಂಗಳಿಗೆ ಕಟ್ಟುವ ಮನೆ ಬಾಡಿಗೆಯಲ್ಲಿ ಸಾಮಾನ್ಯರು ಹೊಸ ಮನೆಯನ್ನೇ ಖರೀದಿಸಬಹುದು!

ಇಂಗ್ಲೆಂಡ್ ಬ್ಯಾಟ್ಸ್​ಮನ್​​ ಕ್ರಿಸ್ ವೋಕ್ಸ್​ ಬ್ಯಾಟ್​ಗೆ ತಾಗಿದ ಚೆಂಡು ನೇರವಾಗಿ ಎರಡನೇ ಸ್ಲಿಪ್​ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸ್ಮಿತ್ ಹತ್ತಿರ ಬಂತು. ಈ ಸಂದರ್ಭ ಸೂಪರ್ ಮ್ಯಾನ್​ನಂತೆ ಜಿಗಿದ ಸ್ಮಿತ್ ಒಂದೇ ಕೈಯಲ್ಲಿ ಬಾಲ್ ಹಿಡಿದು ಅದ್ಭುತ ಕ್ಯಾಚ್ ಪಡೆದರು.

 ಸ್ಮಿತ್ ಒಂದು ಕೈಯಲ್ಲಿ ಹಿಡಿದ ಕ್ಯಾಚ್ ಸದ್ಯ ಭಾರೀ ವೈರಲ್ ಆಗುತ್ತಿದೆ. ಅಲ್ಲದೆ ಈ ಕ್ಯಾಚ್ 2019ರ ಬೆಸ್ಟ್​ ಕ್ಯಾಚ್ ಎಂದೇ ಹೇಳಲಾಗುತ್ತಿದೆ.

ಲಂಡನ್​​ನ ಓವಲ್ ಮೈದಾನದಲ್ಲಿ ನಡೆದ ಆ್ಯಶಸ್ ಟೆಸ್ಟ್​ ಸರಣಿಯ ಐದನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 135 ರನ್​ಗಳಿಂದ ಗೆದ್ದು ಬೀಗಿತು. ಈ ಮೂಲಕ ಐದು ಪಂದ್ಯಗಳ ಆ್ಯಶಸ್ ಟೆಸ್ಟ್​ ಸರಣಿಯಲ್ಲಿ ಉಭಯ ತಂಡಗಳು 2-2 ರ ಸಮಬಲ ಸಾಧಿಸಿದ್ದು, ಡ್ರಾನಲ್ಲಿ ಅಂತ್ಯ ಕಂಡಿತು.

ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ ಸ್ಟೀವ್ ಸ್ಮಿತ್ ಹಾಗೂ ಬೆನ್ ಸ್ಟೋಕ್ಸ್​​ ಸರಣಿಶ್ರೇಷ್ಠ ಬಾಜಿಕೊಂಡರೆ, ಜೋಫ್ರಾ ಆರ್ಚೆರ್ ಪಂದ್ಯಶ್ರೇಷ್ಠ ತಮ್ಮದಾಗಿಸಿದರು.

First published:September 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading