ತನ್ನ ಮಕ್ಕಳನ್ನೇ ಕೊಂದು ಹಾಕಿದ ಕ್ರಿಕೆಟಿಗ ಬೆನ್ ಸ್ಟೋಕ್ಸ್​ ಮಲ ತಂದೆ!

ಈ ವಿಚಾರವನ್ನು ತಾಯಿ ಡೆಬ್ ಸ್ಟೋಕ್ಸ್​ ಬಳಿ ತಿಳಿಸಿದ್ದರು. ಆದರೆ, ಸ್ಟೋಕ್ಸ್​ ಈ ವಿಚಾರವನ್ನು ಈವರೆಗೆ ಎಲ್ಲಿಯೂ ಮಾತನಾಡಿಲ್ಲ. ಆದರೀಗ ಸಂದರ್ಶನವೊಂದರಲ್ಲಿ ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್ ಈ ಭಯಾನಕ ಸುದ್ದಿಯನ್ನು ತಿಳಿಸಿದ್ದಾರೆ.

Vinay Bhat | news18-kannada
Updated:September 17, 2019, 12:10 PM IST
ತನ್ನ ಮಕ್ಕಳನ್ನೇ ಕೊಂದು ಹಾಕಿದ ಕ್ರಿಕೆಟಿಗ ಬೆನ್ ಸ್ಟೋಕ್ಸ್​ ಮಲ ತಂದೆ!
ಸರ್ ಗ್ಯಾರಿ ಸೋಬರ್ಸ್ ಅವಾರ್ಡ್ - ಬೆನ್ ಸ್ಟೋಕ್ಸ್, ಇಂಗ್ಲೆಂಡ್.
  • Share this:
ಬೆಂಗಳೂರು (ಸೆ. 17): ಈ ಬಾರಿಯ ವಿಶ್ವಕಪ್ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಗೆಲ್ಲಲು ನಿರ್ಣಾಯಕ ಪಾತ್ರವಹಿಸಿದ್ದ ನ್ಯೂಜಿಲೆಂಡ್ ಮೂಲದ ಕ್ರಿಕೆಟಿಗ ಬೆನ್ ಸ್ಟೋಕ್ಸ್​ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ, ಈ ಬಾರಿ ಅವರು ಸುದ್ದಿಯಾಗಿದ್ದು ಕ್ರಿಕೆಟ್​ ವಿಷಯದಲ್ಲಲ್ಲ. ಬದಲಿಗೆ ಕೌಟುಂಬಿಕ ವಿಚಾರಕ್ಕೆ!

ಹೌದು, ಅವರ ಕುಟುಂಬದ ಬಗ್ಗೆ ಸ್ಟೋಕ್ಸ್​ ಆಘಾತಕಾರಿ ಸುದ್ದಿಯನ್ನು ಬಿಚ್ಚಿಟ್ಟಿದ್ದಾರೆ. ಸ್ಟೋಕ್ಸ್​ ಅವರ ಮಲ ತಂದೆ ಸ್ವಂತ ಮಕ್ಕಳನ್ನೇ ದಾರುಣವಾಗಿ ಕೊಲೆ ಮಾಡಿದ್ದರು ಎಂಬ ಸಂಗತಿ ಬಹಿರಂಗ ಆಗಿದೆ.

ದಿ ಸನ್ ಪತ್ರಿಕೆ ಈ ಬಗ್ಗೆ ವರದಿ ಮಾಡಿದೆ. ಸ್ಟೋಕ್ಸ್​ ತಾಯಿಯ ಹೆಸರು ಡೆಬ್. ಅವರ ಮೊದಲ ಪತಿಯ ಹೆಸರು ರಿಚರ್ಡ್​​ ಡನ್. ಈ ದಂಪತಿಗೆ ಆ್ಯಂಡ್ರೋ(4) ಹಾಗೂ ಟ್ರೇಸಿ(8) ಹೆಸರಿನ ಮಕ್ಕಳಿದ್ದರು. ಆಘಾತಕಾರಿ ವಿಚಾರ ಎಂಬಂತೆ ರಿಚರ್ಡ್ ಒಂದು ದಿನ ಕ್ರಿಸ್ಟ್​ ಚರ್ಚ್​ ಬಳಿ ಆ್ಯಂಡ್ರೋ ಹಾಗೂ ಟ್ರೇಸಿಗೆ ಗುಂಡಿಕ್ಕಿ ಕೊಲೆ ಮಾಡಿದ್ದರು.

No more biryani: ಬಿರಿಯಾನಿ ತಿನ್ನುವಂತಿಲ್ಲ ಪಾಕ್ ಆಟಗಾರರು; ಕೋಚ್ ಮಿಸ್ಬಾ ಖಡಕ್ ವಾರ್ನಿಂಗ್!

Ben Stokes' untold family tragedy - half-brother, sister shot dead in 1988
ತಾಯಿ ಜೊತೆ ಬೆನ್ ಸ್ಟೋಕ್ಸ್​


ಇದಾದ ಮರುಕ್ಷಣವೇ ರಿಚರ್ಡ್ ತಾವೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.  ಆದರೆ, ಇದಕ್ಕೆ ಕಾರಣವೇನು ಎನ್ನುವ ವಿಚಾರ ಇನ್ನೂ ರಹಸ್ಯವಾಗಿಯೇ ಉಳಿದಿದೆ.

ಇಬ್ಬರು ಮಕ್ಕಳನ್ನು ಹಾಗೂ ಗಂಡನನ್ನು ಕಳೆದುಕೊಂಡಿದ್ದ ಡೆಬ್ ಅವರು ನಂತರದಲ್ಲಿ ರಗ್ಬಿ ಕೋಚ್ ಗೆರಾರ್ಡ್ಸ್​​ ಸ್ಟೋಕ್ಸ್​ ಎಂಬವರನ್ನು ಮಾದೆಯಾಗಿದ್ದರು. ಬಳಿಕ 1991 ರಲ್ಲಿ ಬೆನ್ ಸ್ಟೋಕ್ಸ್​ ಇಂಗ್ಲೆಂಡ್​ನಲ್ಲಿ ಜನಿಸಿದ್ದರು.ಈ ವಿಚಾರವನ್ನು ತಾಯಿ ಡೆಬ್ ಸ್ಟೋಕ್ಸ್​ ಬಳಿ ತಿಳಿಸಿದ್ದರು. ಆದರೆ, ಸ್ಟೋಕ್ಸ್​ ಈ ವಿಚಾರವನ್ನು ಈವರೆಗೆ ಎಲ್ಲಿಯೂ ಮಾತನಾಡಿಲ್ಲ. ಆದರೀಗ ಸಂದರ್ಶನವೊಂದರಲ್ಲಿ ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್ ಈ ಭಯಾನಕ ಸುದ್ದಿಯನ್ನು ತಿಳಿಸಿದ್ದಾರೆ.

First published:September 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading