ಉಸಿರು ಇರೋವರೆಗೂ ಕೇನ್​ ವಿಲಿಯಮ್ಸನ್​ಗೆ ಕ್ಷಮೆ ಕೇಳುತ್ತೇನೆ; ವಿಶ್ವಕಪ್​ ಹೀರೋ ಬೆನ್​​ಸ್ಟೋಕ್ಸ್​​ ಹೀಗಂದಿದ್ಯಾಕೆ?

ವಿಶ್ವಕಪ್​ನಲ್ಲಿ ಜಯಶಾಲಿಯಾಗಬೇಕೆಂಬ ಹುಮ್ಮಸ್ಸಿನಲ್ಲಿದ್ದ ನನಗೆ ಅರಿವಿಲ್ಲದೆ ಈ ರೀತಿಯಾಗಿದೆ. ಅದನ್ನು ಉದ್ದೇಶ ಪೂರ್ವಕವಾಗಿ ಮಾಡಿಲ್ಲ, ಆದರೂ ನನ್ನಿಂದ ತಪ್ಪಾಗಿದ್ದರೆ ಕೇನ್​ ವಿಲಿಯಮ್ಸ್​ ಬಳಿ ಕ್ಷಮೆ ಕೋರುತ್ತೇನೆ ಎಂದು ಸ್ಟ್ರೋಕ್​ ಹೇಳಿದ್ದಾರೆ.​

Harshith AS | news18
Updated:July 18, 2019, 6:25 PM IST
ಉಸಿರು ಇರೋವರೆಗೂ ಕೇನ್​ ವಿಲಿಯಮ್ಸನ್​ಗೆ ಕ್ಷಮೆ ಕೇಳುತ್ತೇನೆ; ವಿಶ್ವಕಪ್​ ಹೀರೋ ಬೆನ್​​ಸ್ಟೋಕ್ಸ್​​ ಹೀಗಂದಿದ್ಯಾಕೆ?
ಬೆನ್​​ಸ್ಟೋಕ್ಸ್​​
  • News18
  • Last Updated: July 18, 2019, 6:25 PM IST
  • Share this:
2019ರ ವಿಶ್ವಕಪ್​ ಫೈನಲ್​ ಹೀರೋ ಬೆನ್​​ಸ್ಟೋಕ್ಸ್​​  'ನನ್ನ ಜೀವನದ ಉದ್ದಕ್ಕೂ ನ್ಯೂಜಿಲೆಂಡ್​ ತಂಡದ ನಾಯಕ ಕೇನ್​ ವಿಲಿಯಮ್ಸನ್​​ ಬಳಿ ಕ್ಷಮೆ ಕೇಳುತ್ತೇನೆ' ಎಂದು ಹೇಳಿದ್ದಾರೆ.

ಇಂಗ್ಲೆಂಡ್​-ನ್ಯೂಜಿಲೆಂಡ್ ತಂಡಗಳ ನಡುವೆ ನಡೆದ ಫೈನಲ್​ ಪಂದ್ಯದ ಕುರಿತು ಮಾತನಾಡಿರುವ ಬೆನ್ ಸ್ಟೋಕ್ಸ್​, ಪಂದ್ಯದ ಗತಿಯನ್ನೇ ಬದಲಾಯಿಸಿದ ತಮ್ಮ ರನೌಟ್​ ಮಿಸ್​ ಕುರಿತಂತೆ ಮಾತನಾಡಿದ್ದಾರೆ. ಅದು ಉದ್ದೇಶ ಪೂರ್ವಕವಾಗಿ ಮಾಡಿಲ್ಲ, ಆದರೂ ನನ್ನಲ್ಲಿ ತಪ್ಪಿತಸ್ಥ ಭಾವನೆ ಕಾಡುತ್ತಿದೆ. ಹಾಗಾಗೀ ನನ್ನ ಜೀವನ ಉದ್ದಕ್ಕೂ  ಕೇನ್​ ವಿಲಿಯಮ್ಸನ್​ ಅವರಿಗೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ನಾವೆಲ್ಲ ಅಣ್ಣತಮ್ಮಂದಿರು, ಬನ್ನಿ ಕುಳಿತು ಮಾತಾಡೋಣ; ಅತೃಪ್ತ ಶಾಸಕರಿಗೆ ಡಿಕೆ ಶಿವಕುಮಾರ್​ ಮನವಿ

ವಿಶ್ವಕಪ್​ನಲ್ಲಿ ಜಯಶಾಲಿಯಾಗಬೇಕೆಂಬ ಹುಮ್ಮಸ್ಸಿನಲ್ಲಿದ್ದ ನನಗೆ ಅರಿವಿಲ್ಲದೆ ಈ ರೀತಿಯಾಗಿದೆ. ಅದನ್ನು ಉದ್ದೇಶ ಪೂರ್ವಕವಾಗಿ ಮಾಡಿಲ್ಲ, ಆದರೂ ನನ್ನಿಂದ ತಪ್ಪಾಗಿದ್ದರೆ ಕೇನ್​ ವಿಲಿಯಮ್ಸನ್​ ಬಳಿ ಕ್ಷಮೆ ಕೋರುತ್ತೇನೆ ಎಂದು ಸ್ಟೋಕ್ಸ್​​ ಹೇಳಿದ್ದಾರೆ.​

ಲಾರ್ಡ್​ನಲ್ಲಿ ನಡೆದ ಇಂಗ್ಲೆಂಡ್​ ಮತ್ತು ನ್ಯೂಜಿಲೆಂಡ್​ ತಂಡಗಳ ನಡುವೆ ನಡೆದ ಫೈನಲ್​ ಪಂದ್ಯ ರೋಚಕವಾಗಿತ್ತು. ಇತ್ತಂಡಗಳ ಪ್ರಬಲ ಪೈಪೋಟಿಯಿಂದ ಪಂದ್ಯ ಸೂಪರ್​ ಓವರ್​ನಲ್ಲೂ ಟೈ ಆಗಿತ್ತು. ಆದರೆ ಇಂಗ್ಲೆಂಡ್​ ತಂಡ ಬಾರಿಸಿದ ಬೌಂಡರಿಗಳ ಲೆಕ್ಕಾಚಾರದಿಂದ ಇಂಗ್ಲೆಂಡ್​ ಗೆಲುವು ಪಡೆಯಿತು.

ಇನ್ನು ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​ಗೆ ಕಠಿಣ ಪರಿಶ್ರಮದ ಜೊತೆಗೆ ಅದೃಷ್ಠವೂ ಕೈ ಹಿಡಿದಿತ್ತು. ಬೆನ್ ಸ್ಟೋಕ್ಸ್ ಕೊನೆಯ ಓವರ್​ನಲ್ಲಿ ಗೆಲುವಿನ 2 ರನ್​ಗಾಗಿ ಪ್ರಯತ್ನಿಸಿದ ವೇಳೆ ಡೈವ್​ ಹೊಡೆದಿದ್ದರು. ಆದರೆ ಚೆಂಡು ನೇರವಾಗಿ ಸ್ಟೋಕ್ಸ್​ ಬ್ಯಾಟ್​ಗೆ ತಾಗಿ ಬೌಂಡರಿ ಗೆರೆ ದಾಟಿತ್ತು. ಹೀಗಾಗಿ ಇಂಗ್ಲೆಂಡ್​​ ತಂಡ ಬೌಂಡರಿಯ ಜೊತೆಗೆ 2 ರನ್,​​ ಒಟ್ಟು 6 ರನ್​ ಗಳಿಸಿಕೊಂಡಿತು. ಈ ಘಟನೆಯಿಂದ ಇಂಗ್ಲೆಂಡ್​ ತಂಡ 2019ರ ವಿಶ್ವಕಪ್​ನಲ್ಲಿ ಜಯಶಾಲಿಯಾದರು.

First published:July 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading