ವಿರಾಟ್ ಕೊಹ್ಲಿ ಪ್ರತಿ ಬಾರಿ ಎದುರಾಳಿಯ ವಿಕೆಟ್ ಪಡೆದಾಗ ಬೆನ್ ಸ್ಟೋಕ್ಸ್ ಹೆಸರು ಹೇಳುವುದೇಕೆ?

ICC Cricket World Cup 2019: ಸ್ಟೋಕ್ಸ್​ ಈರೀತಿ ಟ್ವೀಟ್ ಮಾಡಿದ ಬೆನ್ನಲ್ಲೆ ಅನೇಕರು ಕೊಹ್ಲಿ ಮೈದಾನದಲ್ಲಿ ಸಂಭ್ರಮಿಸುವಾಗ 'ಬೆನ್ ಸ್ಟೋಕ್ಸ್'​ ಎಂದು ಹೇಳುವಂತಿರುವ ವಿಡಿಯೋವನ್ನು ಶೇರ್ ಮಾಡಲು ಪ್ರಾರಂಭಿಸಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಬೆನ್ ಸ್ಟೋಕ್ಸ್​

ವಿರಾಟ್ ಕೊಹ್ಲಿ ಮತ್ತು ಬೆನ್ ಸ್ಟೋಕ್ಸ್​

  • News18
  • Last Updated :
  • Share this:
ಬೆಂಗಳೂರು (ಜೂ. 17): ಮ್ಯಾಚೆಂಸ್ಟರ್​ನಲ್ಲಿ ನಿನ್ನೆ ವಿಶ್ವಕಪ್​ನ ಹೈವೋಲ್ಟೇಜ್ ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಡೆಯುವ ವೇಳೆ ಇಂಗ್ಲೆಂಡ್ ಆಲ್ರೌಂಡರ್ ಆಟಗಾರ ಬೆನ್ ಸ್ಟೋಕ್ಸ್​ ಮಾಡಿರುವ ಟ್ವೀಟ್ ಈಗ ಸಖತ್ ವೈರಲ್ ಆಗುತ್ತಿದೆ.

'ನಾನು ನನ್ನ ಟ್ವಿಟ್ಟರ್ ಖಾತೆಯನ್ನು ಡಿಲೀಟ್ ಮಾಡಲಿದ್ದೇನೆ. ವಿರಟ್ ಕೊಹ್ಲಿ ಪ್ರತಿ ಬಾರಿ ಮೈದಾನದಲ್ಲಿ ಸಂಭ್ರಮಿಸುವಾಗ ನನ್ನ ಹೆಸರು ಹೇಳುತ್ತಾರೆ. ಇದನ್ನ ನೋಡಲು ನನ್ನಿಂದ ಸಾಧ್ಯವಾಗುತ್ತಿಲ್ಲ' ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

 ಕಾಸ್ಟ್ಲಿ ಟಿಕೆಟ್...ಕಾಮೆಂಟರಿ ಮೂಲಕ ಪಾಕಿಸ್ತಾನದ ಕಾಲೆಳೆದ ಸೌರವ್ ಗಂಗೂಲಿ..!

ಸ್ಟೋಕ್ಸ್​ ಈರೀತಿ ಟ್ವೀಟ್ ಮಾಡಿದ ಬೆನ್ನಲ್ಲೆ ಅನೇಕರು ಕೊಹ್ಲಿ ಮೈದಾನದಲ್ಲಿ ಸಂಭ್ರಮಿಸುವಾಗ 'ಬೆನ್ ಸ್ಟೋಕ್ಸ್'​ ಎಂದು ಹೇಳುವಂತಿರುವ ವಿಡಿಯೋವನ್ನು ಶೇರ್ ಮಾಡಲು ಪ್ರಾರಂಭಿಸಿದ್ದಾರೆ.

ಅಷ್ಟಕ್ಕು ಈ ವಿಡಿಯೋವನ್ನು ಗಮನಿಸಿದಾಗ ಕೊಹ್ಲಿ ಅವರು ಎದುರಾಳಿ ತಂಡದ ವಿಕೆಟ್ ಪಡೆದ ಕ್ಷಣವನ್ನು ಬೆನ್ ಸ್ಟೋಕ್ಸ್​ ಎಂದು ಉಚ್ಚರಿಸುವ ರೀತಿಯಲ್ಲೇ ಸಂಭ್ರಮಿಸಿದಂತಿದೆ. ಕೊಹ್ಲಿ ಬೆನ್ ಸ್ಟೋಕ್ಸ್​ ಎಂದು ಉಚ್ಚರಿಸುತ್ತಿರುವುದು ಸರಿಯಾಗಿ ಗೋಚರಿಸುತ್ತಿದೆ. ಆದರೆ ಎದುರಾಳಿಯ ವಿಕೆಟ್ ಹೋದಾಗ ಕೊಹ್ಲಿ ಸಂಭ್ರಮಿಸಿ ಹೇಳುತ್ತಿರುವುದು ಆಡು ಬಳಕೆಯ ಭಾಷೆಯಾಗಿದೆ.

 

ನಿನ್ನೆ ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ 89 ರನ್​ಗಳ ಭರ್ಜರಿ ಗೆಲುವು ಸಾಧಿಸಿತ್ತು. ರೋಹಿತ್ ಶರ್ಮಾರ ಅಮೋಘ ಶತಕ, ವಿರಾಟ್ ಕೊಹ್ಲಿಯ ಅರ್ಧಶತಕ ಹಾಗೂ ಬೌಲರ್​ಗಳ ಸಂಘಟಿತ ಹೋರಾಟದ ನೆರವಿನಿಂದ ಭಾರತ ವಿಶ್ವಕಪ್​​ನಲ್ಲಿ ಪಾಕಿಸ್ತಾನ ವಿರುದ್ಧ ತನ್ನ ಅಜೇಯ ಗೆಲುವಿನ ಓಟ ಮುಂದುವರೆಸಿದೆ.

India vs Pakistan: ರೋಚಕ ಪಂದ್ಯದ ನಡುವೆ ರಿಷಭ್ ಪಂತ್​ಗೆ ಬೇಬಿ ಸಿಟ್ಟರ್ ಕೆಲಸ: ವಿಡಿಯೋ ವೈರಲ್

 

First published: