India vs England: ಭಾರತದ ವಿರುದ್ಧದ ಸರಣಿಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ..!

ಫೆಬ್ರವರಿ 5 ರಿಂದ 9 ವರೆಗೆ ಮೊದಲ ಟೆಸ್ಟ್​ ಪಂದ್ಯ ಮತ್ತು ಫೆಬ್ರವರಿ 13 ರಿಂದ 17ರ ವರೆಗೆ ಎರಡನೇ ಟೆಸ್ಟ್ ಪಂದ್ಯಗಳು ನಡೆಯಲಿವೆ. 3 ಮತ್ತು 4ನೇ ಪಂದ್ಯಗಳು ಅಹಮದಾಬಾದ್‌ನಲ್ಲಿ ಫೆಬ್ರವರಿ 24ರಿಂದ 28 ಮತ್ತು ಮಾರ್ಚ್ 4ರಿಂದ 8ರವರೆಗೆ ನಡೆಯಲಿವೆ.

ರೂಟ್-ಕೊಹ್ಲಿ

ರೂಟ್-ಕೊಹ್ಲಿ

 • Share this:
  ಫೆಬ್ರವರಿಯಲ್ಲಿ ಆರಂಭವಾಗಲಿರುವ ಆತಿಥೇಯ ಭಾರತ-ಇಂಗ್ಲೆಂಡ್ ನಡುವಣ ಮೊದಲೆರಡು ಟೆಸ್ಟ್​ ಪಂದ್ಯಗಳಿಗಾಗಿ ಆಂಗ್ಲರ ಪಡೆಯನ್ನು ಪ್ರಕಟಿಸಲಾಗಿದೆ. ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮತ್ತು ವೇಗಿ ಜೋಫ್ರಾ ಆರ್ಚರ್ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಮರಳಲಿದ್ದಾರೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಿಂದ ಸ್ಟೋಕ್ಸ್ ಮತ್ತು ಆರ್ಚರ್  ವಿಶ್ರಾಂತಿ ಪಡೆದಿದ್ದರು. ಹಾಗೆಯೇ ಲಂಕಾ ವಿರುದ್ಧದ ಟೆಸ್ಟ್​ ಪಂದ್ಯದಿಂದ ಹೊರಗುಳಿದಿದ್ದ ಓಪನರ್ ರೋರಿ ಬರ್ನ್ಸ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

  ಇಂಗ್ಲೆಂಡ್ ತಂಡವನ್ನು ಜೋ ರೂಟ್ ಮುನ್ನಡೆಸಲಿದ್ದು, ಅನುಭವಿ ವೇಗಿಗಳಾದ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಕೂಡ ತಂಡದಲ್ಲಿದ್ದಾರೆ. ಇನ್ನು ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ ಜ್ಯಾಕ್ ಲೀಚ್ ಮತ್ತು ಡೊಮ್ ಬೆಸ್ ಅವರನ್ನು ಸ್ಪಿನ್ ವಿಭಾಗದಲ್ಲಿ ಹೆಸರಿಸಲಾಗಿದೆ. ಹಾಗೆಯೇ ಆಲ್‌ರೌಂಡರ್ ಸ್ಯಾಮ್ ಕರ್ರನ್ ಮತ್ತು ವೇಗಿ ಮಾರ್ಕ್ ವುಡ್ ಅವರನ್ನು ತಂಡದಿಂದ ಕೈಬಿಡಲಾಗಿದೆ.

  ಇಂಗ್ಲೆಂಡ್ ತಂಡದಲ್ಲಿ ಆಲ್‌ರೌಂಡರ್​ಗಳಾಗಿ ಕ್ರಿಸ್ ವೋಕ್ಸ್ ಹಾಗೂ ಮೊಯೀನ್ ಅಲಿ ಸ್ಥಾನ ಪಡೆದಿದ್ದು, ವಿಕೆಟ್ ಕೀಪರ್​ ಆಗಿ ಜೋಸ್ ಬಟ್ಲರ್ ಕಣಕ್ಕಿಳಿಯಲಿದ್ದಾರೆ.

  ಫೆಬ್ರವರಿ 5 ರಿಂದ 9 ವರೆಗೆ ಮೊದಲ ಟೆಸ್ಟ್​ ಪಂದ್ಯ ಮತ್ತು ಫೆಬ್ರವರಿ 13 ರಿಂದ 17ರ ವರೆಗೆ ಎರಡನೇ ಟೆಸ್ಟ್ ಪಂದ್ಯಗಳು ನಡೆಯಲಿವೆ. 3 ಮತ್ತು 4ನೇ ಪಂದ್ಯಗಳು ಅಹಮದಾಬಾದ್‌ನಲ್ಲಿ ಫೆಬ್ರವರಿ 24ರಿಂದ 28 ಮತ್ತು ಮಾರ್ಚ್ 4ರಿಂದ 8ರವರೆಗೆ ನಡೆಯಲಿವೆ. ಬಳಿಕ ಅಹಮದಾಬಾದ್‌ನಲ್ಲೇ 5 ಟಿ-20 ಪಂದ್ಯಗಳ (ಮಾ. 12, 14, 16, 18, 20) ಸರಣಿ ಮತ್ತು ಪುಣೆಯಲ್ಲಿ 3 ಏಕದಿನ ಪಂದ್ಯಗಳ (ಮಾ. 23, 26, 28) ಸರಣಿ ನಡೆಯಲಿದೆ.

  ಭಾರತದ ವಿರುದ್ಧದ ಮೊದಲ ಎರಡು ಟೆಸ್ಟ್​ಗಳಿಗೆ ಇಂಗ್ಲೆಂಡ್ ತಂಡ ಹೀಗಿದೆ:
  ಇಂಗ್ಲೆಂಡ್ ಟೀಮ್: ಜೋ ರೂಟ್ (ನಾಯಕ), ಜೋಫ್ರಾ ಆರ್ಚರ್, ಮೊಯೀನ್ ಅಲಿ, ಜೇಮ್ಸ್ ಆಂಡರ್ಸನ್, ಡೊಮ್ ಬೆಸ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜೋಸ್ ಬಟ್ಲರ್, ಝಕ್ ಕ್ವ್ರಾಲೆ, ಬೆನ್ ಫೋಕ್ಸ್, ಡಾನ್ ಲಾರೆನ್ಸ್, ಜ್ಯಾಕ್ ಲೀಚ್, ಡೊಮ್ ಸಿಬ್ಲಿ, ಬೆನ್ ಸ್ಟೋಕ್ಸ್, ಒಲಿ ಸ್ಟೋನ್, ಕ್ರಿಸ್ ವೋಕ್ಸ್.

  ಮೀಸಲು ಆಟಗಾರರು: ಜೇಮ್ಸ್ ಬ್ರೇಸಿ, ಮೇಸನ್ ಕ್ರೇನ್, ಸಾಕಿಬ್ ಮಹಮೂದ್, ಮ್ಯಾಥ್ಯೂ ಪಾರ್ಕಿನ್ಸನ್, ಒಲ್ಲಿ ರಾಬಿನ್ಸನ್, ಅಮರ್ ವಿರ್ಡಿ.

  ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್​​ಗಳಿಗೆ ಆಯ್ಕೆಯಾದ ಟೀಮ್ ಇಂಡಿಯಾ ಹೀಗಿದೆ:
  ಆರಂಭಿಕರು: ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ಮಯಾಂಕ್ ಅಗರ್ವಾಲ್
  ಮಧ್ಯಮ ಕ್ರಮಾಂಕ: ವಿರಾಟ್​ ಕೊಹ್ಲಿ (ನಾಯಕ), ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್, ವೃದ್ಧಿಮಾನ್ ಸಹಾ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ (ಫಿಟ್​ನೆಸ್ ಬಳಿಕ ಆಯ್ಕೆ)
  ವೇಗದ ಬೌಲರ್​ಗಳು: ಜಸ್​ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.
  ಸ್ಪಿನ್ನರ್ ಗಳು: ಆರ್.ಅಶ್ವಿನ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್
  Published by:zahir
  First published: