ವಿಶ್ವಕಪ್​ ಹೀರೋ ಬೆನ್​ ಸ್ಟೋಕ್ಸ್​ರಿಂದ ಕತ್ತು ಹಿಸುಕಿ ಹೆಂಡತಿಯನ್ನು ಸಾಯಿಸಲು ಯತ್ನ; ವಿಚಾರ ಬೆಳಕಿಗೆ ತಂದ ಮಡದಿ

ಸ್ಟೋಕ್ಸ್​ ಹಾಗೂ ಅವರ ಹೆಂಡತಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆದರೆ, ವೈರಲ್ ಆಗುತ್ತಿರುವ ಫೋಟೋ ನೋಡಿ ಇವರಿಬ್ಬರ ನಡುವೆ ದೊಡ್ಡ ಮಟ್ಟದ ಜಗಳವಾದಂತಿದೆ ಎಂದು ಹೇಳಲಾಗುತ್ತಿದೆ.

Vinay Bhat | news18-kannada
Updated:October 9, 2019, 12:34 PM IST
ವಿಶ್ವಕಪ್​ ಹೀರೋ ಬೆನ್​ ಸ್ಟೋಕ್ಸ್​ರಿಂದ ಕತ್ತು ಹಿಸುಕಿ ಹೆಂಡತಿಯನ್ನು ಸಾಯಿಸಲು ಯತ್ನ; ವಿಚಾರ ಬೆಳಕಿಗೆ ತಂದ ಮಡದಿ
ತನ್ನ ಹೆಂಡತಿ ಜೊತೆ ಬೆನ್ ಸ್ಟೋಕ್ಸ್​
  • Share this:

ಬೆಂಗಳೂರು (ಅ. 09): ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಆಟಗಾರ ಬೆನ್ ಸ್ಟೋಕ್ಸ್ತನ್ನ ಹೆಂಡತಿಯನ್ನು ಕತ್ತು ಹಿಸುಕಿ ಸಾಹಿಸಲು ಪ್ರಯತ್ನ ಪಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ಸ್ಟೋಕ್ಸ್ ತನ್ನ ಪತ್ನಿ ಕ್ಲೇರ್ ಕುತ್ತಿಗೆ ಮೇಲೆ ಕೈ ಮಿಲಾಯಿಸುತ್ತಿರುವ ಫೋಟೋ ಕೂಡ ವೈರಲ್ ಆಗುತ್ತಿದೆ.


ಕಳೆದ ವಾರ ಕ್ರಿಕೆಟ್ ಸಂಬಧಿತ ಅವಾರ್ಡ್ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಸ್ಟೋಕ್ಸ್ತನ್ನ ಹೆಂಡತಿಗೆ ಕಪಾಳಮೋಕ್ಷ ಕೂಡ ಮಾಡಿದ್ದಾರೆ ಎಂದು ವರದಿಯಾಗಿದೆ.Ben Stokes’ wife rubbishes reports of being choked by all-rounder
ಪತ್ನಿ ಮೇಲೆ ಕೈ ಮಿಲಾಯಿಸುತ್ತಿವ ಸ್ಟೋಕ್ಸ್​


ಹೊಸ ತಂಡ ಸೇರಿಕೊಂಡ ಆರ್​ಸಿಬಿ ಸ್ಟಾರ್ ವೇಗಿ ಡೇಲ್ ಸ್ಟೇನ್!

ಆದರೆ, ವಿಚಾರವನ್ನು ಅಲ್ಲಗೆಳೆದಿರುವ ಸ್ಟೋಕ್ಸ್ಪತ್ನಿ ಕ್ಲೇರ್, "ಇದು ಊಹಿಸಲಾಗದ ಘಟನೆ. ಇಂತಹ ಯಾವುದೇ ವಿಚಾರ ನಮ್ಮಿಬ್ಬರ ನಡುವೆ ನಡೆದಿಲ್ಲ. ಜನರು ನಮ್ಮ ಮೇಲೆ ಬಣ್ಣಬಳಿಯುವ ಪ್ರಯತ್ನ ನಡೆಸುತ್ತಿದ್ದಾರೆ. ನಾನು ಮತ್ತು ಸ್ಟೋಕ್ಸ್ಹೊಡೆದಾಡುತ್ತೇವೆ, ಅದು ಕೇವಲ ಪ್ರೀತಿಯಿಂದಷ್ಟೆ. ಕೆಲವರು ಇದನ್ನ ಬೇರೆ ಆಯಾಮದತ್ತ ಕೊಂಡೊಯ್ಯುತ್ತಿದ್ದಾರೆ" ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.


 


ಅಲ್ಲದೆ ಇಂಗ್ಲೆಷ್ ಪತ್ರಿಕೆಯೊಂದಕ್ಕೆ ಬಗ್ಗೆ ಮಾತನಾಡಿರುವ ಸ್ಟೋಕ್ಸ್​, "ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವುದು ಸತ್ಯಕ್ಕೆ ದೂರವಾದ ವಿಚಾರ. ಸಮಾಜದಲ್ಲಿ ನಮ್ಮ ಮಾನ ಹರಾಜು ಮಾಡಲು ಪ್ರಯತ್ನಿಸುತ್ತಿದ್ದಾರೆ. ನನ್ನ ಹೆಂಡತಿ ಕ್ಲೆರ್ ಇಂತಹ ವಿಚಾರಕ್ಕೆ ಹೆದರುವವಳಲ್ಲ. ನಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪವಿಲ್ಲ. ಉತ್ತಮ ಸಂಬಂಧ ಹೊಂದಿದ್ದೇವೆ. ಅವಳನ್ನು ಪಡೆದಿರುವ ನಾನೇ ಪುಣ್ಯವಂತ" ಎಂದು ಸ್ಟೋಕ್ಸ್ ಹೇಳಿದ್ದಾರೆ.
Ben Stokes’ wife rubbishes reports of being choked by all-rounder
ಹೆಂಡತಿ ಜೊತೆ ಬೆನ್ ಸ್ಟೋಕ್ಸ್​


IND vs SA: ಭಾರತಕ್ಕೆ ಕಠಿಣವಾಗಲಿದೆಯ ಎರಡನೇ ಟೆಸ್ಟ್​; ಈ ಒಬ್ಬ ಆಟಗಾರನ ಮೇಲೆ ಎಲ್ಲರ ಕಣ್ಣು!

ಸದ್ಯ ಸ್ಟೋಕ್ಸ್ಹಾಗೂ ಅವರ ಹೆಂಡತಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆದರೆ, ವೈರಲ್ ಆಗುತ್ತಿರುವ ಫೋಟೋ ನೋಡಿ ಇವರಿಬ್ಬರ ನಡುವೆ ದೊಡ್ಡ ಮಟ್ಟದ ಜಗಳವಾದಂತಿದೆ ಎಂದು ಹೇಳಲಾಗುತ್ತಿದೆ.
Ben Stokes’ wife rubbishes reports of being choked by all-rounderBen Stokes’ wife rubbishes reports of being choked by all-rounder
ಹೆಂಡತಿ ಜೊತೆ ಬೆನ್ ಸ್ಟೋಕ್ಸ್​


First published: October 9, 2019, 12:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading