ವಿಶ್ವಕಪ್​ ಸೆಮಿ ಫೈನಲ್​ಗೂ ಮೊದಲೇ ವಿರಾಟ್​ ಕೊಹ್ಲಿಗೆ ಐಸಿಸಿ ನಿಷೇಧ?; ಸಂಕಷ್ಟದಲ್ಲಿ ಭಾರತ ತಂಡದ ನಾಯಕ

ICC Cricket World Cup: ಅಂಪೈರ್​ಗಳ ಜೊತೆ ಕೊಹ್ಲಿ ಮಿತಿ ಮೀರಿದ ಮನವಿ ಮಾಡಿದ್ದರು. ಪರಿಣಾಮ ಕೊಹ್ಲಿ ಪಂದ್ಯ ಶುಲ್ಕದ ಶೇ. 25 ಹಣವನ್ನು ದಂಡವಾಗಿ ಕಟ್ಟಬೇಕಾಗಿ ಬಂದಿತ್ತು. 2018ರ ಅಫ್ಘಾನಿಸ್ತಾನದ ವಿರುದ್ಧದ ಟೆಸ್ಟ್​ ಮ್ಯಾಚ್​ನಲ್ಲೂ ಕೊಹ್ಲಿ ಇದೇ ರೀತಿ ಮಾಡಿದ್ದರು.

Rajesh Duggumane | news18
Updated:July 4, 2019, 4:06 PM IST
ವಿಶ್ವಕಪ್​ ಸೆಮಿ ಫೈನಲ್​ಗೂ ಮೊದಲೇ ವಿರಾಟ್​ ಕೊಹ್ಲಿಗೆ ಐಸಿಸಿ ನಿಷೇಧ?; ಸಂಕಷ್ಟದಲ್ಲಿ ಭಾರತ ತಂಡದ ನಾಯಕ
ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಆಕ್ಟಿವ್ ಇರುವ ಕಿಂಗ್ ಕೊಹ್ಲಿ, ತಮ್ಮ ಇನ್ಸ್ಟಾಗ್ರಾಂನಲ್ಲಿ 50 ಮಿಲಿಯನ್ ಹಿಂಬಾಲಕರನ್ನು ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
  • News18
  • Last Updated: July 4, 2019, 4:06 PM IST
  • Share this:
ವಿಶ್ವಕಪ್ 2019ರ ಟೂರ್ನಿಯಲ್ಲಿ ಭಾರತ ಕ್ರಿಕೆಟ್​ ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ವಿರಾಟ್​ ಕೊಹ್ಲಿ ಮೇಲೆ ಐಸಿಸಿ ನಿಷೇಧ ಹೇರಲಿದೆಯೇ? ಹೀಗೊಂದು ಪ್ರಶ್ನೆ ಈಗ ಎಲ್ಲರನ್ನೂ ಕಾಡಿದೆ. ಬಾಂಗ್ಲಾ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ ಮಾಡಿಕೊಂಡ ಎಡವಟ್ಟು ಇದಕ್ಕೆ ಕಾರಣ. ಅಷ್ಟಕ್ಕೂ ಕೊಹ್ಲಿ ಮಾಡಿದ ತಪ್ಪೇನು? ಅವರ ಮೇಲೆ ಐಸಿಸಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದಕ್ಕೆ ಈ ಸ್ಟೋರಿಯಲ್ಲಿದೆ ಉತ್ತರ.

ಬಾಂಗ್ಲಾ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ ತಪ್ಪೊಂದನ್ನು ಎಸಗಿದ್ದರು. ಮೊಹ್ಮದ್​ ಶಮಿ 12ನೇ ಓವರ್​ ಎಸೆಯುವಾಗ ಸೌಮ್ಯ ಸರ್ಕಾರ್​ ಬ್ಯಾಟಿಂಗ್​ ನಿಂತಿದ್ದರು. ಈ ವೇಳೆ ಶಮಿ ಎಸೆದ ಚೆಂಡು ಸೌಮ್ಯ ಸರ್ಕಾರ್​ ಪ್ಯಾಡ್​ಗೆ ತಾಗಿತ್ತು. ಆದರೆ ಅಂಪೈರ್​ ಮಾರಿಯಸ್ ಎರಾಸ್ಮಸ್​ ನಾಟ್​ ಔಟ್​ ಎಂದು ನೀಡಿದ್ದರು. ಈ ವೇಳೆ ಕೊಹ್ಲಿ ಡಿಆರ್​ಎಸ್​ ರಿವ್ಯೂವ್​ ತೆಗೆದುಕೊಂಡಿದ್ದರು. ಈ ವೇಳೆಯೂ ನಾಟ್​ ಔಟ್​ ಎಂಬ ತೀರ್ಪು ಬಂದಿತ್ತು. ಆದರೆ, ಪ್ಯಾಡ್​ಗೆ ಬಾಲ್​ ಮೊದಲು ತಾಗಿತ್ತು ಎಂದು ಭಾವಿಸಿದ್ದ ಕೊಹ್ಲಿ ಅಂಪೈರ್​ಗಳ ಜೊತೆ ವಾಗ್ವಾದ ನಡೆಸಿದ್ದರು. ಇದು ಐಸಿಸಿ ನಿಯಮದ ಅನ್ವಯ ಶಿಕ್ಷಾರ್ಹ ಅಪರಾಧವಾಗಿದ್ದು ಇದರಿಂದ ಅವರಿಗೆ ನಿಷೇಧ ಭಿತಿ ಕಾಡುತ್ತಿದೆ.

ಕೊಹ್ಲಿ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲೂ ಇದೇ ರೀತಿ ಮಾಡಿದ್ದರು. ಅಂಪೈರ್​ಗಳ ಜೊತೆ ಕೊಹ್ಲಿ ಮಿತಿ ಮೀರಿದ ಮನವಿ ಮಾಡಿದ್ದರು. ಪರಿಣಾಮ ಕೊಹ್ಲಿ ಪಂದ್ಯ ಶುಲ್ಕದ ಶೇ. 25 ಹಣವನ್ನು ದಂಡವಾಗಿ ಕಟ್ಟಬೇಕಾಗಿ ಬಂದಿತ್ತು. 2018ರ ಅಫ್ಘಾನಿಸ್ತಾನದ ವಿರುದ್ಧದ ಟೆಸ್ಟ್​ ಮ್ಯಾಚ್​ನಲ್ಲೂ ಕೊಹ್ಲಿ ಇದೇ ರೀತಿ ಮಾಡಿದ್ದರು.

ಇದನ್ನೂ ಓದಿ: 2011ರ ವಿಶ್ವಕಪ್​ ಸಚಿನ್​ಗಾಗಿ, 2019 ಎಂಎಸ್​ಡಿಗಾಗಿ!; ಗ್ರೇಟ್​ ಫಿನಿಶರ್ ವಿದಾಯಕ್ಕೆ​ ಕೊಹ್ಲಿಯಿಂದ ಮಾಸ್ಟರ್​ ಪ್ಲಾನ್?

ಎರಡು ವರ್ಷಗಳಲ್ಲಿ ಒಂದು ಆಟಗಾರನ ಮೇಲೆ ಈ ರೀತಿಯ ನಾಲ್ಕು ಪ್ರಕರಣಗಳು ದಾಖಲಾದರೆ ಅವರನ್ನು ಬ್ಯಾನ್​ ಮಾಡಲಾಗುತ್ತದೆ. ವಿರಾಟ್ ಕೊಹ್ಲಿ ಈಗಾಗಲೇ ಮೂರು ಡಿ ಮೆರಿಟ್​ ಪಾಯಿಂಟ್​ ಪಡೆದಿದ್ದಾರೆ. ಹಾಗಾಗಿ ಶ್ರೀಲಂಕಾ ವಿರುದ್ಧವೂ ಕೊಹ್ಲಿ ಇದೇ ರೀತಿ ನಡೆದುಕೊಂಡರೆ ಅವರಿಗೆ ನಿಷೇಧ ಹೇರಲಾಗುತ್ತದೆ ಎನ್ನಲಾಗುತ್ತಿದೆ.

First published: July 4, 2019, 3:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading