HOME » NEWS » Sports » CRICKET BEFORE SACHIN TENDULKAR 5 INDIAN CRICKETERS INDUCTED IN ICC CRICKET HALL OF FAME LG

ICC Cricket Hall of Fame: ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ಗೆ​​ ಐಸಿಸಿ ಹಾಲ್ ಆಫ್ ಫೇಮ್’ ಗೌರವ

Sachin Tendulkar: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಅಲೇನ್​ ಡೊನಾಲ್ಡ್​, ಎರಡು ಬಾರಿ ವಿಶ್ವಕಪ್​ ಗೆದ್ದ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್​ಗಾರ್ತಿ  ಕ್ಯಾತ್ರಿನ್​ ಫಿಟ್ಜ್​ಪ್ಯಾಟ್ರಿಕ್​ ಕೂಡ ಈ ಕ್ರಿಕೆಟ್​ ಹಾಲ್​ ಆಫ್​ ಫೇಮ್​ ಗೆ ಸೇರಿದ್ಧಾರೆ.

Latha CG | news18
Updated:July 19, 2019, 2:11 PM IST
ICC Cricket Hall of Fame: ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ಗೆ​​ ಐಸಿಸಿ ಹಾಲ್ ಆಫ್ ಫೇಮ್’ ಗೌರವ
ಸಚಿನ್​ ತೆಂಡೂಲ್ಕರ್​​
  • News18
  • Last Updated: July 19, 2019, 2:11 PM IST
  • Share this:
ಲಂಡನ್​​,(ಜು.19): ಕ್ರಿಕೆಟ್​  ದಿಗ್ಗಜ, ಲಿಟ್ಲ್ ಮಾಸ್ಟರ್​​ ಸಚಿನ್​ ತೆಂಡೂಲ್ಕರ್​ ಐಸಿಸಿ ಹಾಲ್​ ಆಫ್​ ಫೇಮ್​ ಗೌರವಕ್ಕೆ ಭಾಜನರಾಗಿದ್ದಾರೆ. ಗುರುವಾರ ಲಂಡನ್​ನಲ್ಲಿ ನಡೆದ ಸಮಾರಂಭದಲ್ಲಿ ಸಚಿನ್​ ತೆಂಡೂಲ್ಕರ್​  ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ‘ಕ್ರಿಕೆಟ್ ಹಾಲ್ ಆಫ್ ಫೇಮ್’ಗೆ ಸೇರ್ಪಡೆ ಮಾಡಿತು.

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಅಲೇನ್​ ಡೊನಾಲ್ಡ್​, ಎರಡು ಬಾರಿ ವಿಶ್ವಕಪ್​ ಗೆದ್ದ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್​ಗಾರ್ತಿ  ಕ್ಯಾತ್ರಿನ್​ ಫಿಟ್ಜ್​ಪ್ಯಾಟ್ರಿಕ್​ ಕೂಡ ಈ ಕ್ರಿಕೆಟ್​ ಹಾಲ್​ ಆಫ್​ ಫೇಮ್​ ಗೆ ಸೇರಿದ್ಧಾರೆ. ಈ ಗೌರವಕ್ಕೆ ಪಾತ್ರರಾದ ಸಚಿನ್​ ತೆಂಡೂಲ್ಕರ್ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಇದು ನನಗೆ ದೊರೆತ ಅತಿ ದೊಡ್ಡ ಗೌರವ ಎಂದಿದ್ದಾರೆ. "ನನ್ನ ಪೋಷಕರು, ಸಹೋದರ ಅಜಿತ್​, ಪತ್ನಿ ಅಂಜಲಿ ಇವರೆಲ್ಲರೂ ನನ್ನ ಸಾಧನೆಗೆ ಸ್ಫೂರ್ತಿ. ಅಲ್ಲದೆ, ಆರಂಭದ ದಿನಗಳಲ್ಲಿ ನನ್ನ ಮೆಂಟರ್​ ಆಗಿ ರಾಮಕಾಂತ್​ ಅಚ್ರೇಕರ್ ಸಿಕ್ಕಿದ್ದು ನನ್ನ ಅದೃಷ್ಟ," ಎಂದು ಅವರನ್ನು ಸ್ಮರಿಸಿದರು.

ಬಡತನದಲ್ಲೂ ದೇಶಕ್ಕಾಗಿ 4 ಚಿನ್ನದ ಪದಕ ತಂದುಕೊಟ್ಟ ಹಿಮಾದಾಸ್​

ಕ್ರಿಕೆಟ್ ಹಾಲ್ ಆಫ್ ಫೇಮ್ ಗೌರವ ಸ್ವೀಕರಿಸುತ್ತಿರುವ ಭಾರತದ ಆರನೇ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ಸಚಿನ್​​ ತೆಂಡೂಲ್ಕರ್​ ಪಾತ್ರರಾಗಿದ್ದಾರೆ.

1989: Debut together 2019: Commentary together Sachin Tendulkar share his old photo in Instagram
ಸಚಿನ್ ತೆಂಡೂಲ್ಕರ್


ಭಿಷಣ್​ ಸಿಂಗ್​ ಬೇಡಿ(2009), ಕಪಿಲ್​ ದೇವ್​(2009), ಸುನಿಲ್​ ಗವಾಸ್ಕರ್​(2009), ಅನಿಲ್​ ಕುಂಬ್ಳೆ(2015), ರಾಹುಲ್​ ದ್ರಾವಿಡ್​(2018) ಈವರೆಗೆ ಕ್ರಿಕೆಟ್ ಹಾಲ್ ಆಫ್ ಫೇಮ್ ಸೇರಿದ ಭಾರತೀಯ ಕ್ರಿಕೆಟಿಗರಾಗಿದ್ಧಾರೆ.
  200 ಟೆಸ್ಟ್ ಪಂದ್ಯಗಳಾಡಿರುವ ಭಾರತದ ಮಾಜಿ ಬ್ಯಾಟ್ಸ್‌ಮನ್‌ ಸಚಿನ್‌ ತೆಂಡೂಲ್ಕರ್‌, ಟೆಸ್ಟ್ ವಿಭಾಗದಲ್ಲಿ ಅತಿ ಹೆಚ್ಚು ರನ್‌ ಹಾಗೂ ಅತಿ ಹೆಚ್ಚು ಶತಕ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಮಾಡಿದ್ದಾರೆ.


First published: July 19, 2019, 12:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories