Michael Clarke: ಕೊಹ್ಲಿ ಇಲ್ಲದೆ ಆಸ್ಟ್ರೇಲಿಯಾ ವಿರುದ್ಧ ಭಾರತ ಗೆದ್ದರೆ ಒಂದು ವರ್ಷ ಸಂಭ್ರಮಿಸಲಿ..!
ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ಅವರ ಸ್ಥಾನವನ್ನು ತುಂಬುವವರು ಯಾರು? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಕೆಎಲ್ ರಾಹುಲ್ ಪ್ರತಿಭಾನ್ವಿತ ಬ್ಯಾಟ್ಸ್ಮನ್ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
news18-kannada Updated:November 30, 2020, 7:35 PM IST

Team India
- News18 Kannada
- Last Updated: November 30, 2020, 7:35 PM IST
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಭಾರತ ಒಂದು ಪಂದ್ಯ ಬಾಕಿ ಇರುವಾಗಲೇ 0-2 ಅಂತರದಿಂದ ಸೋತಿದೆ. ಮೂರನೇ ಏಕದಿನ ಪಂದ್ಯ ಬುಧವಾರ ನಡೆಯಲಿದ್ದು, ಆ ಬಳಿಕ ಟಿ20 ಸರಣಿ ಆರಂಭವಾಗಲಿದೆ. ಇದಾದ ಬಳಿಕ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಶುರುವಾಗಲಿದೆ. ಡಿಸೆಂಬರ್ 17 ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತವರಿಗೆ ಹಿಂತಿರುಗಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿ ಕೊನೆಯ ಮೂರು ಟೆಸ್ಟ್ಗಳಿಗೆ ಅಲಭ್ಯರಾಗಲಿದ್ದಾರೆ.
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ಆಸ್ಟ್ರೇಲಿಯಾವನ್ನು ಮಣಿಸಲಿದೆಯಾ ಎಂಬ ಚರ್ಚೆಗಳು ಶುರುವಾಗಿದೆ. ಈ ಚರ್ಚೆಗಳ ಬೆನ್ನಲ್ಲೇ ಒಂದು ವೇಳೆ ಟೀಮ್ ಇಂಡಿಯಾ ಕೊಹ್ಲಿ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದರೆ ವರ್ಷವಿಡೀ ಸಂಭ್ರಮಿಸಲಿ ಎಂದು ಆಸೀಸ್ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಸವಾಲೆ ಎಸೆದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಕ್ಲಾರ್ಕ್, ಟೀಮ್ ಇಂಡಿಯಾದಲ್ಲಿ ಕೊಹ್ಲಿ ಅವರ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಅವರ ಅನುಪಸ್ಥಿತಿಯಲ್ಲಿ ಭಾರತ ಗೆದ್ದರೆ ನೀವು ಅದನ್ನು ಒಂದು ವರ್ಷ ಸಂಭ್ರಮಿಸಬಹುದು. ಏಕೆಂದರೆ ಅದು ನಂಬಲಸಾಧ್ಯವಾದ ಗೆಲುವು ಆಗಿರಲಿದೆ ಎಂದಿದ್ದಾರೆ.
ನಾವು ವಿರಾಟ್ ಕೊಹ್ಲಿ ಅವರನ್ನು ಗಣನೆಗೆ ತೆಗೆದುಕೊಳ್ಳುವ ಎರಡು ವಿಷಯಗಳತ್ತ ಗಮನ ಹರಿಸಬೇಕು. ಮೊದಲಿಗೆ ಅವರು ನಾಯಕ, ಅದರೊಂದಿಗೆ ಅವರ ಬ್ಯಾಟಿಂಗ್. ಅಂದರೆ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ಅವರ ಸ್ಥಾನವನ್ನು ತುಂಬುವವರು ಯಾರು? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಕೆಎಲ್ ರಾಹುಲ್ ಪ್ರತಿಭಾನ್ವಿತ ಬ್ಯಾಟ್ಸ್ಮನ್ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅವರು ಆಸ್ಟ್ರೇಲಿಯಾ ಪಿಚ್ನಲ್ಲಿ ಅನುಭವ ಕೂಡ ಹೊಂದಿದ್ದಾರೆ. ಕೆಎಲ್ ರಾಹುಲ್ ಅವರು ಉತ್ತಮವಾಗಿ ಆಡಬಹುದು. ಆದರೆ ಯಾರಿಂದಲೂ ಕೊಹ್ಲಿ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದು ಕ್ಲಾರ್ಕ್ ತಿಳಿಸಿದರು.
ಇನ್ನು ಕೊಹ್ಲಿ ಅಭಾವದಲ್ಲಿ ಟೆಸ್ಟ್ ತಂಡವನ್ನು ಉಪನಾಯಕ ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ಅವರು ನನಗೆ ತುಂಬಾ ಇಷ್ಟದ ಆಟಗಾರ ಎಂದಿರುವ ಮೈಕಲ್ ಕ್ಲಾರ್ಕ್, ಆತನ ನಾಯಕತ್ವ ಕೂಡ ಉತ್ತಮವಾಗಿದೆ. ಬ್ಯಾಟಿಂಗ್ ತಂತ್ರಗಾರಿಕೆಯು ಉತ್ತಮ ಮಟ್ಟದಲ್ಲಿದೆ. ಇದು ಅವರಿಗೆ ಸಿಕ್ಕ ಅವಕಾಶ. ಇದನ್ನು ಇತಿಹಾಸ ಸೃಷ್ಟಿಸಲು ಬಳಸಿಕೊಳ್ಳಬೇಕೆಂದು ಕ್ಲಾರ್ಕ್ ಹೇಳಿದರು.
ಹಾಗೆಯೇ ಆಸ್ಟ್ರೇಲಿಯಾ ವಿರುದ್ಧ ಭಾರತ ಗೆದ್ದರೆ ಅದು ನಂಬಲಸಾಧ್ಯವಾದ ಗೆಲುವು ಆಗಿರಲಿದೆ. ಏಕೆಂದರೆ ತವರಿನಲ್ಲಿ ಕೊಹ್ಲಿ ಅನುಪಸ್ಥಿತಿಯಲ್ಲಿ ಆಸೀಸ್ ಪಡೆಯನ್ನು ಸೋಲಿಸುವುದು ಸುಲಭವಲ್ಲ. ಒಂದು ವೇಳೆ ಗೆದ್ದರೆ ಒಂದು ವರ್ಷದವರೆಗೆ ಸಂಭ್ರಮಿಸಬಹುದು ಎಂದು ಮೈಕಲ್ ಕ್ಲಾರ್ಕ್ ಹೇಳಿದರು.
ಇದನ್ನೂ ಓದಿ: ನಾನು ಬ್ಯಾಟಿಂಗ್ ವೇಳೆ ರಾಹುಲ್ ಬಳಿ ಕ್ಷಮೆ ಕೇಳಿದ್ದೇನೆ..!
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ಆಸ್ಟ್ರೇಲಿಯಾವನ್ನು ಮಣಿಸಲಿದೆಯಾ ಎಂಬ ಚರ್ಚೆಗಳು ಶುರುವಾಗಿದೆ. ಈ ಚರ್ಚೆಗಳ ಬೆನ್ನಲ್ಲೇ ಒಂದು ವೇಳೆ ಟೀಮ್ ಇಂಡಿಯಾ ಕೊಹ್ಲಿ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದರೆ ವರ್ಷವಿಡೀ ಸಂಭ್ರಮಿಸಲಿ ಎಂದು ಆಸೀಸ್ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಸವಾಲೆ ಎಸೆದಿದ್ದಾರೆ.