ವಿಶ್ವ ಇಲೆವೆನ್ ವಿರುದ್ಧ ಭಾರತದ 5 ಆಟಗಾರರ ಜೊತೆ ಪಾಕ್ ಪ್ಲೇಯರ್ಸ್​​?; ಬಿಸಿಸಿಐ ಹೇಳಿದ್ದೇನು?

ಕೇವಲ ಧೋನಿ ಮಾತ್ರವಲ್ಲದೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್​ಪ್ರೀತ್​​ ಬುಮ್ರಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್ ಮತ್ತು ರವೀಂದ್ರ ಜಡೇಜಾ ಹೆಸರನ್ನು ಏಷ್ಯಾ ಇಲೆವೆನ್ ಪರ ಆಡಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಬಿಸಿಸಿಐ ಬಳಿ ಅನುಮತಿ ಕೋರಿದೆ.

ಭಾರತ vs ಪಾಕಿಸ್ತಾನ ಪಂದ್ಯದ ಫೋಟೋ

ಭಾರತ vs ಪಾಕಿಸ್ತಾನ ಪಂದ್ಯದ ಫೋಟೋ

 • Share this:
  ಬೆಂಗಳೂರು (ಡಿ. 27): ಬಾಂಗ್ಲಾ ಕ್ರಿಕೆಟ್ ಮಂಡಳಿ, ಏಷ್ಯಾ ಇಲೆವೆನ್ ಮತ್ತು ವಿಶ್ವ ಇಲೆವೆನ್ ಮಧ್ಯೆ ಟಿ-20 ಪಂದ್ಯವನ್ನು ನಡೆಸುತ್ತಿದೆ. ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬರ್ ರೆಹಮಾನ್ ಜನ್ಮ ಶತಮಾನೋತ್ಸವದ ಕಾರ್ಯಕ್ರಮದಡಿ ಈ ಪಂದ್ಯವನ್ನು ಆಯೋಜಿಸುತ್ತಿದೆ.

  ಮುಂದಿನ ವರ್ಷ ಮಾರ್ಚ್ 18 ಮತ್ತು 21ರಂದು ಐಸಿಸಿ ಮಾನ್ಯತೆ ನೀಡಿರುವ ವಿಶ್ವ ಇಲೆವೆನ್ ವಿರುದ್ಧ ಸೆಣೆಸಾಡಲು ಏಷ್ಯಾ ಇಲೆವೆನ್ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಭಾರತದ 7 ಆಟಗಾರರನ್ನು ನೀಡಲು ಬಾಂಗ್ಲಾ ಕ್ರಿಕೆಟ್ ಬೋರ್ಡ್ ಈ ಹಿಂದೆ ಬಿಸಿಸಿಐಗೆ ಮನವಿ ಮಾಡಿತ್ತು.

  ಸದ್ಯ ಈ ವಿಚಾರವಾಗಿ ಮಾತನಾಡಿರುವ ಬಿಸಿಸಿಐ ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್​, ಏಷ್ಯಾ ಇಲೆವೆನ್​ನಲ್ಲಿ ಭಾಗವಹಿಸುವ ಭಾರತದ ಐದು ಆಟಗಾರರನ್ನು ಅಧ್ಯಕ್ಷ ಸೌರವ್ ಗಂಗೂಲಿ ಸದ್ಯದಲ್ಲಿ ಹೆಸರಿಸಲಿದ್ದಾರೆ ಎಂದು ಹೇಳಿದ್ದಾರೆ.

  ತನ್ನದೇ ತಂಡದ ಹಿಂದೂ ಆಟಗಾರನ ಜೊತೆ ಪಾಕ್ ಪ್ಲೇಯರ್​​ಗಳ ಅನುಚಿತ ವರ್ತನೆ; ಅಚ್ಚರಿಯ ಮಾಹಿತಿ ಬಹಿರಂಗ

  ಇನ್ನು ಈ ಪಂದ್ಯಗಳಿಗೆ ಪಾಕಿಸ್ತಾನದ ಆಟಗಾರರಿಗೆ ಅವಕಾಶವಿಲ್ಲ ಎಂದು ಬಿಸಿಸಿಐ ಸ್ಷಷ್ಟನೆ ನೀಡಿದೆ. "ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಬಂಧ ಹದಗೆಟ್ಟಿರುವ ಕಾರಣ ನಮ್ಮ ಆಟಗಾರರು ಪಾಕಿಸ್ತಾನಕ್ಕೆ ಮತ್ತು ಪಾಕಿಸ್ತಾನದ ಆಟಗಾರರು ಭಾರತಕ್ಕೆ ಆಗಮಿಸುವುದು ಅಸಾಧ್ಯವಾಗಿದೆ" ಎಂದು ತಿಳಿಸಿದ್ದಾರೆ.

  ಜೊತೆಗೆ "ಏಷ್ಯಾ ಇಲೆವೆನ್‌ ಯಾವುದೇ ಪಾಕಿಸ್ತಾನ ಆಟಗಾರನನ್ನು ಹೊಂದಿರುವುದಿಲ್ಲ. ಹಾಗಾಗಿ ಉಭಯ ದೇಶಗಳ ಆಟಗಾರರು ಜೊತೆಯಾಗಿ ಆಡುತ್ತಿದೆಯೇ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ" ಎಂದು ಜಾರ್ಜ್​ ಹೇಳಿದ್ದಾರೆ.

  ಕೇವಲ ಧೋನಿ ಮಾತ್ರವಲ್ಲದೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್​ಪ್ರೀತ್​​ ಬುಮ್ರಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್ ಮತ್ತು ರವೀಂದ್ರ ಜಡೇಜಾ ಹೆಸರನ್ನು ಏಷ್ಯಾ ಇಲೆವೆನ್ ಪರ ಆಡಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಬಿಸಿಸಿಐ ಬಳಿ ಅನುಮತಿ ಕೋರಿದೆ.

  IPL 2020: ಪಂಜಾಬ್​ ತಂಡಕ್ಕೆ ರಾಹುಲ್ ನಾಯಕ: ಕನ್ನಡಿಗನ ಆಯ್ಕೆ ಹಿಂದಿದ್ದಾರೆ ಮತ್ತೊಬ್ಬರು ಕನ್ನಡಿಗ

  ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಬಂಧ ಈಗ ಮತ್ತಷ್ಟು ಹದಗೆಟ್ಟಿದೆ. ಇತ್ತೀಚೆಗಷ್ಟೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಇಶಾನ್ ಮನಿ, "ಪಾಕಿಸ್ತಾನಕ್ಕಿಂತಲೂ ಭಾರತದಲ್ಲೇ ಭದ್ರತೆ ಸಮಸ್ಯೆ ಹೆಚ್ಚಿದೆ ಎಂದು ಹೇಳಿದ್ದರು. ಪಾಕಿಸ್ತಾನ ಸೇಫ್ ಎಂಬುವುದನ್ನು ನಾವು ಈಗಾಗಲೇ ಸಾಬೀತು ಮಾಡಿದ್ದೇವೆ. ಹಾಗಾಗಿ ಯಾರೇ ಬರಲು ಹಿಂದೇಟು ಹಾಕಿದ್ದಲ್ಲಿ ಪಾಕಿಸ್ತಾನ ಸುರಕ್ಷಿತವಲ್ಲ ಎಂಬುದನ್ನು ಅವರೇ ತೋರಿಸಲಿ" ಎಂಬ ಹೇಳಿಕೆ ನೀಡಿದ್ದರು.

  Published by:Vinay Bhat
  First published: