ಕ್ರಿಕೆಟ್​ನಲ್ಲಿ ಸುಳ್ಳು ವಯಸ್ಸು, ದಾಖಲೆ ವಂಚನೆಗೆ ಕಠಿಣ ಕ್ರಮ; ಬಿಸಿಸಿಐ ನೂತನ ನಿಯಮ ಇಲ್ಲಿದೆ

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್‌ಸಿಎ)ಯ ಮುಖ್ಯಸ್ಥ ರಾಹುಲ್ ದ್ರಾವಿಡ್ ವಯಸ್ಸಿನ ವಂಚನೆಯ ವಿಚಾರವನ್ನು ಕಟ್ಟುನಿಟ್ಟಾಗಿ ನಿಭಾಯಿಸಲು ಒತ್ತು ನೀಡಿದ್ದಾರೆ.

news18-kannada
Updated:August 4, 2020, 9:11 AM IST
ಕ್ರಿಕೆಟ್​ನಲ್ಲಿ ಸುಳ್ಳು ವಯಸ್ಸು, ದಾಖಲೆ ವಂಚನೆಗೆ ಕಠಿಣ ಕ್ರಮ; ಬಿಸಿಸಿಐ ನೂತನ ನಿಯಮ ಇಲ್ಲಿದೆ
ಬಿಸಿಸಿಐ
  • Share this:
ನೋಂದಾಯಿತ ಕ್ರಿಕೆಟಿಗರು ಖುದ್ದಾಗಿ ತಾವೇ ವಯಸ್ಸಿನ ವಿಚಾರದಲ್ಲಿ ಸುಳ್ಳು ಹೇಳಿರುವುದನ್ನು ಒಪ್ಪಿಕೊಳ್ಳದೇ ಇದ್ದರೆ ಎರಡು ವರ್ಷಗಳ ನಿಷೇಧದ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಎಚ್ಚರಿಕೆ ನೀಡಿದೆ. ಈ ಮೂಲಕ ವಯಸ್ಸಿನ ವಂಚನೆ ಮಾಡಿ ತಂಡವನ್ನು ಸೇರಿಕೊಳ್ಳುವುದನ್ನು ಬಿಸಿಸಿಐ ಮತ್ತಷ್ಟು ಗಂಭೀರವಾಗಿ ಪರಿಗಣಿಸಿದೆ.

ಇದಕ್ಕಾಗಿ ಮತ್ತಷ್ಟು ಕಠಿಣ ನಿಲುವನ್ನು ತೆಗೆದುಕೊಳ್ಳಲು ಬಿಸಿಸಿಐ ನಿರ್ಧರಿಸಿದ್ದು, ನೈಜ ವಯಸ್ಸು ಪತ್ತೆಹಚ್ಚಲು ವೈಜ್ಞಾನಿಕ ನಿರ್ಧಾರದ ಕ್ರಮಕ್ಕೆ ಮುಂದಾಗಿದೆ, ಮಾತ್ರವಲ್ಲ ಶಿಕ್ಷೆಯ ಪ್ರಮಾಣದಲ್ಲೂ ಹೆಚ್ಚಳ ಮಾಡಿದೆ. 2020-21ರ ಋತುವಿನ ಬಳಿಕ ಬಿಸಿಸಿಐನ ವಯೋಮಾನ ವಿಭಾಗದ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸಲಿರುವ ಎಲ್ಲ ಕ್ರಿಕೆಟಿಗರಿಗೆ ಈ ಮಾನದಂಡ ಅನ್ವಯಿಸುತ್ತದೆ.

ಆತ್ಮಹತ್ಯೆಗೆ ನಿರ್ಧರಿಸಿದ್ದರು ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರು!

ಈ ಯೋಜನೆಯಡಿಯಲ್ಲಿ ಈ ಹಿಂದೆ ನಕಲಿ ಅಥವಾ ತಿರುಚಿದ ದಾಖಲೆಗಳನ್ನು ಸಲ್ಲಿಸುವ ಮೂಲಕ ತಮ್ಮ ಜನ್ಮ ದಿನಾಂಕವನ್ನು ಕುಶಲತೆಯಿಂದ ನಿರ್ವಹಿಸಿದ್ದೇವೆ ಎಂದು ಸ್ವಯಂಪ್ರೇರಣೆಯಿಂದ ಘೋಷಿಸಿಕೊಳ್ಳುವ ಆಟಗಾರರನ್ನು ಅಮಾನತುಗೊಳಿಸಲಾಗುವುದಿಲ್ಲ. ಜೊತೆಗೆ ಅವರು ತಮ್ಮ ನಿಜವಾದ ಜನ್ಮದಿನಾಂಕವನ್ನು ಬಹಿರಂಗಪಡಿಸಿದರೆ ಸೂಕ್ತ ವಯೋಮಾನದ ಪಂದ್ಯಾವಳಿಗಳಲ್ಲಿ ಆಡಲು ಅವಕಾಶ ನೀಡಲಾಗುವುದು ಎಂದು ಬಿಸಿಸಿಐ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಒಂದು ವೇಳೆ ನೊಂದಾಯಿತ ಆಟಗಾರ ನಿಜಾಂಶವನ್ನು ಹೇಳದಿದ್ದರೆ ಹಾಗೂ ಆತನ ದಾಖಲೆಗಳು ನಕಲಿ ಎಂದು ಕಂಡುಬಂದರೆ ಆತನನ್ನು 2 ವರ್ಷಗಳ ಕಾಲ ಬ್ಯಾನ್ ಮಾಡಲಾಗುವುದು. ಮತ್ತು ಎರಡು ವರ್ಷಗಳು ಪೂರ್ಣಗೊಂಡ ಬಳಿಕವೂ ಕೂಡ ಆತನನ್ನು ಬಿಸಿಸಿಐನ ವಯೋ ವರ್ಗದಲ್ಲಿ ಆತನಿಗೆ ಟೂರ್ನಾಮೆಂಟ್ ಆಡಲು ಅನುಮತಿ ನೀಡಲಾಗುವುದಿಲ್ಲ. ಇದರ ಜೊತೆಗೆ ಯಾವುದೇ ಆಟಗಾರ ತನ್ನ ನಿವಾಸಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿದಲ್ಲಿ ಅವರ ಮೇಲೂ ಕೂಡ ಎರಡು ವರ್ಷಗಳ ಕಾಲ ನಿಷೇಧ ವಿಧಿಸಲಾಗುವುದು ಎಂದು ಹೇಳಿದೆ.

VIVO IPL 2020: ಒಬ್ಬೊಬ್ಬ ಆಟಗಾರನಿಗೆ RCB ಈ ಬಾರಿ ನೀಡುತ್ತಿರುವ ಹಣ ಕೇಳಿದ್ರೆ ಶಾಕ್ ಆಗ್ತೀರಾ!

ಬಿಸಿಸಿಐನ ವಯೋವರ್ಗ ಪರಿಶೀಲನೆ ವಿಭಾಗಕ್ಕೆ ಇ-ಮೇಲ್‌ ಕಳುಹಿಸಿರುವ ಮತ್ತು ಹಸ್ತಾಕ್ಷರದೊಂದಿಗೆ ಅರ್ಜಿ ಸಲ್ಲಿಸಿರುವ ಆಟಗಾರರು ತಮ್ಮ ಸರಿಯಾದ ವಯೋವರ್ಗ ಸಾಬೀತು ಪಡಿಸುವ ದಾಖಲೆ ಪ್ರತಿಗಳನ್ನು 2020ರ ಸೆಪ್ಟೆಂಬರ್‌ 15ರ ಒಳಗಾಗಿ ಸಲ್ಲಿಸಬೇಕಿದೆ ಎಂದು ಬಿಸಿಸಿಐ ಅಂತಿಮ ಗಡುವು ನೀಡಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್‌ಸಿಎ)ಯ ಮುಖ್ಯಸ್ಥ ರಾಹುಲ್ ದ್ರಾವಿಡ್ ವಯಸ್ಸಿನ ವಂಚನೆಯ ವಿಚಾರವನ್ನು ಕಟ್ಟುನಿಟ್ಟಾಗಿ ನಿಭಾಯಿಸಲು ಒತ್ತು ನೀಡಿದ್ದಾರೆ.
Published by: Vinay Bhat
First published: August 4, 2020, 9:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading