ಇಂದು ಸಂಜೆ ಟೀಂ ಇಂಡಿಯಾ ನೂತನ ಕೋಚ್ ಹೆಸರು ಪ್ರಕಟ: ಇವರೇ ಆಗಲಿದ್ದಾರಂತೆ ಕೋಚ್!

ಇನ್ನೊಂದು ಅವಧಿಗೆ ಶಾಸ್ತ್ರಿ ಅರವನ್ನೇ ಕೋಚ್​ ಆಗಿ ಮುಂದುವರಿಸುವ ಇರಾದೆ ಬಿಸಿಸಿಐಗೆ ಇದೆ ಎನ್ನಲಾಗಿದ್ದು, ಇದಕ್ಕೆ ಟೀಂ ಇಂಡಿಯಾ ಆಟಗಾರರು ಕೂಡ ಒಪ್ಪಿಗೆ ನೀಡಿದ್ದಾರಂತೆ.

Vinay Bhat | news18
Updated:August 16, 2019, 11:20 AM IST
ಇಂದು ಸಂಜೆ ಟೀಂ ಇಂಡಿಯಾ ನೂತನ ಕೋಚ್ ಹೆಸರು ಪ್ರಕಟ: ಇವರೇ ಆಗಲಿದ್ದಾರಂತೆ ಕೋಚ್!
ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ
  • News18
  • Last Updated: August 16, 2019, 11:20 AM IST
  • Share this:
ಬೆಂಗಳೂರು (. 15): ಟೀಂ ಇಂಡಿಯಾಕ್ಕೆ ನೂತನ ಪ್ರಧಾನ ಕೋಚ್ ಹುಡುಕಾಟದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿದ್ದು, ಕಪೀಲ್ ದೇವ್ ನೇತೃತ್ವದಲ್ಲಿ ಇಂದು ಅಭ್ಯರ್ಥಿಗಳ ಸಂದರ್ಶನ ನಡೆಸಲಿದೆ. ಮುಖ್ಯ ಕೋಚ್ ಹುದ್ದೆಗೆ ಈಗಾಗಲೇ 6 ಜನರ ಹೆಸರನ್ನು ಶಾರ್ಟ್​ಲಿಸ್ಟ್ ಮಾಡಲಾಗಿದೆ. ಇಂದು ಸಂಜೆ 7 ಗಂಟೆಗೆ ಸುದ್ದಿಗೋಷ್ಠಿಯನ್ನು ಏರ್ಪಡಿಸಿದ್ದು ನೂತನ ಕೋಚ್ ಹೆಸರು ಬಹಿರಂಗ ಪಡಿಸಲಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಟೀಂ ಇಂಡಿಯಾದ ಕೋಚ್ ಬದಲಾಗಲಿದ್ದು, ಈ ಹಿಂದೆ ಬರೋಬ್ಬರಿ 2 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದರು.

ನ್ಯೂಜಿಲ್ಯಾಂಡ್​ನ ಮಾಜಿ ಕೋಚ್​​ ಮೈಕ್​ ಹಸ್ಸನ್, ಆಸ್ಟ್ರೇಲಿಯಾದ ಮಾಜಿ ಆಲ್​ರೌಂಡರ್​ ಹಾಗೂ ಶ್ರೀಲಂಕಾ ಕೋಚ್​ ಟಾಮ್​ ಮೊಡಿ, ಆಫ್ಘಾನಿಸ್ತಾನದ ಕೋಚ್​​ ಸಿಮನ್ಸ್​​, ಟೀಂ ಇಂಡಿಯಾ ಮಾಜಿ ಮ್ಯಾನೇಜರ್​ ಲಾಲ್​ಚಂದ್​ ರಜಪೂತ್​, ರಾಬಿನ್​​ ಸಿಂಗ್​​ ಹೆಸರುಗಳು ಪಟ್ಟಿಯಲ್ಲಿವೆ. ಇವರ ಜೊತೆಗೆ ರವಿಶಾಸ್ತ್ರಿ ಕೂಡ ರೇಸ್​​ನಲ್ಲಿದ್ದಾರೆ.

ಭಾರತದ ಮಾಜಿ ಸ್ಫೋಟಕ ಕ್ರಿಕೆಟ್​ ಆಟಗಾರ ಇನ್ನಿಲ್ಲ; ವಿಬಿ ಚಂದ್ರಶೇಖರ್​ ಹೃದಯಾಘಾತದಿಂದ ಸಾವು

ಆದರೆ, ಬಿಸಿಸಿಐ ಮೂಲಗಳ ಪ್ರಕಾರ ಮತ್ತೊಂದು ಅವಧಿಗೆ ಕೋಚ್​ ಆಗಿ ರವಿಶಾಸ್ತ್ರಿ ಅವರೇ ಆಯ್ಕೆಯಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಈ ಹಿಂದೆ ನಾಯಕ ವಿರಾಟ್ ಕೊಹ್ಲಿ, 'ರವಿಶಾಸ್ತ್ರಿ ಅವರೇ ಭಾರತ ತಂಡದ ಕೋಚ್ ಆಗಿ ಮುಂದುವರಿದರೆ ಉತ್ತಮ' ಎಂದು ಹೇಳಿದ್ದರು. ಅಲ್ಲದೆ ಇನ್ನೊಂದು ಅವಧಿಗೆ ಶಾಸ್ತ್ರಿ ಅರವನ್ನೇ ಕೋಚ್​ ಆಗಿ ಮುಂದುವರಿಸುವ ಇರಾದೆ ಬಿಸಿಸಿಐಗೆ ಇದೆ ಎನ್ನಲಾಗಿದ್ದು, ಇದಕ್ಕೆ ಟೀಂ ಇಂಡಿಯಾ ಆಟಗಾರರು ಕೂಡ ಒಪ್ಪಿಗೆ ನೀಡಿದ್ದಾರಂತೆ.

ಕೋಚ್ ರವಿಶಾಸ್ತ್ರಿ ಅವಧಿ ಟೀಂ ಇಂಡಿಯಾ ವೆಸ್ಟ್​ ಇಂಡೀಸ್ ಪ್ರವಾಸ ಅಂತ್ಯವಾಗುವ ವರೆಗೆ ಇರಲಿದೆ. 2017ರಲ್ಲಿ ಕೋಚ್ ಹುದ್ದೆಗೇರಿರುವ ರವಿಶಾಸ್ತ್ರಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಇವರು ಕೋಚ್ ಆದ ಬಳಿಕ ಭಾರತ ತಂಡದಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು, ಅನೇಕ ಪ್ರಮುಖ ಸರಣಿಗಳಲ್ಲಿ ಗೆದ್ದು ಬೀಗಿದೆ. ಹೀಗಾಗಿ ಭಾರತ ತಂಡದ ಕೋಚ್ ಆಗಿ ಶಾಸ್ತ್ರಿ ಅವರೇ ಮುಂದುವರೆಯುವುದು ಬಹುತೇಕ ಪಕ್ಕ ಆಗಿದೆ.

ಗರ್ಲ್ ಫ್ರೆಂಡ್ ಜೊತೆ ಸದ್ದಿಲ್ಲದೆ ಡೇಟಿಂಗ್ ನಡೆಸುತ್ತಿದ್ದಾರೆ ಭಾರತದ ಈ 5 ಆಟಗಾರರು!
Loading...

ಕ್ರಿಕೆಟ್ ಸಲಹಾ ಸಮಿತಿಯಲ್ಲಿ ಕಪಿಲ್ ದೇವ್ ಅಲ್ಲದೆ, ಮಾಜಿ ಆಟಗಾರ ಅಂಶುಮಾನ್ ಗಾಯಕ್ವಾಡ್ ಹಾಗೂ ಶಾಂತಾ ರಂಗ್ವಸಾಮಿ ಕೂಡ ಇದ್ದು, ಮುಂಬೈನಲ್ಲಿ ನಡೆಯಲಿರುವ ಸಂದರ್ಶನದಲ್ಲಿ ಅಂತಿಮ ತೀರ್ಮಾನ ಕೈಗೊಂಡು ಇಂದು ಸಂಜೆ ಹೆಸರು ಪ್ರಕಟಿಸಲಿದ್ದಾರೆ.

First published:August 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...