HOME » NEWS » Sports » CRICKET BCCI SUSPENDS ALL AGE GROUP TOURNAMENTS WITH EYE ON CORONAVIRUS SITUATION ZP

ಎಲ್ಲಾ ದೇಶೀಯ ಟೂರ್ನಿಗಳು ಸ್ಥಗಿತ: IPL 2021 ನಡೆಯಲಿದೆಯಾ?

ಇನ್ನು ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದ್ದು, ಹೀಗಾಗಿ ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

news18-kannada
Updated:March 17, 2021, 4:08 PM IST
ಎಲ್ಲಾ ದೇಶೀಯ ಟೂರ್ನಿಗಳು ಸ್ಥಗಿತ: IPL 2021 ನಡೆಯಲಿದೆಯಾ?
Ipl 2021
  • Share this:
ದೇಶದಲ್ಲಿ ಮತ್ತೆ ಕೋವಿಡ್-19 ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ), ವಿನೂ ಮಂಕಡ್ ಟ್ರೋಫಿ ಸೇರಿದಂತೆ ಎಲ್ಲ ದೇಶೀಯ ಕ್ರಿಕೆಟ್ ಟೂರ್ನಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಈ ಬಗ್ಗೆ ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಜಯ್ ಶಾ ರಾಜ್ಯ ಕ್ರಿಕೆಟ್ ಮಂಡಳಿಗೆ ಪತ್ರ ಬರೆದಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ಟೂರ್ನಿ ಆಯೋಜಿಸದಿರಲು ಸೂಚಿಸಲಾಗಿದೆ.

ಸದ್ಯ ದೇಶೀಯ ಪ್ರಮುಖ ಟೂರ್ನಿಗಳಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಹಾಗೂ ವಿಜಯ್ ಹಜಾರೆ ಟೂರ್ನಿಗಳು ಮುಗಿದಿದೆ. ಇದರ ಹೊರತಾಗಿಯೂ ವಿನೂ ಮಂಕಡ್ ಟ್ರೋಫಿ ಹಾಗೂ ವಯೋಮಾನದ ಕ್ರಿಕೆಟ್ ಟೂರ್ನಿಗಳು ನಡೆಯಬೇಕಿತ್ತು. ಇದೀಗ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಈ ಟೂರ್ನಿಗಳ ಆಯೋಜನೆಯನ್ನು ಮುಂದೂಡಲಾಗಿದೆ.

ಇದಾಗ್ಯೂ ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಸರಣಿ ಹಾಗೂ ಏಕದಿನ ಸರಣಿಯನ್ನು ಖಾಲಿ ಸ್ಟೇಡಿಯಂನಲ್ಲೇ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಅದರಂತೆ 4ನೇ, 5ನೇ ಟಿ20 ಪಂದ್ಯಗಳು ಅಹ್ಮದಾಬಾದ್​ನಲ್ಲಿ ನಡೆಯಲಿದೆ. ಅಲ್ಲದೆ ಏಕದಿನ ಪಂದ್ಯಗಳಿಗಾಗಿ ಭಾರತ-ಇಂಗ್ಲೆಂಡ್​ ತಂಡಗಳು ಪುಣೆಗೆ ಪ್ರಯಾಣಿಸಲಿದೆ.

IPL 2021 ನಡೆಯಲಿದೆಯಾ?
ಇನ್ನು ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದ್ದು, ಹೀಗಾಗಿ ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ, ಐಪಿಎಲ್​ನ್ನು 6 ನಗರಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಅದರಂತೆ ಖಾಲಿ ಸ್ಡೇಡಿಯಂನಲ್ಲೇ ಸಂಪೂರ್ಣ ಟೂರ್ನಿ ಆಯೋಜಿಸಲಾಗುವುದು ಎಂದು ತಿಳಿಸಿದೆ. ಆದರೀಗ ಐಪಿಎಲ್​ ಟೂರ್ನಿಗಾಗಿ ಆಯ್ಕೆ ಮಾಡಲಾದ 6 ನಗರಗಳ ಕೆಲ ನಗರಗಳಲ್ಲೂ ಕೊರೋನಾ ಪ್ರಕರಣ ಹೆಚ್ಚಾಗುತ್ತಿದ್ದು, ಹೀಗಾಗಿ ಐಪಿಎಲ್ ಟೂರ್ನಿ ಆಯೋಜನೆಯ ಯೋಜನೆಗಳು ಹೇಗೆ ಯಶಸ್ವಿಯಾಗಲಿದೆ ಎಂದು ಕಾದು ನೋಡಬೇಕಿದೆ.
Published by: zahir
First published: March 17, 2021, 4:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories