ICC T20 World Cup 2021: ಟಿ20 ವಿಶ್ವಕಪ್ ಪಂದ್ಯಗಳು ಎಲ್ಲೆಲ್ಲಿ ನಡೆಯಲಿದೆ? ಇಲ್ಲಿದೆ ಮಾಹಿತಿ

ಭಾರತ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್, ನಮೀಬಿಯಾ, ನೆದರ್ಲ್ಯಾಂಡ್ಸ್, ಒಮಾನ್, ಪಪುವಾ ನ್ಯೂಗಿನಿಯಾ ಮತ್ತು ಸ್ಕಾಟ್ಲೆಂಡ್.

ICC T20 World Cup 2021

ICC T20 World Cup 2021

  • Share this:
    2021 ರಲ್ಲಿ ಭಾರತದಲ್ಲಿ ಕ್ರಿಕೆಟ್ ಹಬ್ಬ ತುಸು ಜೋರಾಗಿಯೇ ಇರಲಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ಬಳಿಕ ಇಂಗ್ಲೆಂಡ್ ತಂಡವು ಭಾರತಕ್ಕೆ ಆಗಮಿಸಲಿದೆ. ಈ ಸರಣಿ ಮುಕ್ತಾಯದ ಬೆನ್ನಲ್ಲೇ ಐಪಿಎಲ್ 2021 ಶುರುವಾಗಲಿದೆ. ಇದಾದ ಬಳಿಕ ಮತ್ತೊಮ್ಮೆ ಚುಟುಕು ಕ್ರಿಕೆಟ್ ಕದನಕ್ಕೆ ಭಾರತದಲ್ಲಿ ಚಾಲನೆ ಸಿಗಲಿದೆ.
    ಹೌದು, 2021ರ ಅಂತಾರಾಷ್ಟ್ರೀಯ ಟಿ20 ವಿಶ್ವಕಪ್ ಆತಿಥ್ಯವನ್ನು ಭಾರತ ವಹಿಸಿಕೊಂಡಿದ್ದು, ಅಕ್ಟೋಬರ್-ನವೆಂಬರ್ ವೇಳೆ ಈ ಟೂರ್ನಿಯನ್ನು ನಡೆಸಲು ನಿರ್ಧರಿಸಲಾಗಿದೆ.

    ಒಟ್ಟು 16 ತಂಡಗಳು ಟಿ20 ವಿಶ್ವಕಪ್​ನಲ್ಲಿ ಪಾಲ್ಗೊಳ್ಳಲಿದ್ದು, 45 ಪಂದ್ಯಗಳು ನಡೆಯಲಿದೆ. ಈ ಪಂದ್ಯಗಳನ್ನು ಯಾವ ಯಾವ ಮೈದಾನದಲ್ಲಿ ಆಯೋಜಿಸಬೇಕು ಎಂಬುದರ ಸಂಭಾವ್ಯ ಪಟ್ಟಿಯೊಂದು ಬಿಸಿಸಿಐ ಸಿದ್ಧಪಡಿಸಿದೆ. ಈ ಪಟ್ಟಿಯಲ್ಲಿ ಒಟ್ಟು 8 ಪ್ರಮುಖ ಕ್ರಿಕೆಟ್ ಮೈದಾನವನ್ನು ಹೆಸರಿಸಲಾಗಿದ್ದು, ಅದರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ಕೂಡ ಇರುವುದು ವಿಶೇಷ.

    ಆದರೆ ಇದೇ ಅಂತಿಮ ಪಟ್ಟಿಯಲ್ಲ. ಈ ಬಗ್ಗೆ ಡಿಸೆಂಬರ್ 24 ರಂದು ನಡೆಯುವ ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆಯದ ರಾಜ್ಯ ಕ್ರಿಕೆಟ್ ಬೋರ್ಡ್​ಗಳು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಿಸಿಸಿಐ ಕೂಡ ಡಿ.24 ರ ಸಭೆ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ.

    2021ರ ಟಿ20ಐ ವಿಶ್ವಕಪ್‌ ನಡೆಯುವ ತಾಣಗಳು ಈ ಕೆಳಗಿನಂತಿವೆ:
    ಬೆಂಗಳೂರು
    ಅಹಮದಾಬಾದ್
    ಕೋಲ್ಕತ್ತಾ
    ಚೆನ್ನೈ
    ಮುಂಬೈ
    ದೆಹಲಿ
    ಮೊಹಾಲಿ
    ಧರ್ಮಶಾಲಾ.

    2021ರ ಟಿ20 ವಿಶ್ವಕಪ್​ನಲ್ಲಿ ಭಾಗವಹಿಸುವ ತಂಡಗಳು:
    ಭಾರತ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್, ನಮೀಬಿಯಾ, ನೆದರ್ಲ್ಯಾಂಡ್ಸ್, ಒಮಾನ್, ಪಪುವಾ ನ್ಯೂಗಿನಿಯಾ ಮತ್ತು ಸ್ಕಾಟ್ಲೆಂಡ್.
    Published by:zahir
    First published: