IPL: 2020ರ ಐಪಿಎಲ್​ನಲ್ಲಿ ಹಿಂದೆಂದೂ ಕಾಣದ ನೂತನ ನಿಯಮ: ಏನಿದು ಪವರ್ ಪ್ಲೇಯರ್?

Power Player: ಈ ರೀತಿಯ ಹೊಸ ಪ್ರಯೋಗದಿಂದ ಒಂದು ತಂಡದಲ್ಲಿ ಮಹತ್ತರ ಬದಲಾವಣೆಯಾಗುವುದು ಖಚಿತ. ಅಲ್ಲದೆ ಪಂದ್ಯದ ಗತಿಯೇ ಬದಲಾಗಬಹುದು. ಇದು ವೀಕ್ಷಕರಿಗೂ ಸಾಕಷ್ಟು ಕುತೂಹಲ ಕೆರಳಿಸುತ್ತದೆ ಎಂಬುದು ಬಿಸಿಸಿಐ ಯೋಚನೆ.

Vinay Bhat | news18-kannada
Updated:November 5, 2019, 10:37 AM IST
IPL: 2020ರ ಐಪಿಎಲ್​ನಲ್ಲಿ ಹಿಂದೆಂದೂ ಕಾಣದ ನೂತನ ನಿಯಮ: ಏನಿದು ಪವರ್ ಪ್ಲೇಯರ್?
ಆ್ಯಂಡ್ರೋ ರಸೆಲ್ ಹಾಗೂ ವಿರಾಟ್ ಕೊಹ್ಲಿ
Vinay Bhat | news18-kannada
Updated: November 5, 2019, 10:37 AM IST
ಬೆಂಗಳೂರು (ನ. 05): ವಿಶ್ವ ಕ್ರಿಕೆಟ್​ನ ರಂಗು ರಂಗಿನ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗೆ ಇನ್ನು ಕೆಲವೇ ತಿಂಗಳುಗಳಷ್ಟೆ ಬಾಕಿ ಉಳಿದಿವೆ. ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ಇದೇ ಮೊದಲ ಬಾರಿಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ಹೀಗಿರುವಾಗ 2020ರ ಐಪಿಎಲ್​ನಲ್ಲಿ ಬಿಸಿಸಿಐ ನೂತನ ಪ್ರಯೋಗಕ್ಕೆ ಮುಂದಾಗಿದೆ. ಅದೇ 'ಪವರ್ ಪ್ಲೇಯರ್'!

ಲೀಗ್​ನ ಮುಂದಿನ ಆವೃತ್ತಿಯಲ್ಲಿ ಪವರ್ ಪ್ಲೇಯರ್ ಕಾಣಿಸಿಕೊಳ್ಳಲಿದ್ದಾನಂತೆ. 2020ರ ಐಪಿಎಲ್​ನಿಂದ ಪಂದ್ಯದ ಯಾವುದೇ ಹಂತದಲ್ಲಿ ಬದಲಿ ಆಟಗಾರರನ್ನು ಆಡಿಸುವ ಹೊಸ ಯೋಜನೆ. ಇದಕ್ಕೆ ಈಗಾಗಲೇ ಮನ್ನಣೆ ಸಿಕ್ಕಿದ್ದು, ಅಂತಿಮವಾಗಿ ಚರ್ಚಿಸಿ ಮುಂಬರುವ ಸೀಸನ್​ನಿಂದಲೇ ಇದು ಜಾರಿಗೆ ಬರಲಿದೆ.

ಏನಿದು ಪವರ್ ಪ್ಲೇಯರ್?: ಈ ನೂತನ ನಿಯಮದ ಪ್ರಕಾರ ಪಂದ್ಯ ಆರಂಭಕ್ಕೂ ಮುನ್ನ ಒಂದು ತಂಡ ತನ್ನ ಆಡುವ 11 ಆಟಗಾರರ ಬಳಗದ ಬದಲು 15 ಆಟಗಾರರ ಹೆಸರನ್ನು ಸೂಚಿಸುತ್ತದೆ. ಇದರಲ್ಲಿ ಒಬ್ಬ ಆಟಗಾರನನ್ನು ವಿಕೆಟ್ ಬಿದ್ದಾಗ ಅಥವಾ ಓವರ್ ಮುಕ್ತಾಯದ ನಂತರ ಪಂದ್ಯದ ಯಾವುದೇ ಸಮಯದಲ್ಲಿ ಕಣಕ್ಕಿಳಿಸಬಹುದು.

ಯುವತಿಯಿಂದ ಸ್ಟಾರ್ ಕ್ರಿಕೆಟಿಗನ ವಿರುದ್ಧ ವಿಡಿಯೋ ಕಾಲ್​ನಲ್ಲಿ ಹಸ್ತಮೈಥುನ ಮಾಡಿದ ಆರೋಪ!

ಉದಾಹರಣೆಗೆ- ಪಂದ್ಯದ ಅಂತಿಮ ಹಂತದಲ್ಲಿ ಕೆಕೆಆರ್ ತಂಡಕ್ಕೆ ಗೆಲ್ಲಲು ಕೊನೆಯ 2 ಓವರ್​ನಲ್ಲಿ 30 ರನ್​ಗಳ ಅವಶ್ಯಕತೆ ಇರುತ್ತದೆ. ಈ ಸಂದರ್ಭ ಸ್ಫೋಟಕ ಬ್ಯಾಟ್ಸ್​ಮನ್​​ ಆ್ಯಂಡ್ರೋ ರಸೆಲ್​ಗೆ ಇನ್ನೂ ಬ್ಯಾಟಿಂಗ್ ಅವಕಾಶ ದೊರೆತಿರುವುದಿಲ್ಲ. ಅಥವಾ ಪ್ಲೇಯಿಂಗ್ 11 ರಲ್ಲಿ ಇಲ್ಲದೆ ಡಕೌಟ್​​ನಲ್ಲಿ ಕುಳಿತಿರುತ್ತಾರೆ. ಅವರು 18ನೇ ಓವರ್ ಮುಕ್ತಾಯವಾದಾಗ ಯಾರೂ ಔಟ್ ಆಗಿಲ್ಲ ಎಂದಾದರೂ ಬ್ಯಾಟಿಂಗ್ ಮಾಡಲು ಬರಬಹುದು.

ಇದೇ ನಿಯಮ ಬೌಲರ್ಸ್​ಗಳಿಗೂ ಅನ್ವಯವಾಗಲಿದೆ. ಫೀಲ್ಡಿಂಗ್ ಮಾಡುವ ತಂಡಕ್ಕೆ ಗೆಲ್ಲಲು ಕೊನೆಯ 6 ಎಸೆತದಲ್ಲಿ 10 ರನ್​ಗಳ ಅವಶ್ಯತೆ ಇರುತ್ತದೆ. ಈ ಸಂದರ್ಭ ಘಾತಕ ವೇಗಿಯನ್ನು ಬದಲಿ ಆಟಗಾರನಾಗಿ ಕಣಕ್ಕಿಳಿಸಿ, ಬೌಲಿಂಗ್ ಮಾಡಿಸಬಹುದು. ಹೀಗೆ ಬದಲಿ ಆಟಗಾರನಾಗಿ ಕೇವಲ ಒಬ್ಬ ಪ್ಲೇಯರ್ ಅಷ್ಟೇ ಕಣಕ್ಕಿಳಿಯಬಹುದು.

Happy Birthday Virat Kohli: 31ನೇ ವಸಂತಕ್ಕೆ ಕಾಲಿಟ್ಟ ವಿರಾಟ್; ಕೊಹ್ಲಿ ಟೀಂ ಇಂಡಿಯಾ ನಾಯಕನಾಗಿದ್ದೇ ಆಕಸ್ಮಿಕ!
Loading...

ಈ ರೀತಿಯ ಹೊಸ ಪ್ರಯೋಗದಿಂದ ಒಂದು ತಂಡದಲ್ಲಿ ಮಹತ್ತರ ಬದಲಾವಣೆಯಾಗುವುದು ಖಚಿತ. ಅಲ್ಲದೆ ಪಂದ್ಯದ ಗತಿಯೇ ಬದಲಾಗಬಹುದು. ಇದು ವೀಕ್ಷಕರಿಗೂ ಸಾಕಷ್ಟು ಕುತೂಹಲ ಕೆರಳಿಸುತ್ತದೆ ಎಂಬುದು ಬಿಸಿಸಿಐ ಯೋಚನೆ.

First published:November 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...