Anil Kumble- ಭಾರತ ತಂಡದ ಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ ಇಲ್ಲವಾ? ಇನ್​ಸೈಡ್ ಸ್ಟೋರಿ

Team India Cricket Coach- ವಿರಾಟ್ ಕೊಹ್ಲಿ, ಪಂಜಾಬ್ ಕಿಂಗ್ಸ್ ಇವೆಲ್ಲಾ ವಿಚಾರಗಳು ಅನಿಲ್ ಕುಂಬ್ಳೆ ಮತ್ತು ಟೀಮ್ ಇಂಡಿಯಾದ ಕೋಚ್ ಸ್ಥಾನದ ಮಧ್ಯೆ ತಡೆಗೋಡೆಗಳಾಗಿವೆ ಎಂಬುದು ಬಿಸಿಸಿಐನ ಉನ್ನತ ಮೂಲಗಳಿಂದ ತಿಳಿದುಬರುತ್ತಿರುವ ಮಾಹಿತಿಯಾಗಿದೆ.

ವಿರಾಟ್ ಕೊಹ್ಲಿ ಮತ್ತು ಅನಿಲ್ ಕುಂಬ್ಳೆ

ವಿರಾಟ್ ಕೊಹ್ಲಿ ಮತ್ತು ಅನಿಲ್ ಕುಂಬ್ಳೆ

  • Cricketnext
  • Last Updated :
  • Share this:
    ಬೆಂಗಳೂರು, ಸೆ. 28: ಟೀಮ್ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ (Ravi Shastri) ಅವರ ಅವಧಿ ಮುಗಿಯುತ್ತಿದೆ. ಕೋಚ್ ಆಗಿ ಮುಂದುವರಿಯುವ ಆಸಕ್ತಿ ರವಿಶಾಸ್ತ್ರಿಗೆ ಇಲ್ಲ. ಅವರನ್ನ ಕೋಚ್ ಆಗಿ ಮುಂದುವರಿಸುವ ಆಸಕ್ತಿ ಬಿಸಿಸಿಐಗೂ ಇಲ್ಲ. ಈ ಮಧ್ಯೆ ಅನಿಲ್ ಕುಂಬ್ಳೆ (Anil Kumble) ಅವರು ಕೋಚ್ ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದಾರೆಂಬ ಸುದ್ದಿಯೂ ಕೇಳಿಬಂದಿತ್ತು. ಅರ್ಜಿ ಸಲ್ಲಿಸುವಂತೆ ಬಿಸಿಸಿಐಯಿಂದಲೇ ಕುಂಬ್ಳೆಗೆ ಮನವಿ ಹೋಗಿತ್ತು ಎಂದು ಹೆಳಲಾಗುತ್ತಿತ್ತು. ಆದರೆ ಇದೀಗ ಬಂದಿರುವ ವರದಿ ಪ್ರಕಾರ, ಟೀಮ್ ಇಂಡಿಯಾ ಕೋಚ್ ಸ್ಥಾನಕ್ಕೆ ಬಿಸಿಸಿಐ (BCCI) ವಿದೇಶೀ ಕೋಚ್​ವೊಬ್ಬರ (Foreign Coach) ಹುಡುಕಾಟ ನಡೆಸುತ್ತಿದೆ. ಅನಿಲ್ ಕುಂಬ್ಳೆಗೂ ಕೋಚ್ ಆಗಿ ತಂಡಕ್ಕೆ ಮರಳುವ ಮನಸಿಲ್ಲ ಎಂದು ಹೇಳಲಾಗುತ್ತಿದೆ.

    ಪಂಜಾಬ್ ಕಿಂಗ್ಸ್ ತಂಡ (Punjab Kings) ಮತ್ತು ಕುಂಬ್ಳೆ ಸಾಧನೆ: ಮೂಲಗಳ ಪ್ರಕಾರ, ಅನಿಲ್ ಕುಂಬ್ಳೆ ಅವರನ್ನ ಟೀಮ್ ಇಂಡಿಯಾ ಕೋಚ್ ಸ್ಥಾನಕ್ಕೆ ಕರೆತರುವುದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಿಟ್ಟು ಉಳಿದ ಯಾರಿಗೂ ಇಷ್ಟವಿಲ್ಲ. ಇದಕ್ಕೆ ಒಂದು ಕಾರಣ ಎಂದರೆ ಈ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಿರಾಶಾದಾಯಕ ಪ್ರದರ್ಶನ. ಪಂಜಾಬ್ ತಂಡದ ಕೋಚ್ ಅನಿಲ್ ಕುಂಬ್ಳೆ. ಹೀಗಾಗಿ, ಅವರಿಗೆ ಭಾರತ ತಂಡದ ಕೋಚ್ ಸ್ಥಾನ ನೀಡಲು ಬಿಸಿಸಿಐ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರಂತೆ. “…ಕೋಚ್ ಆಗಿ ಅನಿಲ್ ಕುಂಬ್ಳೆ ಅವರ ದಾಖಲೆಯನ್ನ ನೋಡಿದರೆ ಅದು ಸಮಾಧಾನಕರ ಎನಿಸುವುದಿಲ್ಲ. ಐಪಿಎಲ್​ನಲ್ಲಿ ಕಿಂಗ್ಸ್ ಪಂಜಾಬ್ ತಂಡ ಹೇಗೆ ಆಡುತ್ತಿದೆ ನೋಡಿ” ಎಂದು ಬಿಸಿಸಿಐ ಮಂಡಳಿಯ ಉನ್ನತ ಮೂಲದ ಮಾಹಿತಿಯನ್ನ ಉಲ್ಲೇಖಿಸಿ ಐಎಎನ್​ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಅದರ ಪ್ರಕಾರ, ಅನಿಲ್ ಕುಂಬ್ಳೆ ಅಷ್ಟೇ ಅಲ್ಲ, ವಿವಿಎಸ್ ಲಕ್ಷ್ಮಣ್ ಅವರಿಗೂ ಕೋಚ್ ಸ್ಥಾನ ಸಿಗುವುದು ಅನುಮಾನ. ಆದರೆ, ಟಿ20 ವಿಶ್ವಕಪ್​ಗೆ ಇನ್ನೂ ಒಂದು ತಿಂಗಳು ಇರುವುದರಿಂದ ಏನು ಬೇಕಾದರೂ ನಿರ್ಧಾರಗಳು ಆಗಬಹುದು. ಭಾರತ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರೂ ಮುಖ್ಯ ಕೋಚ್ ಸ್ಥಾನಕ್ಕೆ ಅರ್ಜಿ ಹಾಕಲು ಯೋಜಿಸಿದ್ಧಾರಂತೆ. ಆದರೆ, ಅಂತಿಮವಾಗಿ ಫಾರೀನ್ ಕೋಚ್​ಗೆ ಬಿಸಿಸಿಐ ಮಣೆ ಹಾಕುವ ಸಾಧ್ಯತೆಯೇ ಹೆಚ್ಚು ಎನ್ನುತ್ತವೆ ವರದಿಗಳು.

    ಇದನ್ನೂ ಓದಿ: Sreesanth on Spot Fixing: ಕೊನೆಗೂ ಸ್ಪಾಟ್​​ ಫಿಕ್ಸಿಂಗ್ ಬಗ್ಗೆ ಮೌನ ಮುರಿದ ಶ್ರೀಶಾಂತ್.. ಅಂದು ಆಗಿದ್ದೇನು?

    ಅನಿಲ್ ಕುಂಬ್ಳೆಗೆ ಯಾಕೆ ನಿರಾಸಕ್ತಿ?

    ಅನಿಲ್ ಕುಂಬ್ಳೆ 2016-17ರಲ್ಲಿ ಭಾರತ ತಂಡದ ಕೋಚ್ ಆಗಿ ಕೆಲಸ ಮಾಡಿದ್ದವರು. ಆಗ ವಿರಾಟ್ ಕೊಹ್ಲಿ ಜೊತೆಗಿನ ಭಿನ್ನಾಭಿಪ್ರಾಯ ಮೊದಲಾದ ಕಾರಣದಿಂದ ಅವರು ಒಂದೇ ವರ್ಷಕ್ಕೆ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಬೇಕಾಯಿತು. ವಿರಾಟ್ ಕೊಹ್ಲಿ ಹಾಗು ಕೆಲ ಆಟಗಾರರು ಅನಿಲ್ ಕುಂಬ್ಳೆ ವಿರುದ್ಧ ಬಿಸಿಸಿಐನಲ್ಲಿ ದೂರು ನೀಡಿದ್ದರೆನ್ನಲಾಗಿದೆ. ಅನೇಕ ವಿಚಾರಗಳಲ್ಲಿ ಕ್ಯಾಪ್ಟನ್ ಮತ್ತು ಕೋಚ್ ಮಧ್ಯೆ ಭಿನ್ನಾಭಿಪ್ರಾಯಗಳಿದ್ದವು. ಆಗ ಇದ್ದ ವಿರಾಟ್ ಕೊಹ್ಲಿ ಹಾಗೂ ಇತರ ಆಟಗಾರರು ಈಗಲೂ ತಂಡದಲ್ಲಿ ಇದ್ದಾರೆ. ಈಗ ಭಾರತ ತಂಡದ ಕೋಚ್ ಆಗಿ ಮರಳಿದರೆ ಅದೇ ಆಟಗಾರರ ಜೊತೆ ಕೆಲಸ ಮಾಡಬೇಕಾಗುತ್ತದೆ ಎಂಬುದು ಅನಿಲ್ ಕುಂಬ್ಳೆ ಅವರ ಮನಸಿನಲ್ಲಿ ಹೊಯ್ದಾಡುತ್ತಿರುವ ಆಲೋಚನೆ. ಹೀಗಾಗಿ, ಅವರು ಟೀಮ್ ಇಂಡಿಯಾ ಕೋಚ್ ಆಗಲು ಸದ್ಯಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಸೌರವ್ ಗಂಗೂಲಿ ಒಬ್ಬರೇ ಮಾತ್ರ ಕುಂಬ್ಳೆಗೆ ಕೋಚ್ ಸ್ಥಾನ ದೊರಕಿಸಿಕೊಡುವ ಇರಾದೆಯಲ್ಲಿದ್ದಾರೆ. 2017ರಲ್ಲಿ ಅನಿಲ್ ಕುಂಬ್ಳೆ ಅವರನ್ನ ಕೋಚ್ ಆಗಿ ಮುಂದುವರಿಸಲು ಪ್ರಯತ್ನಿಸಿದವರಲ್ಲಿ ಸೌರವ್ ಗಂಗೂಲಿಯೂ ಒಬ್ಬರು. ಈಗಲೂ ಗಂಗೂಲಿ ಅವರ ಪ್ರಯತ್ನ ಫಲಕೊಡುವ ಸಾಧ್ಯತೆ ಇಲ್ಲ.
    Published by:Vijayasarthy SN
    First published: