ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರೋಹಿತ್ ಶರ್ಮಾ ಅವರನ್ನು 2020 ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. ಶಿಖರ್ ಧವನ್, ಇಶಾಂತ್ ಶರ್ಮಾ, ದೀಪ್ತಿ ಶರ್ಮಾ ಅವರನ್ನು ಅರ್ಜುನಾ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.
ಭಾರತದ ಸರ್ಕಾರ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ 2020ನೇ ವರ್ಷಕ್ಕೆ ಸಾಧನೆ ಮಾಡಿದ್ದ ಕ್ರೀಡಾಪಟುಗಳಿಂದ ಪ್ರಶಸ್ತಿಗೆ ಹೆಸರುಗಳನ್ನು ಆಹ್ವಾನಿಸಿತ್ತು. 2016ರ ಜನವರಿ 1 ರಿಂದ 2019ರ ಡಿಸೆಂಬರ್ 31ರವರೆಗೆ ಕಾಲಾವಧಿಯನ್ನು ನೀಡಿತ್ತು. ಅದರಂತೆ ಬಿಸಿಸಿಐ ಕ್ರಿಕೆಟಿಗರ ಹೆಸರನ್ನು ನಾಮನಿರ್ದೇಶನಗೊಳಿಸಿದೆ.
ಹಿಟ್ ಮ್ಯಾನ್ ರೋಹಿತ್ ಶರ್ಮಾ ನಿಯಮಿತ ಓವರ್ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಏಕದಿನ ಕ್ರಿಕೆಟ್ನಲ್ಲಿ ಐಸಿಸಿ ವರ್ಷದ ಕ್ರಕೆಟಿನಗಾಗಿ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲದೆ, ಐಸಿಸಿ ವಿಶ್ವಕಪ್ನಲ್ಲಿ ಐದು ಶತಕಗಳನ್ನು ಬಾರಿಸಿ ವಿಶ್ವ ದಾಖಲೆ ಬರೆದಿದ್ದರು.
ಎಡಗೈ ಬ್ಯಾಡ್ಸ್ಮನ್ ಶಿಖರ್ ಧವನ್ ಪಾದಾರ್ಪಣೆ ಪಂದ್ಯದಲ್ಲಿ ವೇಗದ ಶತಕ ಬಾರಿಸಿ ದಾಖಲೆ ಬರೆದಿದ್ದರು. ಇನ್ನು ಐಸಿಸಿ ಚಾಂಪಿಯನ್ ಟ್ರೋಫಿಯಲ್ಲಿ ಹೆಚ್ಚು ರನ್ ಗಳಿಸಿದ್ದಕ್ಕಾಗಿ ಎರಡು ಬಾರಿ ಗೋಲ್ಡನ್ ಬ್ಯಾನ್ ಪ್ರಶಸ್ತಿ ಪಡೆದುಕೊಂಡಿದ್ದರು. ಓಡಿಐನಲ್ಲಿ 2000 ಮತ್ತು 3000 ರನ್ಗಳಿಸಿದ ಭಾರತೀಯ ಮೊದಲ ಬ್ಯಾಟ್ಸ್ಮನ್ ಎಂಬ ಹಿರಿಮೆಗೆ ಶಿಖರ್ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ, 4000 ಮತ್ತು 5000ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್ಮನ್ ದಾಖಲೆಯು ಶಿಖರ್ ಧವನ್ ಹೆಸರಿನಲ್ಲಿದೆ.
ಇನ್ನು ವೇಗಿ ಇಶಾಂತ್ ಶರ್ಮಾ ಬೌಲಿಂಗ್ನಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್ ಆಡಿತ ಅತ್ಯಂತ ಕಿರಿಯ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಇಶಾಂತ್ ಶರ್ಮಾ ಹೊಂದಿದ್ದಾರೆ. ಏಷ್ಯಾ ಹೊರಗಡೆ ಅತಿ ಹೆಚ್ಚು ವಿಕೆಟ್ ಕಬಳಿಸಿ ದಾಖಲೆಯನ್ನು ಮಾಡಿದ್ದಾರೆ. ಇದನ್ನು ಪರಿಗಣಿಸಿ ಇಶಾಂತ್ ಶರ್ಮಾ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.
ಟೀಂ ಇಂಡಿಯಾದ ಮಹಿಳಾ ಆಟಗಾರ್ತಿ ದೀಪ್ತಿ ಶರ್ಮಾ ಅವರು ವಿಮೆನ್ಸ್ ಓಡಿಐನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತವನ್ನು ಗಳಿಸಿದ್ದಾರೆ. ಅಷ್ಟೇ ಅಲ್ಲದೆ ಮಹಿಳಾ ಓಡಿಐನಲ್ಲಿ 6 ವಿಕೆಟ್ ಪಡೆದ ಮಹಿಳಾ ಸ್ಪಿನ್ನರ್ ಎಂಬ ದಾಖಲೆ ದೀಪ್ತಿ ಅವರ ಮೇಲಿದೆ. ಹಾಗಾಗಿ ಬಿಸಿಸಿಐ ದೀಪ್ತಿ ಶರ್ಮಾ ಅವರ ಹೆಸರನ್ನು ನಾಮನಿರ್ದೇಶನ ಮಾಡಿದೆ.
Mitron: ಭಾರತೀಯ ಟಿಕ್ಟಾಕ್ ಎಂದೇ ಜನಪ್ರಿಯತೆ ಪಡೆದ ‘ಮಿತ್ರೋ‘ ಆ್ಯಪ್ಗೆ ಪಾಕಿಸ್ತಾನಿ ಕೋಡ್!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ