• Home
  • »
  • News
  • »
  • sports
  • »
  • Deepak Chahar: ಟಿ20ಯಲ್ಲಿ ಹ್ಯಾಟ್ರಿಕ್ ಪಡೆದ ಚಹಾರ್​​ ಹೊಗಳಲು ಹೋಗಿ ಎಡವಟ್ಟು ಮಾಡಿಕೊಂಡ ಬಿಸಿಸಿಐ

Deepak Chahar: ಟಿ20ಯಲ್ಲಿ ಹ್ಯಾಟ್ರಿಕ್ ಪಡೆದ ಚಹಾರ್​​ ಹೊಗಳಲು ಹೋಗಿ ಎಡವಟ್ಟು ಮಾಡಿಕೊಂಡ ಬಿಸಿಸಿಐ

ದೀಪಕ್​ ಚಹಾರ್​

ದೀಪಕ್​ ಚಹಾರ್​

ಬಾಂಗ್ಲಾಗೆ ಶಾಕ್​ ನೀಡಿದ್ದು ದೀಪಕ್​ ಚಹಾರ್​. ಅವರು ಎಸೆದ 3.2 ಓವರ್​ಗಳಲ್ಲಿ 7 ರನ್​ ಕೊಟ್ಟು 6 ವಿಕೆಟ್​ ಕಬಳಿಸಿದ್ದರು. ಇದನ್ನು ಶ್ಲಾಘಿಸಿ ಬಿಸಿಸಿಐ ಟ್ವೀಟ್​ ಮಾಡಿದೆ. ಈ ವೇಳೆ ಎಡವಟ್ಟು ಮಾಡಿಕೊಂಡಿದೆ.

  • Share this:

ನವದೆಹಲಿ (ನ.11): ಬಾಂಗ್ಲಾದೇಶ ವಿರುದ್ಧದ ಕೊನೆಯ ಟಿ-20 ಪಂದ್ಯದಲ್ಲಿ ಭಾರತದ ಬೌಲರ್​ ದೀಪಕ್​ ಚಹಾರ್​ ಹ್ಯಾಟ್ರಿಕ್​ ಪಡೆದಿದ್ದಾರೆ. ಅವರ ಸಾಧನೆಗೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಆದರೆ, ಅವರನ್ನು ಹೊಗಳಲು ಹೋಗಿ ಬಿಸಿಸಿಐ ಎಡವಟ್ಟು ಮಾಡಿಕೊಂಡಿದೆ.

ನಾಗ್ಪುರದಲ್ಲಿ ನಡೆದ ಬಾಂಗ್ಲಾ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿತ್ತು. ಮೊದಲು ಬ್ಯಾಟ್​ ಮಾಡಿದ್ದ ಭಾರತ ಆರಂಭಿಕ ಆಘಾತ ಎದುರಿಸಿತ್ತು. ರೋಹಿತ್​ ಶರ್ಮಾ 2 ರನ್​ಗೆ ಔಟ್​ ಆದರೆ, ಶಿಖರ್​ ದವನ್​ 19ರನ್​ಗೆ ಪೆವಿಲಿಯನ್​ ಸೇರಿದರು. ನಂತರ ಕನ್ನಡಿಗ ಕೆಎಲ್​ ರಾಹುಲ್ (52) ಹಾಗೂ ಶ್ರೇಯಸ್​ ಐಯ್ಯರ್​ (62) ಎಚ್ಚರಿಕೆಯ ಆಟವಾಡಿದರು. ಭಾರತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 174 ರನ್​ ಗಳಿಸಿತು.

ಇದನ್ನು ಬೆನ್ನತ್ತಿ ಹೊರಟ ಬಾಂಗ್ಲಾಗೆ ಶಾಕ್​ ನೀಡಿದ್ದು ದೀಪಕ್​ ಚಹಾರ್​. ಅವರು ಎಸೆದ 3.2 ಓವರ್​ಗಳಲ್ಲಿ 7 ರನ್​ ಕೊಟ್ಟು 6 ವಿಕೆಟ್​ ಕಬಳಿಸಿದ್ದರು. ಇದನ್ನು ಶ್ಲಾಘಿಸಿ ಟ್ವೀಟ್​ ಮಾಡಿರುವ ಬಿಸಿಸಿಐ ‘ಟಿ20ಯಲ್ಲಿ ಮೊದಲ ಹ್ಯಾಟ್ರಿಕ್​ ಪಡೆದ ಆಟಗಾರ ಎನ್ನುವ ಖ್ಯಾತಿಗೆ ಚಹಾರ್​ ಭಾಗಿಯಾಗಿದ್ದಾರೆ’ ಎಂದಿತ್ತು. ಇದಕ್ಕೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು.ಇದನ್ನೂ ಓದಿ: ಚಹಾರ್​ ಹ್ಯಾಟ್ರಿಕ್​, ಭಾರತದ ವಿರುದ್ಧ ಮಂಡಿಯೂರಿದ ಬಾಂಗ್ಲಾ; ಟೀಂ ಇಂಡಿಯಾಗೆ ಟಿ20 ಸರಣಿ


ಆದರೆ, ಈ ಟ್ವೀಟ್​ನಲ್ಲೊಂದು ತಪ್ಪಿದೆ. ಟಿ20ಯಲ್ಲಿ ಹ್ಯಾಟ್ರಿಕ್​ ಪಡೆದ ಭಾರತದ ಆಟಗಾರರ ಸಾಲಿನಲ್ಲಿ ದೀಪಕ್​ ಎರಡನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಮೊದಲಿಗರಾಗಿ ಏಕ್ತಾ ಬಿಷ್ಟ್​ ಇದ್ದಾರೆ. ಹೌದು, ಭಾರತದ ಮಹಿಳಾ ಕ್ರಿಕೆಟ್​ ತಂಡ ಪ್ರತಿನಿಧಿಸಿದ್ದ ಏಕ್ತಾ ಭಿಷ್ಟ್​ 7 ವರ್ಷಗಳ ಹಿಂದೆಯೇ ಹೀಗೊಂದು ಸಾಧನೆ ಮಾಡಿದ್ದರು.


2012ರಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಶ್ರೀಲಂಕಾ ವಿರುದ್ಧ ಏಕ್ತಾ ಹ್ಯಾಟ್ರಿಕ್​ ಪಡೆದಿದ್ದರು. ಹೀಗಾಗಿ ಬಿಸಿಸಿಐ ತಪ್ಪಾಗಿ ಟ್ವೀಟ್ ಮಾಡಿದೆ. ಇದನ್ನು ತಿದ್ದಿಕೊಳ್ಳಿ ಎಂದು ಕೆಲವರು ಸೂಚನೆ ನೀಡಿದ್ದಾರೆ. ಇನ್ನೂ ಕೆಲವರು ಮಹಿಳೆಯರನ್ನು ಕಡೆಗಣಿಸಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.


First published: