IPL 2020: ಐಪಿಎಲ್ ಆರಂಭ ಕುರಿತು ಮಹತ್ವದ ಮಾಹಿತಿ ತಿಳಿಸಿದ ಸೌರವ್ ಗಂಗೂಲಿ

ಖಾಲಿ ಮೈದಾನದಲ್ಲಿ ಐಪಿಎಲ್ ಪ್ಲ್ಯಾನ್‌ನತ್ತ ಮುನ್ನಡೆಯಲು ಯೋಚಿಸುತ್ತಿದ್ದೇವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

news18-kannada
Updated:June 11, 2020, 10:01 AM IST
IPL 2020: ಐಪಿಎಲ್ ಆರಂಭ ಕುರಿತು ಮಹತ್ವದ ಮಾಹಿತಿ ತಿಳಿಸಿದ ಸೌರವ್ ಗಂಗೂಲಿ
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ.
  • Share this:
ಬಹುನಿರೀಕ್ಷಿತ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನಡೆಯುತ್ತಾ ಅಥವಾ ಇಲ್ಲವಾ ಎಂಬಂಥ ಗೊಂದಲ ಆಟಗಾರರಲ್ಲಿ ಹಾಗೂ ಕ್ರಿಕೆಟ್‌ ಅಭಿಮಾನಿಗಳಲ್ಲಿ ದಿನ ಕಳೆದಂತೆ ಹೆಚ್ಚಾಗುತ್ತದೆ. ಆದರೆ, ಐಪಿಎಲ್‌ 13 ನೇ ಆವೃತ್ತಿ ಆಯೋಜನೆ ಮಾಡೇ ತೀರುತ್ತೇವೆಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಪಟ್ಟು ಹಿಡಿದಿದೆ.

ಬಿಸಿಸಿಐ ಟಿ-20 ವಿಶ್ವಕಪ್ ಕುರಿತು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನಿರ್ಧಾರಕ್ಕಾಗಿ ಕಳೆದೊಂದು ತಿಂಗಳಿನಿಂದ ಕಾಯುತ್ತಿದೆ. ಆದರೆ, ಇತ್ತ ಐಸಿಸಿ ಟಿ-20 ವಿಶ್ವಕಪ್ ನಡೆಸುವ ನಿರ್ಧಾರ ಮುಂದೂಡುತ್ತಲೇ ಇದೆ. ನಿನ್ನೆ ಕೂಡ ಈ ಕುರಿತು ನಡೆದ ಸಭೆ ಪೂರ್ಣಗೊಂಡಿಲ್ಲ. ಮುಂದಿನ ತಿಂಗಳು ಮತ್ತೆ ಸಭೆ ಸೇರಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಐಸಿಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

T20 World Cup: ಅನಿಶ್ಚಿತತೆಯಲ್ಲೇ ಉಳಿದ ಟಿ-20 ವಿಶ್ವಕಪ್ ಟೂರ್ನಿ ಭವಿಷ್ಯ; ಇನ್ನೊಂದು ತಿಂಗಳು ಸಮಯ ತೆಗೆದುಕೊಂಡ ಐಸಿಸಿ

ಐಸಿಸಿ ಈ ರೀತಿ ಮಾಡುತ್ತಿರುವ ಬೆನ್ನಲ್ಲೆ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಖಾಲಿ ಮೈದಾನದಲ್ಲಿ ಈ ವರ್ಷವೇ ನಡೆಸಲು ಚಿಂತನೆ ನಡೆಸಿದೆ. ಖಾಲಿ ಮೈದಾನದಲ್ಲಿ ಐಪಿಎಲ್ ಪ್ಲ್ಯಾನ್‌ನತ್ತ ಮುನ್ನಡೆಯಲು ಯೋಚಿಸುತ್ತಿದ್ದೇವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ರಾಜ್ಯ ಅಸೋಸಿಯೇಶನ್‌ಗಳಿಗೆ ಕಳುಹಿಸಲಾಗಿರುವ ಪತ್ರದಲ್ಲಿ, 'ಐಪಿಎಲ್ ಭವಿಷ್ಯದ ಬಗ್ಗೆ ಬಿಸಿಸಿಐ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಲಿದೆ. ಆದಾಯ ವಿಚಾರದಲ್ಲಿ ಐಪಿಎಲ್ ನಿರ್ಣಾಯಕವಾಗಿರುವುದರಿಂದ ಈ ವರ್ಷದ ಐಪಿಎಲ್ ಅನ್ನು ಖಾಲಿ ಮೈದಾನದಲ್ಲಿ ಆಯೋಜಿಸಲು ಯೋಚಿಸಲಾಗುತ್ತಿದೆ' ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬರೆದಿದ್ದಾರೆ ಎಂದು ತಿಳಿದುಬಂದಿದೆ.

'ಖಾಲಿ ಮೈದಾನಗಳಲ್ಲಿ ಐಪಿಎಲ್ ನಡೆಸುವ ಯೋಜನೆಯತ್ತ ಬಿಸಿಸಿಐ ಚಿಂತಿಸಿದೆ. ಅಭಿಮಾನಿಗಳು, ಫ್ರಾಂಚೈಸಿಗಳು, ಆಟಗಾರರು, ಪ್ರಸಾರಕರು, ಪ್ರಾಯೋಜಕರು, ಸ್ಟೇಕ್ ಹೋಲ್ಡರ್ಸ್‌ ಎಲ್ಲಾ ಈ ವರ್ಷ ಐಪಿಎಲ್ ನಡೆಯುವುದನ್ನೇ ಎದುರು ನೋಡುತ್ತಿದ್ದಾರೆ,' ಎಂದು ಗಂಗೂಲಿ ಬರೆದಿರುವ ಪತ್ರದಲ್ಲಿದೆ ಎಂದು ಬಲ್ಲ ಮೂಲ ತಿಳಿಸಿದೆ.
IPL, T20 ವಿಶ್ವಕಪ್ ಬಳಿಕ ಮತ್ತೊಂದು ಮಹತ್ವದ ಟೂರ್ನಿ ಭವಿಷ್ಯ ತೂಗುಯ್ಯಾಲೆಯಲ್ಲಿ..!

ಇನ್ನೂ ಇತ್ತೀಚೆಗಷ್ಟೆ, ಅಕ್ಟೋಬರ್-ನವೆಂಬರ್​ ಸಮಯದಲ್ಲಿ ಭಾರತದ ಹೊರಗೆ ಐಪಿಎಲ್ ನಡೆಸುವುದಾದರೆ ನಾವು ರೆಡಿ ಎಂದು ಯುಎಇ ಅಧಿಕೃತವಾಗಿ ಘೋಷಿಸಿತ್ತು. 'ಈ ಹಿಂದೆ 2014ರಲ್ಲಿ ನಾವು ಇಂಡಿಯನ್ ಪ್ರೀಮಿಯರ್ ಲೀಗ್​ನ 20 ಪಂದ್ಯಗಳಿಗೆ ಆತಿಥ್ಯವಹಿಸಿದ್ದೆವು. ಅಲ್ಲದೆ ಬಿಸಿಸಿಐ ವಹಿಸಿದ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಡೆಸಿರುವ ಅನುಭವ ನಮಗಿದೆ. ಹೀಗಾಗಿ ಈ ಬಾರಿ ಕೂಡ ಐಪಿಎಲ್ ಆಯೋಜಿಸಲು ನಾವು ಉತ್ಸುಕವಾಗಿದ್ದೇವೆ' ಎಂದು ಯುಎಇ ಕ್ರಿಕೆಟ್ ಬೋರ್ಡ್ ಕಾರ್ಯದರ್ಶಿ ಮುಬಾಶ್ಶಿರ್ ಉಸ್ಮಾನಿ ತಿಳಿಸಿದ್ದರು.
First published: June 11, 2020, 10:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading