IPL 2020: ಇದೇ ವರ್ಷ ಖಾಲಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯ; ಸಿದ್ದರಾಗಿ ಎಂದ ಸೌರವ್ ಗಂಗೂಲಿ

ಐಪಿಎಲ್ ಪಂದ್ಯಾವಳಿ ರದ್ದುಗೊಂಡಾಗಿನಿಂದಲೂ ಜಿದ್ದಿಗೆ ಬಿದ್ದಂತೆ ಆಡುತ್ತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈಗ ಇದೇ ವರ್ಷ ಐಪಿಎಲ್ ಪಂದ್ಯಾವಳಿ ಆಯೋಜಿಸಿಯೇ ತೀರಬೇಕೆಂದು ಹೊರಟಿದೆ.

Vinay Bhat | news18-kannada
Updated:June 11, 2020, 1:03 PM IST
IPL 2020: ಇದೇ ವರ್ಷ ಖಾಲಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯ; ಸಿದ್ದರಾಗಿ ಎಂದ ಸೌರವ್ ಗಂಗೂಲಿ
ಸೌರವ್ ಗಂಗೂಲಿ, ಬಿಸಿಸಿಐ ಅಧ್ಯಕ್ಷ.
  • Share this:
ನವದೆಹಲಿ (ಜೂ. 11): ಇದೇ ವರ್ಷ ಐಪಿಎಲ್ ಪಂದ್ಯಾವಳಿ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸಿದ್ದವಿದೆ ಎಂದು ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ‌ ದೇಶದ ವಿವಿಧ ರಾಜ್ಯಗಳ ಕ್ರಿಕೆಟ್ ಮಂಡಳಿಗಳಿಗೆ ಪತ್ರ ಬರೆದಿದ್ದಾರೆ.

ಟಿ-20 ಕ್ರಿಕೆಟ್ ವಿಶ್ವಕಪ್ ಹಾಗೂ 2021ರ ಮಹಿಳಾ ವಿಶ್ವಕಪ್ ಆಯೋಜನೆ ಮಾಡುವ ಬಗ್ಗೆ ಇನ್ನೂ ಒಂದು ತಿಂಗಳು ಏನನ್ನೂ ಹೇಳಲು ಸಾಧ್ಯವಿಲ್ಲ. ಕೊರೋನಾ ಪರಿಸ್ಥಿತಿ ನೋಡಿ ಪಂದ್ಯಾವಳಿ ಆಯೋಜನೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಅಕ್ಟೋಬರ್​ನಲ್ಲಿ ಟಿ-20 ವಿಶ್ವಕಪ್ ನಡೆಯುತ್ತದೆ ಎಂಬುದು ವದಂತಿ ಮಾತ್ರ. ಟಿ-20 ವಿಶ್ವಕಪ್ ಅನ್ನು ಮುಂದೂಡಲಾಗಿದೆ ಎಂದು ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಸ್ಪಷ್ಟೀಕರಣ ನೀಡಿದ ಬೆನ್ನಲ್ಲೇ ಸೌರವ್ ಗಂಗೂಲಿ ದೇಶಿಯ ಕ್ರಿಕೆಟ್ ಸಂಸ್ಥೆಗಳಿಗೆ ಪತ್ರ ಬರೆದಿದ್ದಾರೆ.

IPL 2020: ಐಪಿಎಲ್ ಆರಂಭ ಕುರಿತು ಮಹತ್ವದ ಮಾಹಿತಿ ತಿಳಿಸಿದ ಸೌರವ್ ಗಂಗೂಲಿ

ಇದಕ್ಕೂ ಮೊದಲು ಟಿ-20 ಕ್ರಿಕೆಟ್ ವಿಶ್ವಕಪ್ ಹಾಗೂ 2021ರ ಮಹಿಳಾ ವಿಶ್ವಕಪ್ ಆಯೋಜನೆ ಮಾಡುವ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಐಸಿಸಿ ಅನ್ನು ಒತ್ತಾಯಿಸಿತ್ತು. ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಸ್ಪಷ್ಟೀಕರಣದ ಬಳಿಕ ಬಿಸಿಸಿಐ ಈಗ ದೇಶಿಯ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ ಎಂದು ಹೇಳಲಾಗುತ್ತಿದೆ.

ಮಾರ್ಚ್ 29ರಿಂದ ನಡೆಯಬೇಕಿದ್ದ ಐಪಿಎಲ್ ಪಂದ್ಯಾವಳಿಯನ್ನು ಆಗಲೇ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರೀ ಪ್ರಯತ್ನ ಪಟ್ಟಿತ್ತು.‌ ದೊಡ್ಡ ಮಟ್ಟದ ಲಾಬಿಯನ್ನೂ ನಡೆಸಿತ್ತು. ಆದರೆ ದೇಶ ಸಂಕಷ್ಟದಲ್ಲಿದ್ದಾಗಲೂ ಐಪಿಎಲ್ ಪಂದ್ಯಾವಳಿ ನಡೆಸಲು ಪ್ರಯತ್ನಿಸಿದ ಬಿಸಿಸಿಐ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಮಾರ್ಚ್ 24ರ ಮಧ್ಯರಾತ್ರಿಯಿಂದಲೇ ದೇಶಾದ್ಯಂತ ಲಾಕ್​ಡೌನ್​ ಅನ್ನು ಕೂಡ ಜಾರಿಗೊಳಿಸಲಾಗಿತ್ತು. ಇದರಿಂದ ಅನ್ಯ ಮಾರ್ಗವಿಲ್ಲದೆ ಐಪಿಎಲ್ ಪಂದ್ಯಾವಳಿಯನ್ನು ರದ್ದುಗೊಳಿಸಲಾಗಿತ್ತು‌.

ಐಪಿಎಲ್ ಪಂದ್ಯಾವಳಿ ರದ್ದುಗೊಂಡಾಗಿನಿಂದಲೂ ಜಿದ್ದಿಗೆ ಬಿದ್ದಂತೆ ಆಡುತ್ತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈಗ ಇದೇ ವರ್ಷ ಐಪಿಎಲ್ ಪಂದ್ಯಾವಳಿ ಆಯೋಜಿಸಿಯೇ ತೀರಬೇಕೆಂದು ಹೊರಟಿದೆ. ಇದೇ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ‌ ದೇಶದ ವಿವಿಧ ರಾಜ್ಯಗಳ ಕ್ರಿಕೆಟ್ ಮಂಡಳಿಗಳಿಗೆ ಪತ್ರ ಬರೆದಿದ್ದಾರೆ.

T20 World Cup: ಅನಿಶ್ಚಿತತೆಯಲ್ಲೇ ಉಳಿದ ಟಿ-20 ವಿಶ್ವಕಪ್ ಟೂರ್ನಿ ಭವಿಷ್ಯ; ಇನ್ನೊಂದು ತಿಂಗಳು ಸಮಯ ತೆಗೆದುಕೊಂಡ ಐಸಿಸಿ

ಇದೇ ವರ್ಷದ ಪಂದ್ಯಾವಳಿ ನಡೆಸಬೇಕೆಂಬುದು ಬಿಸಿಸಿಐ ನಿಲುವಾಗಿದೆ. ಫ್ರಾಂಚೈಸಿಗಳು, ಕ್ರಿಕೆಟ್ ಅಭಿಮಾನಿಗಳು , ಪ್ರಾಯೋಜಕರು, ಪ್ರಸಾರದಾರರು ಮತ್ತು ಆಟಗಾರರು ಕೂಡ ಪಂದ್ಯಾವಳಿಯನ್ನು ಎದುರು ನೋಡುತ್ತಿದ್ದಾರೆ. ಈ‌ ಹಿನ್ನೆಲೆಯಲ್ಲಿ ಖಾಲಿ ಕ್ರೀಡಾಂಗಣದಲ್ಲಿಯಾದರೂ ಸರಿ ಪಂದ್ಯಾವಳಿ ನಡೆಸಲು ಚಿಂತಿಸಲಾಗುತ್ತಿದೆ. ಬೇರೆ ಮಾರ್ಗಗಳನ್ನು ಹುಡುಕಲಾಗುತ್ತಿದೆ ಎಂದು ವಿವಿಧ ಕ್ರಿಕೆಟ್ ಸಂಸ್ಥೆಗಳಿಗೆ ಬರೆದ ಪತ್ರದಲ್ಲಿ ಸೌರವ್ ಗಂಗೂಲಿ ತಿಳಿಸಿದ್ದಾರೆ.
First published: June 11, 2020, 1:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading